ರೈತ ಸಂಪರ್ಕ ಕೇಂದ್ರ ತೆರೆಯಲು ಸಚಿವರ ನಿರ್ದೇಶನ

ಹರಿಹರದ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್

ಹರಿಹರ, ಜೂ.8- ತಾಲ್ಲೂಕಿನ ರೈತರಿಗೆ ಕೃಷಿ ಇಲಾಖೆ ವತಿಯಿಂದ ಯಾವುದೇ ರೀತಿಯ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗಿದ್ದು, ರೈತರು ಅದನ್ನು ಸದುಪಯೋಗಪಡಿಸಿಕೊಂಡು ಉತ್ತಮ ಜೀವನ ನಡೆಸುವಂತೆ ಕೃಷಿ ಸಚಿವ ಬಿ. ಸಿ. ಪಾಟೀಲ್ ಕರೆ ನೀಡಿದರು.

ನಗರದ ತರಳಬಾಳು ಶಾಲೆಯ ಆವರಣದಲ್ಲಿ ಸಾಧು ವೀರಶೈವ ಸಮಾಜ, ತರಳಬಾಳು ಯುವಕ ಸಂಘ, ತರಳಬಾಳು ಮಹಿಳಾ ಸಂಘ, ತರಳಬಾಳು ಸೇವಾ ಸಮಿತಿ ಸಹಯೋಗದಲ್ಲಿ  ಕೊರೊನಾ ರೋಗಿಗಳಿಗೆ,  ರೋಗಿಗಳ ಕುಟುಂಬದ ಪರಿಚಾರಕರಿಗೆ, ವಾರಿಯರ್ಸ್‌ಗಳಿಗೆ  ತರಳಬಾಳು ಶಾಲೆಯಲ್ಲಿ ನಡೆಯುತ್ತಿರುವ ಉಚಿತ ದಾಸೋಹ ಕೇಂದ್ರಕ್ಕೆ ಇಂದು ಬೆಳಿಗ್ಗೆ ಭೇಟಿ ನೀಡಿ ಯುವಕರಿಗೆ ಶುಭ ಹಾರೈಸಿದ ಅವರು, ತಮ್ಮನ್ನು ಭೇಟಿಯಾದ ಪತ್ರಕರ್ತರ ಜೊತೆ ಮಾತನಾಡಿದರು.

ನಗರದಲ್ಲಿ ಈ ಹಿಂದೆ ರೈತ ಸಂಪರ್ಕ ಕೇಂದ್ರಗಳು ಎರಡು ಇದ್ದವು. ಈಗ ರೈತ ಸಂಪರ್ಕ ಕೇಂದ್ರವಿಲ್ಲದೆ ಸ್ಥಳೀಯ ರೈತರಿಗೆ ತೊಂದರೆ ಆಗುತ್ತಿದೆ. ಸ್ಥಳೀಯ ರೈತರಿಗೆ ಒಂದು ರೈತ ಸಂಪರ್ಕ ಕೇಂದ್ರವನ್ನು ತೆರೆಯು ವಂತೆ ಸಚಿವರಲ್ಲಿ ಮನವಿ ಮಾಡಿದಾಗ, ಸ್ಥಳದಲ್ಲೇ ಹಾಜರಿದ್ದ ಕೃಷಿ ಸಹಾಯಕ ನಿರ್ದೇ ಶಕ ವಿ.ಪಿ. ಗೋವರ್ಧನ್‌ ಅವರಿಗೆ ಅತಿ ಶೀಘ್ರದಲ್ಲಿ ಹರಿಹರ ನಗರದಲ್ಲಿ ರೈತ ಸಂಪರ್ಕ ಕೇಂದ್ರವನ್ನು ತೆರೆಯಲು ಸೂಚನೆ ನೀಡಿದರು.

ಎಪಿಎಂಸಿ ಆವರಣದಲ್ಲಿರುವ ಯಂತ್ರೋ ಪಕರಣಗಳ ಕೇಂದ್ರವು  ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಣೆ ಮಾಡುತ್ತಿಲ್ಲ ಎಂದು ಸಚಿವರ ಗಮನಕ್ಕೆ ತಂದಾಗ, ಕೂಡಲೇ ಅದನ್ನು ಪ್ರಾರಂಭ ಮಾಡುವಂತೆ ಹಾಗೂ ಅಲ್ಲಿ ರೈತರಿಗೆ ಯಾವುದೇ ರೀತಿಯ ತೊಂದರೆ ಬರ ದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳು ವಂತೆ ತಿಳಿಸಿದರು. ರಾಜ್ಯದ ರೈತ ಕುಟುಂಬಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಗಳು 10 ಸಾವಿರ ರೂ. ಸಹಾಯಧನ ಘೋಷಣೆ ಮಾಡಿದ್ದಾರೆ. ಇದರಿಂದಾಗಿ ರೈತ ಕುಟುಂಬಕ್ಕೆ ಆಸರೆಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕೊಂಡಜ್ಜಿ ಶಿವಕುಮಾರ್,  ಬೆಳ್ಳೂಡಿ ರಾಮಚಂದ್ರಪ್ಪ,  ವೀರಣ್ಣ ಕೊಂಡಜ್ಜಿ,  ಕಿರಣ್ ಮೂಲಿಮನಿ,  ಇಂದಿನ ದಾಸೋಹದ ಸೇವಾರ್ಥಿ  ವಕೀಲ ಹೊಳೆಸಿರಿಗೆರೆ ಎನ್.ಬಿ. ಗಂಗಾಧರ್, ವಕೀಲ ಉಮೇಶ್ ಹುಲ್ಮನಿ,  ಬೆಳ್ಳೂಡಿ ಹನುಮಂತಗೌಡ್ರು, ಕೆ.ವಿ. ರುದ್ರೇಶ್, ಮರುಳಪ್ಪ ಸ್ವಾಮಿ, ವಕೀಲ ಶಾಂತರಾಜ್,  ಸಿದ್ದಾರ್ಥ್,  ಗ್ರಾಮ ಪಂಚಾಯ್ತಿ ಸದಸ್ಯೆ ಗೀತಮ್ಮ, ನಗರಸಭೆ ಸದಸ್ಯೆ ಅಶ್ವಿನಿ ಕೃಷ್ಣ, ಹನಗವಾಡಿ ಮಂಜಣ್ಣ, ವೀರಣ್ಣ,  ಹಾರ್ನಳ್ಳಿ ರಾಜಣ್ಣ,  ಆಶ್ರಯ ಸಮಿತಿ ಸದಸ್ಯ ಸುನೀಲ್, ಮಾರುತಿ ಶೆಟ್ಟಿ, ವಸಂತ್ ಗೌಡಗೆರೆ, ವಿನಾಯಕ ಆರಾಧ್ಯ, ಭರತ್‌ ಅಮರಾವತಿ, ಆಟೋ ಮಂಜು ಇನ್ನಿತರರಿದ್ದರು.

error: Content is protected !!