ಶ್ರೀ ಕಾಗಿನೆಲೆ ಸ್ವಾಮೀಜಿ ಕರೆ
ಮಲೇಬೆನ್ನೂರು, ಜೂ.7- ಮನುಷ್ಯನ ಜೀವರಕ್ಷಕವಾಗಿರುವ ಗಿಡ-ಮರಗಳನ್ನು ಬೆಳೆಸಲು ಎಲ್ಲರೂ ಸಂಕಲ್ಪ ಮಾಡಬೇಕೆಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂ ದಪುರಿ ಸ್ವಾಮೀಜಿ ಕರೆ ನೀಡಿದರು.
ಬೆಳ್ಳೂಡಿ ಶಾಖಾಮಠದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದ ನೇತೃತ್ವ ವಹಿಸಿ ಶ್ರೀಗಳು ಮಾತನಾಡಿದರು.
ಮರಗಳು ಅಶುದ್ಧ ಗಾಳಿಯನ್ನು ಹೀರಿಕೊಂಡು ಶುದ್ಧವಾದ ಗಾಳಿಯ ರೂಪದಲ್ಲಿ ನಮಗೆ ಆಮ್ಲಜನಕವನ್ನು ನೀಡುತ್ತಿವೆ. ಇಂತಹ ಮರಗ ಳನ್ನು ಕಡಿದು ಪರಿಸರ ಹಾಳು ಮಾಡುವುದನ್ನು ನಿಲ್ಲಿಸಿ ಮನೆ, ಕಚೇರಿ, ಶಾಲಾ-ಕಾಲೇಜು, ಆಸ್ಪ ತ್ರೆಗಳ ಆವರಣದಲ್ಲಿ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಲು ಪ್ರತಿಯೊಬ್ಬರೂ ಮುಂದಾಗಬೇಕು.
ಹೆಮ್ಮಾರಿ ಕೊರೊನಾದಿಂದಾಗಿ ಎಷ್ಟೋ ಜನ ಆಮ್ಲಜನಕದ ಕೊರತೆಯಿಂದ ಜೀವವನ್ನೇ ಕಳೆದುಕೊಂಡಿದ್ದಾರೆ. ಪರಿಸರ ಸಂರಕ್ಷಣೆ ನಮ್ಮೆ ಲ್ಲರ ಹಕ್ಕಾಗಬೇಕೆಂದು ಸ್ವಾಮೀಜಿ ಹೇಳಿದರು.
ಶಾಸಕ ಎಸ್. ರಾಮಪ್ಪ ಮಾತನಾಡಿ, ಸಭೆ-ಸಮಾರಂಭಗಳಲ್ಲಿ ಸಾರ್ವಜನಿಕರಿಗೆ ಸಸಿ ವಿತರಣೆ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಪ್ರತಿಯೊಬ್ಬರೂ ಗಿಡ ಬೆಳೆಸಬೇಕೆಂಬ ಕಾನೂನನ್ನು ಜಾರಿಗೊಳಿಸಿದರೆ ಮಾತ್ರ ಉತ್ತಮ ಪರಿಸರ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ವಕೀಲರೂ ಆದ ಜಿಲ್ಲಾ ಕಾಂಗ್ರೆಸ್ ವಕ್ತಾರ ಆದ ಎಂ. ನಾಗೇಂದ್ರಪ್ಪ ಮಾತನಾಡಿ, ಪರಿಸರ ಚೆನ್ನಾಗಿದ್ದರೆ ಮಾತ್ರ ನಮ್ಮ ಜೀವನ ಉಲ್ಲಾಸದಿಂದ ಕೂಡಿರುತ್ತದೆ. ಇಲ್ಲದಿದ್ದರೆ ನರಕವಾಗುತ್ತದೆ ಎಂಬುದನ್ನು ಕೊರೊನಾ ಎಚ್ಚರಿಸಿದೆ ಎಂದರು.
ಈ ಸಂದರ್ಭದಲ್ಲಿ ಹರಿಹರ ಗ್ರಾಮಾಂತರ ಪಿಎಸ್‌ಐ ಡಿ. ರವಿಕುಮಾರ್ ಅವರನ್ನು ಅವರ ಹುಟ್ಟುಹಬ್ಬ ನಿಮಿತ್ತ ಶ್ರೀಗಳು ಸನ್ಮಾನಿಸಿ, ಆಶೀರ್ವದಿಸಿದರು.
ಬೆಳ್ಳೂಡಿ ಗ್ರಾ.ಪಂ. ಅಧ್ಯಕ್ಷೆ ಗಂಗಮ್ಮ ಬೀರಪ್ಪ, ಅರಣ್ಯ ಇಲಾಖೆಯ ಟಿ. ರಾಜಣ್ಣ, ಉಮರ್ ಬಾಷಾ, ಸಮಾಜ ಸೇವಕ ನಂದಿಗಾವಿ ಶ್ರೀನಿವಾಸ್, ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಕೆ. ಜಡಿಯಪ್ಪ, ಕಾರ್ಯದರ್ಶಿ ಕೆ.ಪಿ. ಗಂಗಾಧರ್, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ಕುಣೆಬೆಳಕೆರೆ ದೇವೇಂದ್ರಪ್ಪ, ಚೂರಿ ಜಗದೀಶ್, ಪಿ.ಎಸ್. ನಿಜಲಿಂಗಪ್ಪ, ಪ್ರಿನ್ಸಿಪಾಲ್ ಬೀರಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.