ದಾವಣಗೆರೆ, ಜೂ. 1 – ನಗರದಲ್ಲಿ ಕಳೆದ 31 ದಿನಗಳಿಂದ ಕೊರೊನಾ ಸೋಂಕಿತರಿಗೆ ಪ್ರತಿದಿನ ಮೂರೂ ಹೊತ್ತು ಊಟದ ವ್ಯವಸ್ಥೆಯನ್ನು ಮಾಡು ತ್ತಿರುವ ತರಳಬಾಳು ಸೇವಾ ಸಮಿತಿ ಹಾಗೂ ಶಿವಸೈನ್ಯ ಯುವಕ ಸಂಘದ ಕಾರ್ಯ ಅತ್ಯಂತ ಸಮಯೋಚಿತ ವಾದದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಭೈರತಿ ಬಸವರಾಜ್ ಪ್ರಶಂಸೆ ವ್ಯಕ್ತಪಡಿಸಿದರು.
ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಮಾರ್ಗದರ್ಶನ ದಲ್ಲಿ ನಡೆಯುತ್ತಿರುವ ಈ ಕಾರ್ಯಕ್ಕೆ ಸಚಿವರು ಸರ್ಕಾರದ ಪರವಾಗಿ ಕೃತಜ್ಞತೆ ಅರ್ಪಿಸಿದರು.
ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪಕ್ಕೆ ಇಂದು ಭೇಟಿ ನೀಡಿದ ಅವರು, ತರಳಬಾಳು ಸೇವಾ ಸಮಿತಿ ಹಾಗೂ ಶಿವಸೈನ್ಯ ಯುವಕ ಸಂಘದವರು ಕೊರೊನಾ ಸೋಂಕಿತರಿಗೆ ಮಾಡುತ್ತಿರುವ ಊಟದ ತಯಾರಿಯನ್ನು ವೀಕ್ಷಿಸಿ ಮಾತನಾಡಿದರು.
ತರಳಬಾಳು ಸೇವಾ ಸಮಿತಿಯ ಗೌರವಾ ಧ್ಯಕ್ಷ ಶಶಿಧರ್ ಹೆಮ್ಮನಬೇತೂರು ಮಾತನಾಡಿ, ಈ ಪುಣ್ಯದ ಕಾರ್ಯಕ್ಕೆ ಉದಾರವಾದ ಸಹಾಯ – ಸಹಕಾರ ಹರಿದುಬರುತ್ತಿದೆ. ಅವರೆಲ್ಲರನ್ನೂ ಕೃತಜ್ಞತಾಪೂರ್ವಕವಾಗಿ ಸ್ಮರಿಸಿದರು.
ಸಂಸದ ಜಿ.ಎಂ. ಸಿದ್ದೇಶ್ವರ, ಮೇಯರ್ ಎಸ್. ಟಿ. ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಪಾಲಿಕೆ ಆಯುಕ್ತ ವಿಶ್ವನಾಥ್ ಪಿ. ಮುದಜ್ಜಿ, ಲೋಕಿಕೆರೆ ನಾಗರಾಜ್ ಅವರುಗಳು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ತರಳಬಾಳು ಸೇವಾ ಸಮಿತಿ ಹಾಗೂ ಶಿವಸೈನ್ಯ ಯುವಕ ಸಂಘದ ಪದಾಧಿಕಾರಿ ಗಳಾದ ಮಾಗನೂರು ಉಮೇಶ್ ಗೌಡ್ರು, ಕೊರಟಿ ಕೆರೆ ಶಿವಕುಮಾರ್, ಪ್ರಭು ಕಾವಲಹಳ್ಳಿ, ಶ್ರೀನಿವಾಸ್ ಮೆಳ್ಳೇಕಟ್ಟೆ, ಸತೀಶ್ ಸಿರಿಗೆರೆ, ಮತ್ತಿತರರಿದ್ದರು.