ದಾವಣಗೆರೆ, ಜು.14- ಮುಂದುವರಿದ ಸಂಪೂರ್ಣ ಲಾಕ್‌ಡೌನ್ ನಡುವೆ ಸೋಮವಾರ ಬೆಳಿಗ್ಗೆ 6 ರಿಂದ 12ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಜಿಟಿ ಜಿಟಿ ಮಳೆಯ ನಡುವೆಯೇ ಜನತೆ ನಿರಾತಂಕವಾಗಿ ಕೊಡು-ಕೊಳ್ಳುವಿಕೆಯಲ್ಲಿ ಮಗ್ನರಾಗಿದ್ದರು. ವಾಹನಗಳ ಸಂಚಾರ ಮಧ್ಯಾಹ್ನ 12 ಗಂಟೆವರೆಗೆ ಹೆಚ್ಚಾಗಿಯೇ ಇತ್ತು. ನಗರ ಪ್ರದೇಶದಲ್ಲೂ ಸಹ ದಿನಸಿ ಅಂಗಡಿಗಳು ತೆರೆಯಲ್ಪಟ್ಟಿದ್ದವು. ಗ್ರಾಹಕರು ಸಮಾಧಾನದಿಂದಲೇ ಖರೀದಿಯಲ್ಲಿ ನಿರತರಾಗಿದ್ದರು. ಬಹುತೇಕ ಕಡೆ ಸಲೂನ್‌ಗಳು ತೆರೆಯಲ್ಟಟ್ಟಿದ್ದವು. ಬುಧವಾರ ಹಾಗೂ ಶುಕ್ರವಾರ ಮತ್ತೆ ಖರೀದಿಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.
December 23, 2024