ಎರಡನೇ ಅಲೆ ಇನ್ನೂ ಮುಗಿದೇ ಇಲ್ಲ

ಮೂರನೇ ಅಲೆ ಇನ್ನೂ ಬಂದಿಲ್ಲ ಎಂದ ಪರಿಣಿತರು

ನವದೆಹಲಿ ಆ. 4 – ದೇಶದಲ್ಲಿ ಹೊಸ ಕೊರೊನಾ ಪ್ರಕರಣಗಳು ಹೆಚ್ಚಾ ಗುತ್ತಿರುವ ಹಾಗೂ ಸೋಂಕು ಹರಡುವ ವೇಗ ಹೆಚ್ಚಾಗುತ್ತಿರುವ ಬಗ್ಗೆ ತಜ್ಞ ಪರಿಣಿ ತರು ಕಳವಳ ವ್ಯಕ್ತಪಡಿಸಿದ್ದಾ ರಾದರೂ, ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಜನರು ಮಾಸ್ಕ್ ಧರಿಸಬೇಕು ಹಾಗೂ ಲಸಿಕೆ ಪಡೆಯಬೇಕು. ದೇಶದಲ್ಲಿ ಹೊಸ ಕೊರೊನಾ ಅಲೆ ಬಂದಿದೆ ಎಂದು ಈಗಲೇ ಹೇಳುವುದು ಅವಸರವಾಗುತ್ತದೆ ಎಂದಿದ್ದಾರೆ. ಪ್ರಸಕ್ತ ಎರಡನೇ ಕೊರೊನಾ ಅಲೆಯೇ ಇನ್ನೂ ಮುಗಿದಿಲ್ಲ. ಈಶಾನ್ಯ ದಲ್ಲಿ ಕೊರೊನಾ ಪ್ರಕರಣಗಳ ಮಟ್ಟ ಇನ್ನೂ ಕಡಿಮೆಯಾಗಿಲ್ಲ ಎಂದು ಹರಿ ಯಾಣದ ಅಶೋಕ ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ಪ್ರೊ. ಗೌತಮ್ ಮೆನನ್ ಹೇಳಿದ್ದಾರೆ.

ಹೀಗಾಗಿ ಪ್ರಸಕ್ತ ಕೊರೊನಾದ ಎರಡನೇ ಅಲೆಯೇ ಮುಂದುವರೆದಿದೆ ಎನ್ನಬಹುದೇ ಹೊರತು, ಹೊಸ ಅಲೆ ಬಂದಿದೆ ಎಂದು ಹೇಳಲಾಗದು. ಎರಡು ಅಲೆಗಳ ನಡುವೆ ಸಾಕಷ್ಟು ವ್ಯತ್ಯಾಸ ಇರುತ್ತದೆ ಎಂದವರು ತಿಳಿಸಿದ್ದಾರೆ.

ದೇಶದಲ್ಲಿ ಕೊರೊನಾ ಪರಿಸ್ಥಿತಿ ನಿಯಂತ್ರಣದಲ್ಲಿರುವಂತಿದೆ. ಆದರೆ, 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಳೆದ ವಾರ ಸೋಂಕು ಹೆಚ್ಚಾಗಿದೆ. ದೇಶದಲ್ಲಿ ಒಟ್ಟು ಪತ್ತೆಯಾಗುತ್ತಿರುವ ಪ್ರಕರಣಗಳಲ್ಲಿ ಅರ್ಧದಷ್ಟು ಕೇರಳದವಾಗಿವೆ.

ಕಳೆದ ವಾರ ಕೇರಳದಲ್ಲಿ 1.4 ಲಕ್ಷ ಹೊಸ ಕೊರೊನಾ ಸೋಂಕಿತರು ಕಂಡು ಬಂದಿದ್ದಾರೆ. ಅದಕ್ಕೂ ಹಿಂದಿನ ವಾರದಲ್ಲಿ 1.2 ಲಕ್ಷದಷ್ಟು ಸೋಂಕಿತರು ಕಂಡು ಬಂದಿದ್ದರು.

ಆಗಸ್ಟ್ 1ರಂದು ಅಂತ್ಯಗೊಂಡ ವಾರದಲ್ಲಿ ದೆಹಲಿ, ಹಿಮಾಚಲ ಪ್ರದೇಶ, ಉತ್ತರಾಖಂಡ, ಮಿಜೋರಾಂ, ಜಮ್ಮು ಮತ್ತು ಕಾಶ್ಮೀರ, ಸಿಕ್ಕಿಂ ಹಾಗೂ ಕರ್ನಾಟಕಗಳಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿತ್ತು.

ಕೊರೊನಾ ಹರಡುವ ವೇಗವನ್ನು ಸೂಚಿಸುವ ಆರ್ – ಮೌಲ್ಯ ಸಹ ಹೆಚ್ಚಾಗುತ್ತಿದೆ. ಮೇ 7ರ ನಂತರ ಮೊದಲ ಬಾರಿಗೆ ಆರ್ – ಮೌಲ್ಯ 1ಕ್ಕಿಂತ ಹೆಚ್ಚಾಗಿದೆ ಎಂದು ಚೆನ್ನೈನ ಇನ್‌ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸಸ್ ವರದಿ ತಿಳಿಸಿದೆ.

ಕೇರಳವಷ್ಟೇ ಅಲ್ಲದೇ, ಚೆನ್ನೈ, ಕೊಲ್ಕೊತಾ, ಬೆಂಗಳೂರು ಹಾಗೂ ದೆಹಲಿಗಳಂತಹ ನಗರಗಳಲ್ಲೂ ಆರ್ ಮೌಲ್ಯ 1ಕ್ಕಿಂತ ಹೆಚ್ಚಾಗಿದೆ. ಇದು ಸಕ್ರಿಯ ಸೋಂಕಿತರ ಸಂಖ್ಯೆ ವಿವಿಧೆಡೆ ಹೆಚ್ಚಾಗುತ್ತಿರುವುದನ್ನು ತೋರಿಸುತ್ತದೆ ಎಂದು ಇನ್‌ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸಸ್‌ನ ಸಿತಾಬ್ರ ಸಿನ್ಹ ಹೇಳಿದ್ದಾರೆ.

ಕೊರೊನಾದ ಮೂರನೇ ಅಲೆ ಆರಂಭವಾಗಿದೆ ಎಂದು ಈಗಲೇ ಹೇಳುವುದು ತಪ್ಪಾಗುತ್ತದೆ. ಆದರೆ, ಸೋಂಕು ಹೆಚ್ಚಾಗುತ್ತಿರುವುದು ಕಳವಳಕಾರಿ ಎಂದು ವಿಜ್ಞಾನಿ ಗೌತಮ್ ಮೆನನ್ ಹೇಳಿದ್ದಾರೆ.

ಕೊರೊನಾ ಪ್ರಕರಣಗಳು ಹೆಚ್ಚಾಗುತ್ತವೆ ಎಂಬುದನ್ನು ಪರಿಗಣಿಸಲು ಮುಂದಿನ ವಾರಗಳು ಪ್ರಮುಖವಾಗಿವೆ. ಪ್ರಸಕ್ತ ಸೋಂಕು ದಕ್ಷಿಣ ಹಾಗೂ ಈಶಾನ್ಯ ರಾಜ್ಯಗಳಿಗೆ ಸೀಮಿತವಾಗಿದೆ. ಇದು ದೇಶದ ಇತರೆ ಭಾಗಗಳಿಗೆ ಹರಡುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ ಎಂದವರು ತಿಳಿಸಿದ್ದಾರೆ.

ಮೂರನೇ ಅಲೆ ಆರಂಭವಾಗಿದೆ ಎಂದು ಈಗಲೇ ಹೇಳುವುದು ಸೂಕ್ತವಾಗದು. ಕಳೆದ ವಾರಕ್ಕೆ ಹೋಲಿಸಿದರೆ, ಈ ವಾರ ಕಂಡು ಬಂದ ಸೋಂಕಿತರ ಸಂಖ್ಯೆ ಯಥಾಸ್ಥಿತಿಯಲ್ಲಿದೆ. ರಾಷ್ಟ್ರೀಯ ಸರಾಸರಿಯಲ್ಲಿ ಬದಲಾವಣೆಯಾಗಿಲ್ಲ ಎಂದು ದೆಹಲಿಯ ಶಿವ ನಾಡರ್ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ನ್ಯಾಚುರಲ್ ಸೈನ್ಸಸ್‌ನ ಡೀನ್ ಸಂಜೀವ್ ಗಲಂಡೆ ಹೇಳಿದ್ದಾರೆ.

ಪ್ರಸಕ್ತ 40 ಸಾವಿರದವರೆಗೆ ಕೊರೊನಾ ಸೋಂಕಿತರು ಕಂಡು ಬರುತ್ತಿದ್ದಾರೆ. ಇಷ್ಟಾದರೂ, ಮೇ ತಿಂಗಳಿಗೆ ಹೋಲಿಸಿದರೆ ಇದು ಸಾಕಷ್ಟು ಕಡಿಮೆ ಪ್ರಕರಣವಾಗಿದೆ ಎಂದವರು ತಿಳಿಸಿದ್ದಾರೆ.

error: Content is protected !!