ಮುಸ್ಲಿಂ ಹಾಸ್ಟೆಲ್ನ 86ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಕ್ಫ್ ಬೋರ್ಡ್ನ ರಾಜ್ಯ ಸದಸ್ಯ ಅನ್ವರ್ ಬಾಷ ಸದಾಶಯ
ದಾವಣಗೆರೆ, ಮಾ.20- ರಾಜ್ಯದಲ್ಲಿ ಮೈಸೂರಿನ ಮುಸ್ಲಿಂ ಹಾಸ್ಟೆಲ್ ಮೊದಲ ಸ್ಥಾನದಲ್ಲಿದ್ದರೆ, ದಾವಣಗೆರೆಯ ಮುಸ್ಲಿಂ ಹಾಸ್ಟೆಲ್ 2ನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ದಾವಣಗೆರೆ ಮುಸ್ಲಿಂ ಹಾಸ್ಟೆಲ್ ಮೊದಲ ಸ್ಥಾನ ಪಡೆಯಲಿ ಎಂದು ವಕ್ಫ್ ಬೋರ್ಡ್ ನ ರಾಜ್ಯ ಸದಸ್ಯ ಅನ್ವರ್ ಬಾಷ ಸದಾಶಯ ವ್ಯಕ್ತಪಡಿಸಿದರು.
ಅವರು, ಇಂದು ಸಂಜೆ ನಗರದ ಪಿ.ಜೆ. ಬಡಾವಣೆಯಲ್ಲಿರುವ ಮುಸ್ಲಿಂ ಎಜುಕೇಷನ್ ಫಂಡ್ ಅಸೋಸಿಯೇಷನ್ ನ ಮುಸ್ಲಿಂ ಹಾಸ್ಟೆಲ್ ಆವರಣದಲ್ಲಿ ಹಾಸ್ಟೆಲ್ ನ 86ನೇ ವಾರ್ಷಿಕೋತ್ಸವ, ನೂತನ ಗ್ರಂಥಾಲಯ ಕಟ್ಟಡ ಮತ್ತು ಆಡಳಿತ ಕಚೇರಿಯ ಉದ್ಘಾ ಟನಾ ಸಮಾರಂಭದಲ್ಲಿ ಮುಖ್ಯ ಅತಿಥಿ ಗಳಾಗಿ ಪಾಲ್ಗೊಂಡು ಮಾತನಾಡಿದರು.
ಜಿಲ್ಲೆಯಿಂದ ನೀವು ಸಮಾಜದ ವಿದ್ಯಾರ್ಥಿ ಗಳ ಶೈಕ್ಷಣಿಕ ಪ್ರಗತಿಗೆ, ಸಮಾಜದ ಯಾವುದೇ ಕಾರ್ಯಕ್ರಮಗಳ ಆಯೋಜಿಸಿ ದರೂ ನಾನು ಸಹಕಾರ ನೀಡುವೆ. ಯಾವ ಸಂದರ್ಭದಲ್ಲಾದರೂ ಕರ್ತವ್ಯ ನಿಷ್ಠೆಯಿಂದ ಕೆಲಸ ಮಾಡಲು ಸಿದ್ಧನಿದ್ದೇನೆಂದರು.
ಹಾಸ್ಟೆಲ್ ನ ಪ್ರತಿ ಲೆಕ್ಕಾಚಾರವೂ ಅಚ್ಚು ಕಟ್ಟಾಗಿರಲಿ. ಒಂದು ರೂಪಾಯಿ ಖರ್ಚು ಮಾಡಿದರೂ ಅದು ಪಕ್ಕಾ ಇರಬೇಕು. ಲೆಕ್ಕಚಾರ ಸರಿಯಾಗಿಟ್ಟುಕೊಂಡು ಆಯವ್ಯಯ ದಲ್ಲಿ ಆಡಿಟ್ ಮಾಡಿಸಿದರೆ ಅದು ಮುಂದೆ ಯಾವುದೇ ತೊಂದರೆಗಳು ಸಂಭವಿಸುವುದಿ ಲ್ಲ. ಅಲ್ಲದೇ ನಿಮಗೇ ಗೌರವವೂ ಸಿಗಲಿದೆ. ನಿಮ್ಮ ಆಡಳಿತವೂ ಸುಗಮವಾಗಿ ಸಾಗಲು ಅನುಕೂಲ ವಾಗಲಿದೆ. 1914ರ ಲೀಸ್ ರೂಲ್ಸ್ ಪ್ರಕಾರ ಅಗ್ರಿಮೆಂಟ್ ಮಾಡಿಸಿ ಕೊಳ್ಳಿ. ಆಗ ಅದು ಲೆಕ್ಕಾಚಾರಕ್ಕೂ ಪೂರಕ ವಾಗಲಿದೆ ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಮಾತನಾಡಿ, ಪ್ರತಿಯೊಬ್ಬ ಮಕ್ಕಳಲ್ಲೂ ಪ್ರತಿಭೆ, ಬುದ್ಧಿ ವಂತಿಕೆ ಅಡಗಿರಲಿದ್ದು, ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಪೋಷಕರು ಗುರುತಿಸಬೇಕು. ನಮ್ಮಿಂದ ಸಾಧ್ಯವಾದಷ್ಟು ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಿದಾಗ ನಮ್ಮ ಮರಣದ ನಂತರವೂ ಹೆಸರು ಚಿರವಾಗಿ ಉಳಿಯಲಿದೆ ಎಂದರು.
ನೂತನ ಗ್ರಂಥಾಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದ ಮಾಜಿ ಎಂಎಲ್ ಸಿ ಅಬ್ದುಲ್ ಜಬ್ಬಾರ್, ಸಮಾಜದ ಇಂತಹ ಅಭಿವೃದ್ಧಿ ಚಟುವಟಿಕೆಗಳ ಯಶಸ್ವಿಗೆ ಸಮಾಜದ ಬಾಂಧವರು ಪಾಲ್ಗೊಳ್ಳುವಿಕೆ, ಪ್ರೋತ್ಸಾಹ ಬಹಳ ಮುಖ್ಯವಾಗಲಿದೆ. ಈ ಹಾಸ್ಟೆಲ್ ನಲ್ಲಿ ವಿದ್ಯೆ ಕಲಿತು ಉನ್ನತ ಸ್ಥಾನ ಪಡೆದ ಮೇಲೆ ತಮ್ಮಂತೆಯೇ ಇತರೆ ವಿದ್ಯಾರ್ಥಿಗಳು ಸಹ ವಿದ್ಯೆ ಕಲಿತು ಭವಿಷ್ಯ ರೂಪಿಸಿಕೊಳ್ಳುವಂತಾಗಲು ಉತ್ತಮ ಕೊಡುಗೆ ನೀಡಲು ಮುಂದಾಗಬೇಕು. ಇಲ್ಲಿ ವಿದ್ಯೆ ಕಲಿತದ್ದನ್ನು ಮರೆಯಬಾರದೆಂದರು.
ಮುಖಂಡ ಸೈಯದ್ ಸೈಫುಲ್ಲಾ ಮಾತನಾಡಿ, ಸಮಾಜದ ಯುವ ಸಮೂಹವು ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸುವತ್ತ ಆಸಕ್ತಿ ತೋರಬೇಕೆಂದರು.
ಸಮಾರಂಭದಲ್ಲಿ ಪಾಲ್ಗೊಂಡ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಹಾಸ್ಟೆಲ್ನ ಆಡಳಿತ ಕಚೇರಿ ಉದ್ಘಾಟಿಸಿದರು.
ಇದೇ ವೇಳೆ ಹಾಸ್ಟೆಲ್ ಗೆ ಜಾಗವನ್ನು ದಾನವಾಗಿ ನೀಡಿದ ದಾನಿಗಳೂ ಆದ ಹಾಸ್ಟೆಲ್ ನ ಸಂಸ್ಥಾಪಕ ಅಬ್ದುಲ್ ಅಜೀಜ್ ಸಾಹೇಬ್ ಅವರ ಕುಟುಂಬದ ಸದಸ್ಯರಿ ಬ್ಬರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಮುಸ್ಲಿಂ ಹಾಸ್ಟೆಲ್ ನ ಅಧ್ಯಕ್ಷ ಬಾಷಾ ಪೈಲ್ವಾನ್ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯ ಕಬೀರ್ ಅಹ್ಮದ್, ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಸಿರಾಜ್ ಅಹಮ್ಮದ್, ಮುಖಂಡರುಗಳಾದ ಸಾಧಿಕ್ ಪೈಲ್ವಾನ್, ನಸೀರ್ ಅಹಮ್ಮದ್, ಚಮನ್ ಸಾಬ್, ಜೆ. ಅಮಾನುಲ್ಲಾ ಖಾನ್, ಟಾರ್ಗೇಟ್ ಅಸ್ಲಾಂ, ಎಸ್.ಹೆಚ್. ಅನ್ವರ್ ಸಾಬ್ ಸೇರಿದಂತೆ ಇತರರು ಇದ್ದರು.