ದಾವಣಗೆರೆ : ನಗರದ ಕೆ.ಆರ್. ಮಾರುಕಟ್ಟೆ, ಮಂಡಿಪೇಟೆ, ಗಡಿಯಾರ ಕಂಬ ಸೇರಿದಂತೆ ಪ್ರಮುಖ ಮಾರುಕಟ್ಟೆಯ ಹಲವು ಕಡೆಗಳಲ್ಲಿ ಪೊಲೀಸರು ಕೊರೊನಾ ನಿರ್ಬಂಧಗಳ ಹಿನ್ನೆಲೆಯಲ್ಲಿ ಜನರನ್ನು ನಿಯಂತ್ರಿಸಲು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ. ತರಕಾರಿ ಗಾಡಿಗಳೂ ಸಹ ಬ್ಯಾರಿಕೇಡ್ ದಾಟಿ ಸ್ಥಳಾಂತರಗೊಂಡಿದ್ದವು. ಇದರಿಂದಾಗಿ ಜನರು ಬ್ಯಾರಿಕೇಡ್ ದಾಟಿ ಒಳ ಹೋಗಿ ಬರುವ ‘ಅಂದರ್ ಬಾಹರ್’ ಕಸರತ್ತು ನಡೆಸಬೇಕಾಯಿತು.
December 22, 2024