ದಾವಣಗೆರೆಯಲ್ಲಿ ಸಂಭ್ರಮದ ಅಜ್ಜಿ ಹಬ್ಬ

ದಾವಣಗೆರೆ ನಗರದಲ್ಲಿ ಅಜ್ಜಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಆಷಾಢ ಮಾಸದ ಕೊನೆ ಶುಕ್ರವಾರ ಆಚರಿಸುವ ಈ ಹಬ್ಬದಲ್ಲಿ ಮಕ್ಕಳಿಗೆ ಯಾವುದೇ ದಡಾರ, ಅಮ್ಮ ಎಳದಿರಲಿ, ಆರೋಗ್ಯವನ್ನು ಕೊಟ್ಟು ಕಾಪಾಡು ಎಂದು ದೇವಿಯನ್ನು ಪ್ರಾರ್ಥಿಸಿ ಪೂಜಿಸಲಾಗುತ್ತದೆ. ತಟ್ಟೆ ಅಥವಾ ಬಾಳೆ ಎಲೆಯಲ್ಲಿ ಕೇಲ್ (ಮಣ್ಣಿನ ಕುಡಿಕೆ)ನಲ್ಲಿ ಬಳೆ, ಅರಿಶಿಣ ಕುಂಕುಮ,  ವಸ್ತ್ರದ ಜೊತೆಗೆ ಬೇವಿನ ಸೊಪ್ಪು ಇಟ್ಟು ದೇವರ ಸ್ವರೂಪಿ ಅಜ್ಜಿಯನ್ನು ಪ್ರತಿಷ್ಠಾಪಿಸಿ ಹೂವಿನ ಅಲಂಕಾರ ಮಾಡಿ ಶೃಂಗರಿಸಿ ಹೋಳಿಗೆ, ಕರಿಗೆಡಬು ಸೇರಿದಂತೆ ಸಿಹಿಯೂಟದ ನೈವೇದ್ಯ ಅರ್ಪಿಸಿ ವಿಶೇಷ ಪೂಜೆ-ಪ್ರಾರ್ಥನೆ ಸಲ್ಲಿಸಿ, ನಂತರ ಬರಿಗಾಲಿನಲ್ಲಿ ನಡೆದು ಸಮೀಪದ ದೇವಿ ದೇವಸ್ಥಾನದ ಬಳಿ ವಿಸರ್ಜಿಸಲಾಗುತ್ತದೆ. ದಾವಣಗೆರೆ ನಿಟುವಳ್ಳಿ ಶ್ರೀ ದುರ್ಗಾಂಭಿಕಾ ದೇವಸ್ಥಾನ ಬಳಿ ಎಡೆ ಪಡೆಯಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು.

error: Content is protected !!