ದಾನಿ ಜಯಪ್ರಕಾಶ್ ಅಂಬರ್‌ಕರ್ ಅವರ ಸೇವೆ ಶ್ಲ್ಯಾಘನೀಯ
ದಾವಣಗೆರೆ, ಮೇ 30- ಕೊರೊನಾ ಸೋಂಕು ಪರಿಣಾಮ ಆಗಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ನಗರದ ಭಾವಸಾರ ಸಮಾಜದ ಬಡ ಕುಟುಂಬಗಳಿಗೆ ಭಾವಸಾರ ಕ್ಷತ್ರಿಯ ಸಮಾಜದ ರಾಷ್ಟ್ರೀಯ ಅಧ್ಯಕ್ಷರೂ ಆದ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಮಿತಿಯ ಸದಸ್ಯ ಜಯಪ್ರಕಾಶ್ ಅಂಬರ್‌ಕರ್ ಅವರು ದವಸ – ಧಾನ್ಯಗಳ ಕಿಟ್ ಗಳನ್ನು ವಿತರಿಸಿದರು.
ಸುಮಾರು10 ಸಾವಿರಕ್ಕೂ ಹೆಚ್ಚು ಮನೆಗಳು ಹೊಂದಿರುವ, 25 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಭಾವಸಾರ ಸಮಾಜ ಬಾಂಧವರ ಮೂಲ ವೃತ್ತಿ ಟೈಲರ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಲಾಕ್ ಡೌನ್‌ದಿಂದ ಸಂಕಷ್ಟಕ್ಕೀಡಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಸುಮಾರು 100 ಜನರಿಗೆ ದವಸ – ಧಾನ್ಯಗಳ ಕಿಟ್ ನೀಡಲಾಯಿತು.
ಭಾವಸಾರ ಸಮಾಜದ ಬಡ ಜನರ ಯಾವುದೇ ಕಷ್ಟಗಳಿಗೆ ಸ್ಪಂದಿಸುತ್ತಿರುವ ಜಯಪ್ರಕಾಶ್ ಅವರು ಹೊಲಿಗೆ ಯಂತ್ರಗಳನ್ನು ಕೊಡುಗೆ ನೀಡಿದ್ದಾರೆ ಎಂದು ತಿಳಿಸಿರುವ ಸಮಾಜದ ತರುಣ ಮಂಡಳಿದ ಪದಾಧಿಕಾರಿಗಳು, ಜಯಪ್ರಕಾಶ್ ಅಂಬರ್ ಕರ್ ಅವರ ಸಾಮಾಜಿಕ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಜನಾ ಮಂಡಳಿ ಮತ್ತು ತರುಣ ಮಂಡಳದ ಗೌರವಾಧ್ಯಕ್ಷ ಹ.ಭ.ಪ ಚಂದ್ರಕಾಂತ ವಾದೋನಿ, ಅಧ್ಯಕ್ಷ ವಿಜಯ್ ಕುಮಾರ್ ವಾದೋನಿ, ಉಪಾಧ್ಯಕ್ಷ ಮಾಲತೇಶ್ ಗುಜ್ಜರ್, ಕಾರ್ಯದರ್ಶಿ ಲಖನ್ ಕುಮಾರ್ ಅಂಬೇಕರ್, ಖಜಾಂಚಿ ವಿನಯ್ ಝಿಂಗಾಡೆ, ಸಹ ಕಾರ್ಯದರ್ಶಿ ವಿಶ್ವನಾಥ್ ಪುಟಾಣಕರ್, ಸಂಘಟನಾ ಕಾರ್ಯ ದರ್ಶಿಗಳಾದ ರವಿ ಹೆಬ್ಬಾರೆ, ವಿನಾಯಕ ಟಿಕಾರೆ, ತರುಣ ಮಂಡಳದ ಮಾಜಿ ಅಧ್ಯಕ್ಷ ಲೋಕೇಶ್ ಬೆಳಂಕರ್, ಭಜನಾ ಮಂಡಳಿಯ ಸದಸ್ಯ ವಿಠ್ಠಲ ವಂಟಕರ್ ಹಾಗೂ ಮತ್ತಿತರರು ಉಪಸ್ಥಿತರಿದರು.