ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ಅವರಿಂದ 50 ಸಾವಿರ ರೂ., 500 ತೆಂಗಿನ ಕಾಯಿ ದಾನ
ದಾವಣಗೆರೆ, ಮೇ 19- ನಗರದ ತರಳ ಬಾಳು ಸೇವಾ ಸಮಿತಿ ಮತ್ತು ಶಿವಸೈನ್ಯ ಯುವಕರ ತಂಡವು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗ ಳವರ ಆಶಯದಂತೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿ ರುವುದು ಶ್ಲ್ಯಾಘನೀಯ ಎಂದು ನಗರದ ಅಪೂರ್ವ ಗ್ರೂಪ್ ಹೋಟೆಲ್ ಮಾಲೀ ಕರೂ ಆದ ಅಖಿಲ ಭಾರತ ವೀರಶೈವ ಮಹಾ ಸಭಾದ ಉಪಾಧ್ಯಕ್ಷ ಅಣಬೇರು ರಾಜಣ್ಣ ಹೇಳಿದ್ದಾರೆ.
ಕೊರೊನಾ ಸೋಂಕಿತರು, ಅವರ ಅವಲಂಬಿತರು, ಬಡ ರೋಗಿಗಳು, ನಿರ್ಗತಿಕರಿಗೆ ಪ್ರತಿನಿತ್ಯವೂ ಅವರಿದ್ದಲ್ಲಿಗೇ ಹೋಗಿ ಊಟದ ವ್ಯವಸ್ಥೆ ಮಾಡುತ್ತಿರುವುದು ಅತ್ಯಂತ ಪರಿಣಾಮಕಾರಿ ಹಾಗೂ ಪರೋಪಕಾರಿಯಾದುದು.
ಈ ನಿಟ್ಟಿನಲ್ಲಿ ಕೊರೊನಾ ಮಹಾಮಾರಿಗೆ ಸಿಲುಕಿರುವ ರೋಗಿಗಳು, ಸಂತ್ರಸ್ತರಿಗೆ ನೆರವಾಗುತ್ತಿರುವ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಕಾರ್ಯ ಶ್ಲಾಘನೀಯ ಮತ್ತು ಅನನ್ಯ ಎಂದು ರಾಜಣ್ಣ ಅವರು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.
ಈ ಕಾರ್ಯವನ್ನು ಮೆಚ್ಚಿ ರಾಜಣ್ಣ ಅವರು ಸ್ವತಃ 50 ಸಾವಿರ ರೂ. ಮತ್ತು 500 ತೆಂಗಿನ ಕಾಯಿ ಗಳನ್ನು ಕೊಟ್ಟಿದ್ದಾರೆ. ಚಿಗಟೇರಿ ಶ್ರೀ ನಾರದಮುನಿ ದೇವ ಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷರೂ ಆಗಿರುವ ರಾಜಣ್ಣ, ಈ ಟ್ರಸ್ಟ್ ವತಿಯಿಂದ 1 ಲಕ್ಷ ರೂ. ನೀಡಿದ್ದಾರೆ. ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ಅನೇಕ ಜೀವಿಗಳಿಗೆ ಎಲ್ಲರೂ ನೆರವಾಗೋಣ ಎಂದು ಅಣಬೇರು ರಾಜಣ್ಣ ಕರೆ ನೀಡಿದ್ದಾರೆ.
ಶಶಿಧರ್ ಹೆಮ್ಮನಬೇತೂರು ಕರೆ : ಹಲವು ದಾನಿಗಳು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಸಾರ್ವಜನಿಕರು ಹಾಗೂ ಗ್ರಾಮೀಣ ಪ್ರದೇಶದ ಜನರು, ಸಂಘ-ಸಂಸ್ಥೆಯವರು ಉದಾರ ವಾಗಿ ದವಸ-ಧಾನ್ಯ, ತಾವು ಬೆಳೆದ ತರಕಾರಿ ಅಡುಗೆಗೆ ಬೇಕಾದ ದಿನಸಿ ಸಾಮಾನುಗಳನ್ನು ಅಥವಾ ನಗದನ್ನು ಶಿವ ಸೈನ್ಯ ಯುವಕ ತಂಡ ಹಾಗೂ ತರಳಬಾಳು ಸೇವಾ ಸಮಿತಿಗೆ ಸಂದಾಯ ಮಾಡಿ ರಶೀದಿ ಪಡೆಯುವಂತೆ ಸಂಘದ ಗೌರವಾಧ್ಯಕ್ಷ ಶಶಿಧರ್ ಹೆಮ್ಮನಬೇತೂರು ಕೋರಿದ್ದಾರೆ.
ವಿವರಕ್ಕೆ ಶಿವಸೈನ್ಯ ಗೌರವಾಧ್ಯಕ್ಷ ಶಶಿಧರ ಹೆಮ್ಮನ ಬೇತೂರು (99801 55612), ಮಾಗನೂರು ಉಮೇಶ್ ಗೌಡ್ರು (98443 05303) ಅವರನ್ನು ಸಂಪರ್ಕಿಸಬಹುದು.