ರಾಣೇಬೆನ್ನೂರು, ಆ.3- ಜಲಜೀವನ್ ಎನ್ನುವುದು ಗ್ರಾಮೀಣ ಪ್ರದೇಶದ ಜನರಿಗೂ ಕುಡಿಯಲು ಶುದ್ಧ ನೀರು ಕೊಡುವ ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆ ಯಾಗಿದ್ದು, ಇದನ್ನು ತೀವ್ರಗತಿಯಲ್ಲಿ ಪೂರ್ಣ ಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಶಾಸಕ ಅರುಣಕುಮಾರ ಪೂಜಾರ್ ತಿಳಿಸಿದ್ದಾರೆ.
ಗಂಗಾಪುರ, ಮೈದೂರು, ಗುಡಗೂರು, ಚೌಡಯ್ಯದಾನಾಪುರ ಗ್ರಾಮಗಳಲ್ಲಿ 5 ಕೋಟಿ ವೆಚ್ಚದ ಈ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇಂದ್ರ, ರಾಜ್ಯ ಸರ್ಕಾರದ ಶೇ. 75, ಗ್ರಾ.ಪಂ. ಶೇ. 15 ರಷ್ಟು ಜನರಿಂದ ಶೇ. 10 ರಷ್ಟು ಹಣ ಸಂಗ್ರಹಿಸಿ, ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದ್ದು, ಗ್ರಾಮೀಣ ಭಾಗದ ಜನರು ಯಾವುದೇ ತಂಟೆ ತಕರಾರುಗಳಿಲ್ಲದೆ ಸಹಕಾರ ನೀಡುವಂತೆ ಶಾಸಕರು ಮನವಿ ಮಾಡಿದರು.
ಮುಂದಿನ ಪೀಳಿಗೆಗೆ ನೀರಿನ ಸಂಪನ್ಮೂಲ ಕ್ರೋಢೀಕರಿಸಲು ಪ್ರತಿ ಗ್ರಾಮದಲ್ಲಿ ಅವಶ್ಯಕತೆಯ ಪ್ರಮಾಣ ಕಂಡುಕೊಳ್ಳಲು ಮೀಟರ್ ಅಳವಡಿಸಲಾಗುತ್ತದೆ.
ಇದಕ್ಕೆ ಗ್ರಾಮೀಣ ಜನರು ಈ ನೀರಿಗಾಗಿ ಹೆಚ್ಚು ಹಣ ಕೊಡುವ ಅವಶ್ಯಕತೆ ಬರಲಾರದು ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿದ್ಯಾವತಿ ಹಳೇಗೌಡ ಹೇಳಿದರು.
ಪ್ರಾಧಿಕಾರದ ಅಧ್ಯಕ್ಷ ಕರಿಯಪ್ಪ
ಪಾರೇರ, ಸದಸ್ಯ ಅಶೋಕ್ ಸಾವುಕಾರ, ಬಸಮ್ಮ, ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಅಭಿಯಂತರ ರಾಮಕೃಷ್ಣ ಇನ್ನಿತರರಿದ್ದರು.