ದಾವಣಗೆರೆ, ನ.12- ಹಾವೇರಿ ಜಿಲ್ಲೆ ರಟ್ಟಿ ಹಳ್ಳಿ ತಾಲ್ಲೂಕು ಚಟ್ನಿಹಳ್ಳಿ ಹಾಗೂ ಇತರೆ ಗ್ರಾಮ ಗಳಲ್ಲಿ ಕೆಐಎಡಿಬಿ ಯಿಂದ ಲೀಜ್ಗೆ ಪಡೆದ ಭೂಮಿಯಲ್ಲಿ ಮೆ.ಜಿ.ಎಂ. ಶುಗರ್ಸ್ ಹಾಗೂ ಎನರ್ಜಿ ಲಿಮಿಟೆಡ್ ಕಂಪನಿಯಿಂದ ಅಕ್ರಮ ಗಣಿಕೆ ನಡೆಸಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರರೂ, ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷರೂ ಆದ ಎಸ್.ಆರ್. ಹಿರೇಮಠ ಆರೋಪಿಸಿದ್ದಾರೆ.
ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಗಳ ಸಹಿತ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯ ದರ್ಶಿಗಳ ಆದೇಶದಂತೆ ಹಾವೇರಿ ಹಾಗೂ ಧಾರವಾಡ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸಿರುವುದಲ್ಲದೆ, ಗಂಭೀ ರವಾಗಿ ನಡೆದಿರುವ ಅಕ್ರಮ ಗಳು, ಅವ್ಯವಹಾರ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿ ಕಾರಿಗಳಿಗೆ ನೋಟೀಸ್ ನೀಡಿದ್ದಾರೆ ಎಂದರು.
ಪ್ರತಿ ವಾರ ನೂರು ಕೋಟಿ ರೂ.ನಷ್ಟು ಮೌಲ್ಯದ ಗಣಿಗಾರಿಕೆಯು ನಡೆಯುತ್ತಿದೆ. ಇದ ರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ನಷ್ಟ ಉಂಟಾಗಿದೆ. ಈಗಾಗಲೇ ಚಟ್ನಹಳ್ಳಿ ಹಾಗೂ ಸುತ್ತ ಮುತ್ತ ಲಿನ ಗ್ರಾಮಸ್ಥರು ಅಕ್ರಮ ಗಣಿಗಾ ರಿಕೆಯ ವಿರುದ್ಧ ಯುದ್ಧ ಸಾರಿದ್ದಾರೆ. ಈ ಹಿಂದೆ ಬಳ್ಳಾರಿಯಲ್ಲಿ ನಡೆದಂತೆ ಇಲ್ಲಿಯೂ ಪ್ರಾಕೃತಿಕ ಸಂಪತ್ತಿನ ಲೂಟಿ ನಡೆಯುತ್ತಿದೆ ಎಂದರು.
ಈ ಕೂಡಲೇ ಅಕ್ರಮ ಗಣಿಗಾರಿಕೆ ಸ್ಥಗಿತ ಗೊಳಿಸಬೇಕು. ಕ್ರಷರ್ ಕಲ್ಲು ಪುಡಿ ಮಾಡುವ ಮಿಷನ್ಗಳ್ನು ಸ್ಥಗಿತಗೊಳಿಸ ಬೇಕು. ಮೆ. ಜಿ.ಎಂ. ಶುಗರ್ಸ್ ಮತ್ತು ಎನರ್ಜಿ ಲಿ.ಕಂಪನಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಅಕ್ರಮ ಗಣಿಗಾರಿಕೆಯಿಂದ ತೆಗೆದ ಕಲ್ಲು ಹಾಗೂ ಕ್ರಷರ್ಗಳಿಂದ ತೆಗೆದು ಸಂಗ್ರಹಿದ ಜಲ್ಲಿಯನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಬೇಕು. ಈಗಾಗಲೇ ಮಾರಾಟ ಮಾಡಲಾದ ಮೌಲ್ಯವನ್ನು ದಂಡದೊಂದಿಗೆ ಸರ್ಕಾರಕ್ಕೆ ಜಮಾ ಮಾಡಿಸಿಕೊಳ್ಳಬೇಕು ಎಂದು ಹಿರೇಮಠ ಆಗ್ರಹಿಸಿದರು.
ಮರಳು ಮಾಫಿಯಾ ಬಗ್ಗೆಯೂ ಕ್ರಮ ಅಗತ್ಯ: ರಾಜ್ಯ ಸರ್ಕಾರದ ನೂತನ ಮರಳು ನೀತಿಯ ಕೆಲ ಅಂಶಗಳಾದ ಗ್ರಾ.ಪಂ.ಗಳೊಂ ದಿಗೆ ರಾಜಧನ ಶೇ.25ರಷ್ಟು ಹಂಚಿಕೊ ಳ್ಳುವುದು, ಬಡವರಿಗೆ ರಿಯಾಯಿತಿ ದರದಲ್ಲಿ ಮರಳು ನೀಡುವುದು ಸ್ವಾಗತಾರ್ಹ. ಆದರೆ ಕಬ್ಬಿಣದ ಅದಿರು ಮಾಫಿಯಾದಂತೆ ಮರಳು ಮಾಫಿಯಾ ಸಹ ವ್ಯವಸ್ಥಿತವಾಗಿ ನಡೆದಿಕೊಂಡು ಬರುತ್ತಿದ್ದು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ ಮರಳು ಮಾಫಿಯಾ ವನ್ನು ಸೆದೆಬಡಿಯಬೇಕಿದೆ ಯಲ್ಲದೆ, ಪರಿಸರ ಕೇಂದ್ರಿತವಾಗಿ ಸಮಗ್ರ ನೀತಿಯ ಅವಶ್ಯವಿದೆ ಎಂದು ಹಿರೇಮಠ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡ ಬಲ್ಲೂರು ರವಿಕುಮಾರ್, ವಕೀಲ ಅನಿಸ್ ಪಾಷ, ಎಂ.ಸಿ. ಹಾವೇರಿ, ಆರ್.ಬಿ. ಪಟೇಲ್, ನಾಗಪ್ಪ ದೊಡ್ಡಮನಿ ಉಪಸ್ಥಿತರಿದ್ದರು.