ಹಳ್ಳಿಗಳಲ್ಲಿ ಕೋವಿಡ್ ಟೆಸ್ಟ್ ಹೆಚ್ಚಳ: ಪಾಸಿಟಿವಿಟಿ ಇಳಿಕೆ

ಹರಿಹರ ತಾಲ್ಲೂಕಿನಲ್ಲಿ 605 ಜನರಿಗೆ ಟೆಸ್ಟ್

ಮಲೇಬೆನ್ನೂರು, ಜೂ.10- ಗ್ರಾಮೀಣ ಪ್ರದೇಶದಲ್ಲಿ ಹೆಮ್ಮಾರಿ ಕೊರೊನಾ ಸೋಂಕಿಗೆ ಕಡಿವಾಣ ಹಾಕುವ ಉದ್ದೇಶದಿಂದ ಬಹುತೇಕ ಹಳ್ಳಿಗಳಲ್ಲಿ ಈಗಾಗಲೇ ಮೊದಲ ಹಾಗೂ ದ್ವಿತೀಯ ಸುತ್ತಿನಲ್ಲಿ ಕೋವಿಡ್ ಲಸಿಕೆಯನ್ನು ಹಾಕಲಾಗುತ್ತಿದ್ದು, ಅದೇ ರೀತಿ ಸೋಂಕು ನಿಯಂತ್ರಣಕ್ಕಾಗಿ ಟೆಸ್ಟ್‌ಗಳನ್ನು ಸಹ ಹೆಚ್ಚಿಸಲಾಗಿದೆ.

ಹಳ್ಳಿಗಳಲ್ಲಿ ಕಳೆದ ಒಂದು ವಾರದಿಂದ ಟೆಸ್ಟ್‌ಗಳನ್ನು ತೀವ್ರಗೊಳಿಸಿರುವ ಆರೋಗ್ಯ ಇಲಾಖೆ, ಗುರುವಾರ ಕೂಡಾ ಹರಿಹರ ತಾಲ್ಲೂಕಿನಲ್ಲಿ 605 ಜನರಿಗೆ ಕೋವಿಡ್ ಟೆಸ್ಟ್ ಮಾಡಿದೆ.

ಕುಂಬಳೂರಿನಲ್ಲಿ 100, ಕುಣೆಬೆಳಕೆರೆಯಲ್ಲಿ 86, ಕೊಕ್ಕನೂರಿನಲ್ಲಿ 107, ಮಲೇಬೆನ್ನೂರಿನಲ್ಲಿ 40 ಮತ್ತು ಕೆ. ಬೇವಿನಹಳ್ಳಿಯಲ್ಲಿ 125 ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ ಎಂದು ಉಪತಹಶೀಲ್ದಾರ್ ಆರ್. ರವಿ ತಿಳಿಸಿದ್ದಾರೆ.

ಕುಂಬಳೂರಿನಲ್ಲಿ ಕೋವಿಡ್ ಟೆಸ್ಟ್‌ ಮಾಡಿಸುವಂತೆ ಜನರನ್ನು ಮನವೊಲಿಸಲು ಗ್ರಾ.ಪಂ. ಅಧ್ಯಕ್ಷೆ ಲೀಲಾ ಶಿವಕುಮಾರ್, ಉಪಾಧ್ಯಕ್ಷ ಹನುಮಂತಪ್ಪ, ಸದಸ್ಯರಾದ ಎನ್. ಕಲ್ಲೇಶ್, ನಾಗೇಂ ದ್ರಪ್ಪ, ಮಧು, ಆನಂದಪ್ಪ, ಪಿಡಿಒ ಮೂರ್ತಿ, ಗ್ರಾಮ ಲೆಕ್ಕಾಧಿಕಾರಿ ಶ್ರೀಧರ್ ಮೂರ್ತಿ, ಗ್ರಾ.ಪಂ. ಕಾರ್ಯ ದರ್ಶಿ ಸೋಮಣ್ಣ ಹಾಗೂ ಸಿಬ್ಬಂದಿ, ಆಶಾ, ಅಂಗನ ವಾಡಿ ಕಾರ್ಯಕರ್ತೆಯರು ಶ್ರಮ ವಹಿಸಿದರು.

ಹರಿಹರ ಸಾರ್ವಜನಿಕ ಆಸ್ಪತ್ರೆ, ಮಲೇ ಬೆನ್ನೂರು ಸಮುದಾಯ ಆರೋಗ್ಯ ಕೇಂದ್ರ, ಹರ್ಲಾ ಪುರ, ಬೆಂಕಿನಗರ, ಕೊಂಡಜ್ಜಿ, ದೇವರಬೆಳಕೆರೆ, ಭಾನುವಳ್ಳಿ, ಬೆಳ್ಳೂಡಿ, ಹೊಳೆಸಿರಿಗೆರೆ, ಬಿಳಸ ನೂರು, ನಂದಿಗುಡಿ, ಉಕ್ಕಡಗಾತ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಮೊಬೈಲ್ ಟೀಮ್‌ನಲ್ಲಿ 501 ಆರ್‌ಟಿಪಿಸಿಆರ್‌ ಹಾಗೂ 104 ರಾಪಿಡ್ ಟೆಸ್ಟ್‌ಗಳನ್ನು ಮಾಡಲಾಗಿದ್ದು,  ರಾಪಿಡ್ ಟೆಸ್ಟ್‌ನಲ್ಲಿ 13 ಜನರಿಗೆ ಸೋಂಕು ದೃಢಪಟ್ಟಿದೆ ಎಂದು ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಉಮ್ಮಣ್ಣ ಮಾಹಿತಿ ನೀಡಿದ್ದಾರೆ.

ಗುರುವಾರ ಬೆಳಗಿನ ವರದಿ ಪ್ರಕಾರ ಹರಿಹರ ತಾಲ್ಲೂಕಿನಲ್ಲಿ 47 ಜನರಿಗೆ ಪಾಸಿಟಿವ್ ಬಂದಿದೆ. ಮಲೇಬೆನ್ನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ 13 ಟೆಸ್ಟ್‌ಗಳು ಆಗಿದ್ದು, ಒಬ್ಬರಿಗೆ ಮಾತ್ರ ಸೋಂಕು ಕಾಣಿಸಿಕೊಂಡಿದೆ. ಇಂದು ಕೋವ್ಯಾಕ್ಸಿನ್‌ 2ನೇ ಡೋಸ್ ಲಸಿಕೆ ಹಾಕಲಾಗಿದೆ ಎಂದು ವೈದ್ಯಾಧಿಕಾರಿ
ಡಾ. ಲಕ್ಷ್ಮಿದೇವಿ ತಿಳಿಸಿದ್ದಾರೆ.

error: Content is protected !!