ನ್ಯಾಯವಾದಿ ಅರುಣ್
ದಾವಣಗೆರೆ, ಜೂ.14- ಹಸಿವು ಯಾವುದೇ ಧರ್ಮ, ಜಾತಿ, ವರ್ಗಕ್ಕೆ ಸೀಮಿತವಾಗಿಲ್ಲ. ಕೊರೊನಾದಂತಹ ಸಂದರ್ಭದಲ್ಲಿ ಹಸಿದವರ ನೆರವಿಗೆ ಬಂದವರೇ ನಿಜವಾದ ದೇವತಾ ಮೂರ್ತಿಗಳು. ಅನ್ನ ನೀಡುವುದೇ ನಿಜವಾದ ಧರ್ಮ ಎಂದು ಹಿರಿಯ ನ್ಯಾಯ ವಾದಿ ಎಲ್.ಹೆಚ್.ಅರುಣ್ ಕುಮಾರ್ ಅಭಿಪ್ರಾಯಪಟ್ಟರು.
ನಗರದ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಕಚೇರಿಯ ಮುಂಭಾಗದಲ್ಲಿ ಶ್ರೀ ದುರ್ಗಾಶಕ್ತಿ ಮಹಿಳಾ ಸಂಘದ ದಮನಿತ ಮಹಿಳೆಯರಿಗೆ ದಿನಸಿ ಕಿಟ್ ವಿತರಿಸಿ ಅವರು ಮಾತನಾಡಿದರು.
ಎಲ್ಲಾ ಧರ್ಮಗಳ ತಿರುಳು ಕೂಡ ಹಸಿದವರಿಗೆ ನೆರವಾಗು ವುದು. ಇಂತಹ ಸಂಕಷ್ಟದ ಸಂದರ್ಭದಲ್ಲಿ ಹಸಿದವರಿಗೆ ನೆರವಾಗುವ ಕಾಳಜಿ ಇರುವ ಮನಸ್ಸುಗಳು ಬೇಕು. ನಾವುಗಳು ಜಾತಿ, ಧರ್ಮ, ವರ್ಗ ನೋಡದೇ ಸಂಕಷ್ಟದಲ್ಲಿರುವ ಎಲ್ಲರಿಗೂ ನೆರವು ನೀಡಬೇಕೆಂದು ಹೇಳಿದರು.
ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷರಾದ ಜಬೀನಾ ಖಾನಂ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಎಂ.ವೈ.ಸತೀಶ್, ಶ್ರೀ ದುರ್ಗಾಶಕ್ತಿ ಮಹಿಳಾ ಸಂಘದ ಅಧ್ಯಕ್ಷೆ ಎಸ್.ಟಿ.ಮಂಜುಳಾ, ಆಪ್ತ ಸಮಾಲೋಚಕ ಗುರು ಸವಣೂರು, ನೆರಳು ಬೀಡಿ ಕಾರ್ಮಿಕರ ಯೂನಿಯನ್ ಪದಾಧಿಕಾರಿಗಳಾದ ಜಬೀವುಲ್ಲಾ ಖಾನ್, ಅನ್ವರ್ ಖಾನ್, ಶಕುಂತಲಾ ಸೇರಿದಂತೆ ಇತರರು ಇದ್ದರು.