ಉಚಿತ ಲಸಿಕೆ ಶಿಬಿರಕ್ಕೆ ಎಸ್ಸೆಸ್, ಎಸ್ಸೆಸ್ಸೆಂ, ಡಿಸಿ ಭೇಟಿ

ದಾವಣಗೆರೆ, ಜೂ.9- ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರುಗಳು ಹಮ್ಮಿಕೊಂಡಿರುವ ಉಚಿತ ಲಸಿಕಾ ಶಿಬಿರವು ಇಂದೂ ಮುಂದುವರೆದಿದ್ದು, ಶಿಬಿರದ ಸ್ಥಳಕ್ಕೆ ಎಸ್ಸೆಸ್, ಎಸ್ಸೆಸ್ಸೆಂ ಮತ್ತು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರುಗಳು ಭೇಟಿ ನೀಡಿ, ಪ್ರತಿಯೊಬ್ಬರೂ ಲಸಿಕೆ ಪಡೆಯುವಂತೆ ಮನವಿ ಮಾಡಿದರಲ್ಲದೇ ಲಸಿಕೆ ಪಡೆದ ನಾಗರಿಕರ ಯೋಗಕ್ಷೇಮ ವಿಚಾರಿಸಿದರು.

ನಗರ ಪಾಲಿಕೆಯ 9, 11, 12 ಮತ್ತು 14ನೇ ವಾರ್ಡುಗಳಿಗೆ ಸಂಬಂಧಿಸಿದಂತೆ ಲಸಿಕೆ ಶಿಬಿರವು ಕೆ.ಆರ್.ರಸ್ತೆಯ ಡಾ. ಶಾಮನೂರು ಶಿವಶಂಕರಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಏರ್ಪಾಡಾಗಿತ್ತು. ಪಾಲಿಕೆ ಸದಸ್ಯ ಜಾಕೀರ್ ಅಲಿ ಮತ್ತು ಮಾಜಿ ಸದಸ್ಯ ಶಫೀಕ್ ಪಂಡಿತ್ ಸೇರಿದಂತೆ ನೂರಾರು ನಾಗರಿಕರು ಲಸಿಕೆ ಪಡೆದರು. 

ಬಾಪೂಜಿ ಆಸ್ಪತ್ರೆ ಮತ್ತು ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ, ಸಂಶೋಧನಾ ಕೇಂದ್ರದ ಸಿಬ್ಬಂದಿ ವರ್ಗದವರು ಲಸಿಕಾ ಶಿಬಿರವನ್ನು ನಡೆಸಿಕೊಟ್ಟರು. ಲಸಿಕೆ ಪಡೆದ ನಾಗರಿಕರಿಗೆ ನೀರು ಮತ್ತು ಬಿಸ್ಕತ್‍ಗಳನ್ನು ವಿತರಿಸಲಾಯಿತು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಆರೀಫ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯರುಗಳಾದ ಜಾಕೀರ್ ಅಲಿ, ಸೈಯದ್ ಚಾರ್ಲಿ, ಕೆ.ಚಮನ್ ಸಾಬ್, ಶಫೀಕ್ ಪಂಡಿತ್, ಬುತ್ತಿ ಗೌಸ್, ವಿನಾಯಕ ಪೈಲ್ವಾನ್, ಪಾಮೇನಹಳ್ಳಿ ನಾಗರಾಜ್, ಗಣೇಶ್ ಹುಲ್ಮನಿ, ಮುಖಂಡರುಗಳಾದ ಬುತ್ತಿ ಗಫೂರ್, ಬರ್ಕತ್ ಅಲಿ ಪೈಲ್ವಾನ್, ಲಾಲ್ ಆರೀಫ್‌, ದಾದಾಪೀರ್, ಸಲೀಂ, ಅನಿಲ್‍ಕುಮಾರ್, ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!