ಹರಿಹರದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ
ಹರಿಹರ, ಮೇ 19- ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಾ ದದಿಂದ, ಶ್ರೀ ತರಳಬಾಳು ಯುವಕರ ಸಂಘ, ಶ್ರೀ ತರಳಬಾಳು ಮಹಿಳಾ ಘಟಕ ಮತ್ತು ಶ್ರೀ ಸಾಧು ವೀರಶೈವ ಸಮಾಜ ಹರಿಹರ ತಾಲ್ಲೂಕು ವತಿಯಿಂದ ಕೊರೊನಾ ವಾರಿಯರ್ಸ್ ಮತ್ತು ಪರಿಚಾರಕರಿಗೆ ಮಧ್ಯಾಹ್ನದಲ್ಲಿ ಊಟದ ವ್ಯವಸ್ಥೆ ಮಾಡಿರುವುದು ಇನ್ನೊಬ್ಬರಿಗೆ ಪ್ರೇರಣೆ ನೀಡುತ್ತದೆ. ಇಂತಹ ಸಮಾಜ ಮುಖಿ ಕಾರ್ಯವನ್ನು ಮಾಡಿರುವ ಈ ಸಮಿತಿಯು ಸಮಾಜದ ಒಳಿತಿಗಾಗಿ ಇನ್ನೂ ಹೆಚ್ಚಿನ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಆಶಯ ವ್ಯಕ್ತಪಡಿಸಿದರು.
ನಗರದ ಶಿವಮೊಗ್ಗ ರಸ್ತೆಯ ಶ್ರೀ ತರಳಬಾಳು ಶಾಲೆ ಆವರಣದಲ್ಲಿ ಕೊರೊನಾ ವಾರಿಯರ್ಸ್ ಮತ್ತು ಪರಿಚಾರಕರಿಗೆ ಮಧ್ಯಾಹ್ನ ಊಟದ ವ್ಯವಸ್ಥೆಗೆ ಚಾಲನೆ ನೀಡಿ ಅವರು ಮಾತನಾಡಿದರು. ನಗರದ ಆಸ್ಪತ್ರೆ, ಚೆಕ್ ಪೋಸ್ಟ್ ಹಾಗೂ ಕಚೇರಿಗಳಲ್ಲಿ ಸುಮಾರು 400 ರಿಂದ 500 ಸರ್ಕಾರಿ ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ನಿರ್ವಹಣೆ ಮಾಡುತ್ತಿದ್ದು, ಅವರಿಗೆ ತರಳಬಾಳು ಯುವಕ ಸಂಘದ ಮುಖಂಡರು ಪ್ರತಿ ನಿತ್ಯವೂ ಅನ್ನ ದಾಸೋಹವನ್ನು ಕರ್ತವ್ಯ ನಿರತ ಸ್ಥಳಕ್ಕೆ ತಲುಪಿಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲ್ಯಾಘನೀಯ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಅಶ್ವಿನಿ ಕೆ.ಜಿ.ಕೃಷ್ಣ, ವಿಜಯಕುಮಾರ್, ರಜನಿಕಾಂತ್, ನೀತಾ ಮೆಹರ್ವಾಡೆ, ಎಪಿಎಂಸಿ ಸದಸ್ಯ ನರೇಂದ್ರ ಬೆಳ್ಳೂಡಿ, ಗ್ರಾ.ಪಂ. ಸದಸ್ಯೆ ಗೀತಮ್ಮ, ವೀರಣ್ಣ ಕೊಂಡಜ್ಜಿ, ಶಿವಕುಮಾರ್ ಕೊಂಡಜ್ಜಿ, ರಾಘವೇಂದ್ರ, ತುಳಜಪ್ಪ ಭೂತೆ, ಪ್ರವೀಣ್ ಇನ್ನಿತರರು ಹಾಜರಿದ್ದರು.