ಕಟ್ಟಡ ಕಾರ್ಮಿಕರಿಗೆ ಫುಡ್ಕಿಟ್ ವಿತರಿಸಿದ ಎಸ್ಸೆಸ್
ದಾವಣಗೆರೆ, ಆ.3- ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿ ಕರಿಗೆ ಫುಡ್ಕಿ ಟ್ಗಳನ್ನು ನೀಡಲಾಗಿದ್ದು, ಮಂಗಳವಾರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮ ನೂರು ಶಿವಶಂಕರಪ್ಪ ಫುಡ್ಕಿಟ್ಗಳನ್ನು ವಿತರಿಸಿದರು.
ನಂತರ ಕಟ್ಟಡ ಕಾರ್ಮಿಕರನ್ನು ದ್ದೇಶಿಸಿ ಮಾತನಾಡಿದ ಶಾಸಕರು, ಕಟ್ಟಡ ಕಾರ್ಮಿಕರು ದೇಶ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವಂತಹವರು ಅಂತಹವರ ಸಂಕಷ್ಟಕ್ಕೆ ಸರ್ಕಾರಗಳು ಶೀಘ್ರ ಸ್ಪಂದಿಸುವಂತಾಗಬೇಕು ಎಂದು ಒತ್ತಾಯಿಸಿದರು.
ಕೊರೊನಾ ಒಂದು ಮತ್ತು ಎರಡನೇ ಅಲೆ ವೇಳೆ ಕಟ್ಟಡ ಕಾರ್ಮಿಕರು ಸೇರಿ ದಂತೆ ಅನೇಕ ವೃತ್ತಿಪರ ಜನರಿಗೆ ಸಾಕಷ್ಟು ತೊಂದರೆಯಾಯಿತು. ಸರ್ಕಾರ ಬಹುದಿನಗಳ ನಂತರ ಸ್ಪಂದಿಸಿದೆ. ಇಷ್ಟಕ್ಕೆ ಸಮಾಧಾನ ಪಟ್ಟುಕೊಳ್ಳಬೇಕೆಂದರು.
ಪ್ರಸ್ತುತ 3ನೇ ಅಲೆ ಆರಂಭವಾಗುವ ಮುನ್ಸೂಚನೆ ಇದ್ದು, ರಾಜ್ಯ ಸರ್ಕಾರ ಕ್ಯಾಬಿನೆಟ್ ರಚನೆಯಲ್ಲಿಯೇ ಮುಳು ಗಿದ್ದು, ಬಡವರಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಪಾಲಿಕೆಯ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯರುಗಳಾದ ಎ.ಬಿ. ರಹೀಂ, ಕೆ.ಚಮನ್ಸಾಬ್, ಜಾಕೀರ್ ಅಲಿ, ಮುಖಂಡರಾದ ಶಫೀಕ್ ಪಂಡಿತ್, ಉಮಾಶಂಕರ್, ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ವೀಣಾ ಎಸ್.ಆರ್. ಇಬ್ರಾಹಿಂ ಸಾಬ್, ರಾಜಶೇಖರ್ ಹಿರೇಮಠ್, ಮಂಜು, ಮಧು, ಮುಖಂಡರುಗಳಾದ ಹಾಲಸ್ವಾಮಿ, ಕರಿಬಸಪ್ಪ, ಅಬ್ದುಲ್ ಜಬ್ಬಾರ್, ವಾಸೀಮ್ ಚಾರ್ಲಿ ಮತ್ತಿತರರು ಉಪಸ್ಥಿತರಿದ್ದರು.