ದಾವಣಗೆರೆ, ಆ.2- ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಒಬಿಸಿ ಘಟಕದಿಂದ ಇಂದು ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಎತ್ತಿನ ಗಾಡಿಯಲ್ಲಿ ಮೆರವಣಿಗೆಯ ಮುಖಾಂತರ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಇದಕ್ಕೂ ಮುನ್ನ ಒಬಿಸಿ ಘಟಕದ ರಾಜ್ಯಾಧ್ಯಕ್ಷ ಎಂ.ಡಿ. ಲಕ್ಷ್ಮಿನಾರಾಯಣ ಅವರು ರಾಯಣ್ಣನ ಪ್ರತಿಮೆಗೆ ಹೂವಿನ ಹಾರ ಹಾಕುವ ಮುಖಾಂತರ ಪ್ರತಿಭಟನೆಗೆ ಚಾಲನೆ ನೀಡಿದರು.
ಸಂಗೊಳ್ಳಿ ರಾಯಣ್ಣನ ವೃತ್ತದಿಂದ ವರ್ತುಲ ರಸ್ತೆಯ ಮುಖಾಂತರ ಕಾಂಗ್ರೆಸ್ ಕಚೇರಿವರೆಗೆ ಎತ್ತಿನ ಗಾಡಿ ಮೆರವಣಿಗೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಆಶಾ ಉಮೇಶ್, ಹಾಲೇಶ್, ಎಐಸಿಸಿ ಸಂಯೋಜಕ ಸತೀಶ್ ಕುಮಾರ್, ಕೆಪಿಸಿಸಿ ಮುನಿರತ್ನ, ಮಾಲಾ, ಒಬಿಸಿ ಘಟಕದ ರಾಜ್ಯ ಪದಾಧಿಕಾರಿಗಳಾದ ಜಮ್ನಳ್ಳಿ ನಾಗರಾಜ್, ಶುಭಮಂಗಳ, ಸಂಗಮ್ಮ, ರಾಧಾಬಾಯಿ, ಭಾರತಿ, ವಿದ್ಯಾ, ಸಲ್ಮಾಬಾನು, ಬಿ.ಎಂ. ಪಾಟೀಲ್, ನಂದಿಗಾವಿ ಶ್ರೀನಿವಾಸ್, ವಿನಯ್, ಅಭಿ, ಆಕಾಶ್, ಮಧು ಕುಮಾರ್, ನಿಂಗರಾಜು, ರವಿ ಶಿಕಾರಿಪುರ, ನಜೀರ್, ಬೀರಪ್ಪ, ಹೊನ್ನಾಳಿ ಶ್ರೀನಿವಾಸ್ ಸೇರಿದಂತೆ ಇತರರು ಭಾಗವಹಿಸಿದ್ದರು.