ದಾವಣಗೆರೆ, ಮಾ.17 – ಇಲ್ಲಿನ ಶ್ರೀ ರಾಮನಗರದಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿದ್ದ ಕೆ.ಎಂ. ಸೌಮ್ಯ ಅವರ ವಿವಾಹ ಉತ್ತರ ಕನ್ನಡ ಜಿಲ್ಲೆಯ ಕುಮುಟಾ ತಾಲ್ಲೂ ಕಿನ ಕಡೆಕೋಡಿ ಗ್ರಾಮದ ಸುಬ್ರಾಯ ಮಂಜುನಾಥ ಭಟ್ಟ ಅವರೊಂದಿಗೆ ಬುಧವಾರ ನೆರವೇರಿತು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಸಿಇಒ ವಿಜಯ ಮಹಾಂತೇಶ ಬಿ. ದಾನಮ್ಮನವರ್, ಜಿಲ್ಲಾ ಪಂಚಾಯತ್ ಸದಸ್ಯ ತೇಜಸ್ವಿ ಪಟೇಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯ್ ಕುಮಾರ್, ರಾಜ್ಯ ಬಾಲ ಭವನದ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜಪ್ಪ ಸೇರಿದಂತೆ ನಿಲಯದ ಸಿಬ್ಬಂದಿಗಳು, ಸ್ಥಳೀ ಯರು ವಿವಾಹಕ್ಕೆ ಸಾಕ್ಷಿಯಾದರು.
ವಧುವಿನ ಪೋಷಕರ ಸ್ಥಾನದಲ್ಲಿದ್ದ ಜಿಲ್ಲಾಧಿಕಾರಿಗಳೇ ವರನನ್ನು ಎದುರುಗೊಂಡು ಮುಹೂರ್ತ ನಡೆಯುವ ಸ್ಥಳಕ್ಕೆ ಕರೆ ತಂದದ್ದು ವಿಶೇಷವಾಗಿತ್ತು. ಮಾಂಗಲ್ಯಧಾರಣೆ ಹಾಗೂ ಇತರೆ ಶಾಸ್ತ್ರಗಳು ಅಧಿಕಾರಿಗಳ ಸಮ್ಮುಖದಲ್ಲಿಯೇ ನೆರವೇರಿದವು. ಪರಸ್ಪರ ಹಾರ ಬದಲಾಯಿಸಿಕೊಂಡಾಗ ನೆರೆದಿದ್ದ ಎಲ್ಲರೂ ಅಕ್ಷತೆ ಹಾಕಿ ಹರಿಸಿದರು.
ವಿವಾಹ ಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ ಮಾತ ನಾಡಿದ ಜಿಲ್ಲಾಧಿಕಾರಿ, ಮಹಿಳಾ ನಿಲಯದಲ್ಲಿ ಇಲ್ಲಿಯವರೆಗೆ 40 ಮದುವೆಗಳಾಗಿವೆ. ನಾನು ದಾವಣ ಗರೆಗೆ ಬಂದ ಮೇಲೆ ಇದು 6ನೇ ವಿವಾಹ ಮಹೋತ್ಸವವಾಗಿದ್ದು, ಇಂತಹ ಮದುವೆಗಳಲ್ಲಿ ಪಾಲ್ಗೊಂಡಿದ್ದಕ್ಕೆ ಸಂತಸವಾಗುತ್ತಿದೆ ಎಂದರು.
ಜಿ.ಪಂ. ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿ, ನಾವು ಭಾರ ತೀಯರು ಸಂಬಂಧ ಗಳಿಗೆ ಹೆಚ್ಚು ಬೆಲೆ ಕೊಡುತ್ತೇವೆ. ಅದರಲ್ಲಿಯೂ ಅನಾಥಾಶ್ರಮದ ಮಗುವೊಂದಕ್ಕೆ ಅದ್ದೂರಿಯಾಗಿ ವಿವಾಹ ಮಾಡು ತ್ತಿರುವುದು ಶ್ಲಾಘನೀಯ ಎಂದರು.
ಹೆತ್ತವರನ್ನು ಕಳೆದು ಕೊಂಡಿರುವ ಈ ಮಕ್ಕಳು ಜಾತಿ ಬಂಧನದಿಂದ ಹೊರಗಿದ್ದಾರೆ. ಇವರಿಂದಲೇ ಇಂದು ಮಾನವೀಯ ಮೌಲ್ಯಗಳು ಉಳಿಯುತ್ತಿವೆ. ಇಂತಹ ಮಾನವೀಯ ಕಾರ್ಯದಲ್ಲಿ ನಾನು ಭಾಗವಹಿಸಿರುವುದು ಧನ್ಯತಾ ಭಾವ ಮೂಡಿದೆ ಎಂದರು.
ಸಿಇಒ ವಿಜಯಮಹಾಂತೇಶ ಬಿ.ದಾನಮ್ಮನವರ್ ಮಾತನಾಡಿ, ಮಹಿಳಾ ನಿಲಯದ ಸಹಯೋಗ ದೊಂದಿಗೆ ಸರ್ಕಾರವು ಅನಾಥ ಹೆಣ್ಣು ಮಕ್ಕಳಿಗೆ ವಿಜೃಂಭಣೆಯಿಂದ ಮದುವೆ ಮಾಡಿಕೊಡುವುದು ಅಭಿ ನಂದನಾರ್ಹ. ಇಂತಹ ಸತ್ಕಾರ್ಯ ನಡೆಸುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದರು.
28 ವರ್ಷದ ಮಹಿಳಾ ನಿಲಯದ ನಿವಾಸಿ ಸೌಮ್ಯ ಅವರ ತಂದೆ-ತಾಯಿ ಮರಣ ಹೊಂದಿದ್ದು, ತುಮಕೂರು ಸ್ವೀಕಾರ ಕೇಂದ್ರದಿಂದ ವರ್ಗಾವಣೆ ಮೂಲಕ 2017 ರಂದು ರಾಜ್ಯ ಮಹಿಳಾ ನಿಲಯಕ್ಕೆ ದಾಖಲಾಗಿದ್ದರು. ಉತ್ತರ ಕನ್ನಡ ಜಿಲ್ಲೆಯ ಕುಮುಟಾ ತಾಲ್ಲೂಕಿನ ಕಡೆಕೋಡಿ ಗ್ರಾಮದ ಸುಬ್ರಾಯ ಮಂಜುನಾಥ ಭಟ್ಟ ಕೃಷಿ ಮಾಡುವ ಜೊತೆಗೆ ಟ್ರಾವೆಲ್ ಏಜೆನ್ಸಿಯಲ್ಲಿ ವಾಹನ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಹಿಳಾ ನಿಲಯದ ಅಧೀಕ್ಷಕ ರಾದ ನಾಗರತ್ನಮ್ಮ, ರಾಜ್ಯ ಮಹಿಳಾ ನಿಲಯದ ಲೆಕ್ಕಿಗರಾದ ಸುಜಾತಮ್ಮ, ಶೃತಿ, ಬಾಲಕಿಯರ ಬಾಲ ಭವನದ ಅಧೀಕ್ಷಕಿ ಶೋಭಾ, ಕೌಟುಂಬಿಕ ಸುರಕ್ಷಿತಾಧಿಕಾರಿ ಸುಶೀಲಮ್ಮ, ಜಿಲ್ಲಾ ನಿರೂಪಣಾಧಿಕಾರಿ ಗಿರಿಜಮ್ಮ ಸೇರಿದಂತೆ ಜಿಲ್ಲೆಯ ಎಲ್ಲಾ ಸಿಡಿಪಿಒ ಗಳು ಇದ್ದರು.