ದಾವಣಗೆರೆ, ಮಾ. 12- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ತನ್ನದೇ ಆದ ಪ್ರತ್ಯೇಕ ಇತಿಹಾಸವಿದೆ. ಕೇವಲ ಅಂಕಪಟ್ಟಿಯ ಪದವಿ ನೀಡದೆ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ವಿ ಶ್ವವಿದ್ಯಾನಿಲಯವನ್ನು ಜೋಡಿಸಿಕೊಳ್ಳುತ್ತಿರು ವುದು, ವಿದ್ಯಾರ್ಥಿಗಳನ್ನು ಬೆಸೆಯುತ್ತಿರುವುದು ಸ್ವಾಗತಾರ್ಹ ಸಂಗತಿ ಎಂದು ಮಹಾನಗರಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ದಾವಣಗೆರೆ ಪ್ರಾದೇಶಿಕ ಕೇಂದ್ರ ತನ್ನ ವ್ಯಾಪ್ತಿಯ ಎಂಬಿಎ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಶುಭ ಹಾರೈಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನ ಬೇರೆ ಯಾವುದೇ ದೇಶದ ವಿದ್ಯಾರ್ಥಿಗಳಿಗೆ ಇಲ್ಲದ ಜವಾಬ್ದಾರಿ ಭಾರತೀಯ ವಿದ್ಯಾರ್ಥಿಗಳಿಗೆ ಇದೆ. ಕಾರಣ, ಭಾರತ ತನ್ನ ನಾಗರಿಕತೆ ಮತ್ತು ಸಂಸ್ಕೃತಿಯ ಪ್ರಸರಣಕ್ಕಾಗಿ ವಿಶ್ವದಲ್ಲಿ ಪ್ರಸಿದ್ಧಿ ಹೊಂದಿದೆ ಎಂದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಶಶಿಧರ್, ಅಧ್ಯಕ್ಷತೆ ವಹಿಸಿದ್ದ ಪ್ರಾದೇಶಿಕ ನಿರ್ದೇಶಕ ಡಾ.ಸುಧಾಕರ ಹೊಸಳ್ಳಿ , ಪ್ರಸ್ತುತ ಕುಲಪತಿಗಳಾದ ಪ್ರೊ. ವಿದ್ಯಾಶಂಕರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೆಎಸ್‍ಒಯು ಪ್ರಾಧ್ಯಾಪಕ ಡಾ.ಚಿನ್ನಯ್ಯ, ಆರ್‍ಎಲ್ ಲಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪವನ್ ಮತ್ತು ದಾವಣಗೆರೆ ವಿವಿಯ ಪ್ರಾಧ್ಯಾಪಕ ರಮೇಶ್ ಚಂದ್ರಹಾಸ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು ಹಾಗೂ ರವಿ, ಮಂಜುನಾಥ್ ಮತ್ತಿತರರು ಹಾಜರಿದ್ದರು.