ದಾವಣಗೆರೆ, ಮೇ 23- ಭಾರತೀಯ ರೆಡ್ಕ್ರಾಸ್ ಸಂಸ್ಥೆ ದಾವಣಗೆರೆ ಜಿಲ್ಲಾ ಶಾಖೆಯಿಂದ ನಗರದ ಜಿಲ್ಲಾ ಚಿಗಟೇರಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ರೆಡ್ ಕ್ರಾಸ್ ಸಂಸ್ಥೆಯ ಛೇರ್ಮನ್ ಡಾ. ಶಿವಕುಮಾರ್ ಅವರ ಮಾರ್ಗದರ್ಶನದ ಮೇರೆಗೆ ಆಕ್ಸಿಜನ್ ಕಾನ್ಸಂಟ್ರೇಟರನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಡಿಎಚ್ಓ ಡಾ. ನಾಗರಾಜ್, ಜಿಲ್ಲಾಸ್ಪತ್ರೆಯ ಅಧೀಕ್ಷಕ ಡಾ. ಜಯಪ್ರಕಾಶ್, ರೆಡ್ಕ್ರಾಸ್ ಸಂಸ್ಥೆಯ ವೈಸ್ ಛೇರ್ಮರ್ನ್ಗಳಾದ ಗೌಡ್ರು ಚನ್ನಬಸಪ್ಪ, ಡಿ.ಎಸ್. ಸಿದ್ದಣ್ಣ, ಕಾರ್ಯದರ್ಶಿ ಡಿ.ಎಸ್. ಸಾಗರ್, ನಿರ್ದೇಶಕರುಗಳಾದ ಆನಂದ ಜ್ಯೋತಿ, ಇನಾಯತ್ಉಲ್ಲಾ, ಕೆ.ಕೆ. ನಾಗರಾಜ್, ರವಿಕುಮಾರ್, ಕರಿಬಸವಪ್ಪ, ಆಸಿಯಾಬಾನು, ಶ್ರೀಕಾಂತ ಬಗರೆ ಮತ್ತಿತ್ತರರು ಉಪಸ್ಥಿತರಿದ್ದರು.