ಮಹಿಳಾ ಮೋರ್ಚಾ ಸಂಘಟನೆ ಬಲವರ್ಧನೆಗೆ ಕೈಜೋಡಿಸಿ

ಜಗಳೂರಿನಲ್ಲಿ ಜಿ.ಪಂ. ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ ಕರೆ

ಜಗಳೂರು, ಮಾ.18- ಬಿಜೆಪಿ ಮಹಿಳಾ ಮೋರ್ಚಾ ಸಂಘಟನೆಯ ಬಲವರ್ಧನೆಗೆ ತಳಮಟ್ಟದಿಂದ ಕೈಜೋಡಿಸಿ ಎಂದು ಜಿ.ಪಂ. ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ ಮಹೇಶ್ ಕರೆ ನೀಡಿದರು. ಪಟ್ಟಣದ ಶಾಸಕರ ನಿವಾಸದ ಸಭಾಂಗಣದಲ್ಲಿ ಆಯೋಜಿಸಿದ್ದ  ವಿಧಾನಸಭಾ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ  ಅವರು ಮಾತನಾಡಿದರು.

ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯ ಕೊಡುಗೆ ಅಪಾರವಾಗಿದೆ. ಮೀಸಲಾತಿ ಫಲ ವಾಗಿ ಮಹಿಳೆಯರು ಇಂದು ಶೇ.50 ರಷ್ಟು ಜನ ಪ್ರತಿನಿಧಿಗಳಾಗಿ ರಾಜಕೀಯ ಕ್ಷೇತ್ರದಲ್ಲಿ ಅಧಿ ಕಾರ ಪಡೆದಿರುವುದು ಶ್ಲಾಘನೀಯ ಎಂದರು.

ದೇಶದಲ್ಲಿ ಬಿಜೆಪಿ ಪಕ್ಷದ ಬೆಳವಣಿಗೆಗೆ ಮಹಿಳೆಯರು ಶ್ರಮಿಸಬೇಕು. ಪ್ರಧಾನಿ ಮೋದಿಜಿ ಅವರ ಸಂಕಲ್ಪದಂತೆ ಮುಂಬರುವ ಚುನಾವಣೆಗಳಲ್ಲಿ ಗೆಲುವಿಗೆ ಬಿಜೆಪಿ ಮಂಡಲ ವ್ಯಾಪ್ತಿಯ ಮಹಿಳೆಯರನ್ನು ಸಂಘಟಿಸೋಣ ಎಂದು ಸಲಹೆ  ಇತ್ತರು.

ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ಮಹೇಶ್ ಮಾತನಾಡಿ, ಸಮಾಜ ದಲ್ಲಿ ಅನಕ್ಷರಸ್ಥ ಮಹಿಳೆಯೂ ಸಾಧನೆಗೈಯ್ಯುವ ಮೂಲಕ ಮಹಿಳೆ ಅಬಲೆಯಲ್ಲ ಎಂಬುದನ್ನು ಸಾಬೀತುಪಡಿಸಿದ್ದಾಳೆ. ಕೇಂದ್ರ ಮತ್ತು ರಾಜ್ಯದಲ್ಲಿ  ಬಿಜೆಪಿ ನೇತೃತ್ವದ ಸರ್ಕಾರ ಜನಪರ ಯೋಜನೆಗಳನ್ನು ನೀಡಿದೆ  ಎಂದರು.

ಗ್ರಾಮಗಳಲ್ಲಿ  ಮಹಿಳೆಯರು ಸರ್ಕಾರದ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸಿ ಸೇವಾ ಮನೋಭಾವನೆ ಮೈಗೂಡಿಸಿಕೊಳ್ಳಬೇಕು. ಮಹಿಳೆಯರಿಗೆ ಸಂಘಟನೆಯಲ್ಲಿ ಪಾಲ್ಗೊಳ್ಳಲು ಕೌಟುಂಬಿಕ ಅಡೆತಡೆಗಳು ಎದುರಾಗಬಹುದು. ಪುರುಷರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಸಮಾರಂಭದಲ್ಲಿ ಸೋಬಾನೆ ಕಲಾವಿದೆ, ಜಾನಪದ  ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ  ಸಿದ್ದಮ್ಮನಹಳ್ಳಿ ಭಾಗ್ಯಮ್ಮ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಮಹಿಳಾ ಘಟಕದ ಅಧ್ಯಕ್ಷೆ ಪದ್ಮಾ, ಜಿಲ್ಲಾ‌ ಉಪಾಧ್ಯಕ್ಷ  ಡಿ.ವಿ. ನಾಗಪ್ಪ, ಮಂಡಲ ಅಧ್ಯಕ್ಷ ಪಲ್ಲಾಗಟ್ಟೆ ಎಚ್. ಮಹೇಶ್, ಜಿ.ಪಂ. ಸದಸ್ಯ ಎಸ್.ಕೆ. ಮಂಜುನಾಥ್, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದೇಶ್‌, ಪ.ಪಂ. ಅಧ್ಯಕ್ಷ ಆರ್. ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಲಲಿತ ಶಿವಣ್ಣ, ಸದಸ್ಯ ರಾದ ಮಂಜಮ್ಮ, ನವೀನ್, ನಿರ್ಮಲ, ಸರೋ ಜಮ್ಮ, ಎಪಿಎಂಸಿ ಅಧ್ಯಕ್ಷ ರೇಣುಕಾನಂದ, ಉಪಾಧ್ಯಕ್ಷ ಗುರುಮೂರ್ತಿ, ಜೆ.ವಿ. ನಾಗರಾಜ್, ಬಿಜೆಪಿ ಮಹಿಳಾ‌ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪ ವಾಲಿ ಇನ್ನಿತರರಿದ್ದರು.

error: Content is protected !!