ಶಾಸಕ ರಾಮಪ್ಪ ಆರೋಪಕ್ಕೆ ತಹಶೀಲ್ದಾರ್ ರಾಮಚಂದ್ರಪ್ಪ ಸ್ಪಷ್ಟನೆ
ಹರಿಹರ, ಮೇ 24- ಕೊರೊನಾ ರೋಗ ನಿರ್ವಹಣೆಯಲ್ಲಿ ತಾಲ್ಲೂಕು ಆಡಳಿತದ ವತಿ ಯಿಂದ ಯಾವುದೇ ಲೋಪದೋಷಗಳು ಆಗಿರುವು ದಿಲ್ಲ. ಶಾಸಕ ಎಸ್. ರಾಮಪ್ಪ ಮಾಡಿರುವ ಆರೋಪಕ್ಕೆ ಸೂಕ್ತ ದಾಖಲೆಗಳ ಸಮೇತ ಬರವಣಿಗೆ ಮೂಲಕ ಮಾಹಿತಿ ನೀಡಲು ಸಿದ್ಧನಿರುವುದಾಗಿ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಹೇಳಿದ್ದಾರೆ.
ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸರ್ಕಾರ ವಿಪತ್ತು ನಿರ್ವಹಣೆ ಸಮಯದಲ್ಲಿ ಹಣವನ್ನು ಬಿಡುಗಡೆ ಮಾಡಿದ್ದು, ಆ ಹಣದಲ್ಲಿ ರೈತರ ಬೆಳೆ ಹಾನಿ ಮತ್ತು ಮನೆಗಳಿಗೆ ಹಾನಿಯಾದ ಸಮಯದಲ್ಲಿ ಹಾಗೂ ಕೊರೊನಾ ರೋಗವನ್ನು ತಡೆಗಟ್ಟಲು ಕೋವಿಡ್ ಕೇರ್ ಸೆಂಟರ್ ತೆರೆಯಲು ಬೇಕಾಗುವ ಅಗತ್ಯ ವಸ್ತುಗಳನ್ನು ಖರೀದಿಸಲು ಮಾತ್ರ ಹಣ ಬಳಕೆ ಮಾಡುವುದಕ್ಕೆ ಸೂಚಿಸಲಾಗಿದೆ. ಅದರಂತೆ ನಾವು ಕೂಡ ಆ ಹಣದಲ್ಲಿ ಎಲ್ಲವನ್ನೂ ಪೂರೈಸುವ ಕೆಲಸವನ್ನು ಮಾಡಿರುವುದಾಗಿ ಇದರಲ್ಲಿ ಯಾವುದೇ ಮುಚ್ಚು ಮರೆ ಹಾಗೂ ಲೋಪದೋಷ ಗಳನ್ನು ಮಾಡಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಡರನಾಯಕನಹಳ್ಳಿ ಗ್ರಾಮದಲ್ಲಿ ಇಪ್ಪತ್ತು ಜನರಿಗೆ ಕೊರೊನಾ ದೃಢಪಟ್ಟಿದ್ದು, ಒಬ್ಬ ವ್ಯಕ್ತಿ ಮಾತ್ರ ಮರಣ ಹೊಂದಿದ್ದಾನೆ. ಬೇರೆ ಕಾರಣದಿಂದ ಮರಣವನ್ನು ಹೊಂದಿದರೆ ಅದಕ್ಕೆ ತಾಲ್ಲೂಕು ಆಡಳಿತ ಕಾರಣವಲ್ಲ ಎಂದವರು ಹೇಳಿದ್ದಾರೆ.
ಗುತ್ತೂರು, ಎಸ್‌ಜೆವಿಪಿ ಕಾಲೇಜಿನಲ್ಲಿ 150 ಮತ್ತು ಕೊಂಡಜ್ಜಿ ಗ್ರಾಮದಲ್ಲಿ 120 ಜನರು ಸೇರಿದಂತೆ ಒಟ್ಟು 500 ಜನರಿಗೆ ಕೋವಿಡ್ ಕೇರ್ ಸೆಂಟರ್ ತೆರೆದು ಊಟ, ಶುದ್ಧ ನೀರು, ಬೆಡ್, ಗುಣಮಟ್ಟದ ಚಿಕಿತ್ಸೆ, ನಗರಸಭೆ ಯಿಂದ ಸ್ವಚ್ಛತೆ ವ್ಯವಸ್ಥೆ ಕಲ್ಪಿಸಲಾಗಿದೆ. ಅನು ಮಾನ ಇದ್ದರೆ ಪಿಪಿಇ ಕಿಟ್ ಹಾಕಿಕೊಂಡು ಹೋಗಿ ಪರಿಶೀಲನೆ ಮಾಡಿ ಕೊಂಡು ಬರಬಹುದು. ಸಾವಿರ ಜನರು ಸಾವಿರ ದೂರನ್ನು ನೀಡುತ್ತಾರೆ. ಅದಕ್ಕೆಲ್ಲಾ ಗಮನ ಹರಿಸು ವುದಕ್ಕೆ ಸಮಯ ಇಲ್ಲ. ರಾತ್ರಿ ವೇಳೆ ಸಹ ಸಹಾಯ ವಾಣಿ ಕೇಂದ್ರ, ಕೋವಿಡ್ ಕೇರ್ ಸೆಂಟರ್, ಸದರನ್ ಗ್ಯಾಸ್ ಕೇಂದ್ರ, ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ ಎಂದರು.
ಸಂತ ಅಲೋಶಿಯಸ್ ಕಾಲೇಜು ವತಿಯಿಂದ ಒಂದು ಆಂಬ್ಯುಲೆನ್ಸ್ ನೀಡಲಾಗಿದೆ. ಸರ್ಕಾರ ಸಹ ಒಂದು ನೀಡಿದ್ದು 7829671147 ನಂ ಗೆ ಕಾಲ್ ಮಾಡಿ ಸಾರ್ವಜನಿಕರು ಪಡೆಯಬಹುದು. ಅಗತ್ಯ ಸೌಲಭ್ಯಗಳು ಬೇಕಾದ ಸಮಯದಲ್ಲಿ ಕೋವಿಡ್ ವಾರ್‌ರೂಂ 7259870608 ನಂಬರ್‌ಗೆ ಕಾಲ್ ಮಾಡಿದರೆ ಸದಾಕಾಲ ಸೇವೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರದ ಸಾರ್ವಜನಿಕ ಆಸ್ಪತ್ರೆಗೆ ಮೆಡಿಕಲ್ ಆಕ್ಸಿಜನ್ ಸರಬರಾಜು ಆಗುವಲ್ಲಿ ಯಾವುದೇ ರೀತಿಯ ವ್ಯತ್ಯಾಸಗಳು ಆಗಿರುವುದಿಲ್ಲ. ಸದರನ್ ಗ್ಯಾಸ್ ಕೇಂದ್ರದವರು ನಾವು ಕೇಳಿದಾಗ ತಕ್ಷಣವೇ ಸ್ಪಂದಿಸುವ ಕೆಲಸವನ್ನು ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ತಾಪಂ ಇ.ಓ. ಗಂಗಾಧರನ್ ಮಾತನಾಡಿ, ಗ್ರಾಮೀಣ ಪ್ರದೇಶದ 24 ಗ್ರಾ.ಪಂ.ನಲ್ಲಿ ಸ್ಯಾನಿಟೈಸ್ ಮಾಡಲಾಗಿದೆ ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಮೋಹನ್ ಮಾತನಾಡಿ, ತಾಲ್ಲೂಕಿನಲ್ಲಿ ಇಂದು 86 ಜನರಿಗೆ ಕೊರೊನಾ ರೋಗ ದೃಢಪಟ್ಟಿದ್ದು, ಅದರಲ್ಲಿ 81 ಜನರು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇಲ್ಲಿಯವರೆಗೆ 620 ಸಕ್ರಿಯ ಪ್ರಕರಣಗಳು ಇದ್ದು, ಅದರಲ್ಲಿ 272 ಹೋಂ ಐಸೋಲೇಷನ್‌ನಲ್ಲಿ 181 ಕೋವಿಡ್ ಕೇರ್ ಸೆಂಟರ್ ನಲ್ಲಿ, ಸಾರ್ವಜನಿಕ ಆಸ್ಪತ್ರೆಯಲ್ಲಿ 60 ಕೊರೊನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 2000 ಸಾವಿರ ಲಸಿಕೆ ಬಂದಿದ್ದು 18 ರಿಂದ 44 ವರ್ಷದ ಹೆಲ್ತ್‌ಕೇರ್ ವಾರಿಯರ್ಸ್ ಮತ್ತು ಫ್ರಂಟ್ ಲೈನ್ ವಾರಿಯರ್ ಗಳಿಗೆ ಕೋವ್ಯಾಕ್ಸಿನ್ ಲಸಿಕೆ ಹಾಕಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾ ಖೆಯ ಕವಿತಾ, ಎಪಿಎಂಸಿಯ ವಿದ್ಯಾ, ಸಿಡಿ ಪಿಒ ನಿರ್ಮಲ, ಪ್ರಿಯದರ್ಶಿನಿ, ಅಬಕಾರಿ ಇಲಾಖೆಯ ಶೀಲಾ, ಶಿಕ್ಷಣ ಇಲಾಖೆ ಬಸವರಾಜಯ್ಯ, ಬಿಸಿಎಂ ಇಲಾ ಖೆಯ ಪರವಿನ್ ಬಾನು, ಲೋಕೋಪಯೋಗಿ ಇಲಾಖೆಯ ಚಂದ್ರಕಾಂತ್ ಇತರರು ಹಾಜರಿದ್ದರು.