ದಾವಣಗೆರೆ, ಮಾ. 11 – ಕೊರೊನಾ ರೋಗಿಗಳ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲೊಬ್ಬರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಗರದ ಜಿಲ್ಲಾ ಚಿಗಟೇರಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ನರ್ಸಿಂಗ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಆಶಾ ಕಾಂಬ್ಳೆ ಅವರನ್ನು ದಾವಣಗೆರೆ – ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನಿಂದ ಸನ್ಮಾನಿಸಲಾಯಿತು.
ಬ್ಯಾಂಕಿನ ಸಭಾಂಗಣದಲ್ಲಿ ನಿನ್ನೆ ಏರ್ಪಾ ಡಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯ ಕ್ರಮದ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ಎನ್.ಎ. ಮುರುಗೇಶ್ ಅವರು ಆಶಾ ಕಾಂಬ್ಳೆ ಅವರನ್ನು ಶಾಲು ಹೊದಿಸಿ ಫಲ-ಪುಷ್ಪಗ ಳೊಂದಿಗೆ ಸನ್ಮಾನಿಸಿ, ಗೌರವ ಸಮರ್ಪಿಸಿದರು.
ಕಳೆದ ಎಂಟತ್ತು ತಿಂಗಳ ಕಾಲ ವಿಶ್ವವನ್ನೇ ತಲ್ಲಣಗೊಳಿಸಿದ ಕೊರೊನಾ ಸಮಯದಲ್ಲಿ ಆ ಹೆಸರನ್ನು ಕೇಳಿದಾಕ್ಷಣ ಓಡಿ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಂದರ್ಭದಲ್ಲಿ ಒಂದೇ ಒಂದು ದಿನ ರಜೆಯನ್ನು ತೆಗೆದುಕೊಳ್ಳದೇ ಕಾಯಕ ಮಾಡುವುದರ ಮೂಲಕ ರೋಗಿಗಳ ಹಾರೈಕೆ ಮಾಡು ವಲ್ಲಿ ಆಶಾ ಕಾಂಬ್ಳೆ ಅವರ ಸೇವೆ ಶ್ಲ್ಯಾಘನೀಯವಾದದ್ದು.
ಮೂಲತಃ ಹುಬ್ಬಳ್ಳಿಯವರಾದ ಆಶಾ, ಸುಮಾರು 35 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ತುರ್ತು ಚಿಕಿತ್ಸಾ ಘಟಕ ದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ಸರ್ಜರಿ, ಮೆಡಿಕಲ್, ಹೆರಿಗೆ ವಿಭಾಗಗಳಲ್ಲೂ ಅವರ ಕಾರ್ಯ ನಿರ್ವಹಣೆ ಅನನ್ಯ.
ಸನ್ಮಾನ ಸ್ವೀಕರಿಸಿ ಮಾತನಾಡಿದ ಆಶಾ ಕಾಂಬ್ಳೆ, ಕೊರೊನಾ ಸಮಯದಲ್ಲಿ ತಾವು ಸಲ್ಲಿಸಿದ ಸೇವೆಯನ್ನು ಮೆಲುಕು ಹಾಕಿದರು. 250ಕ್ಕೂ ಹೆಚ್ಚು ತನ್ನ ಸಿಬ್ಬಂದಿಗಳು ಹಗಲು-ರಾತ್ರಿ ಎನ್ನದೇ ಕೆಲಸ ಮಾಡುವುದರೊಂದಿಗೆ ತಮಗೆ ಸಾತ್ ನೀಡಿದ್ದು, ಅವರೆಲ್ಲರ ಸಹಾಯ, ಸಹಕಾರ ಮರೆಯುವಂತಿಲ್ಲ. ಇದರಿಂದಾಗಿ ತಮ್ಮ ಕಾಯಕ ಸಾರ್ಥಕವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬ್ಯಾಂ ಕಿನ ಅಧ್ಯಕ್ಷ ಎನ್.ಎ. ಮುರುಗೇಶ್ ಮಾತ ನಾಡಿ, ವಿಶ್ವದಲ್ಲಿನ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಜೀವಕ್ಕೆ ಅಂಜದೆ ರೋಗಿಗಳ ಸೇವೆ ಮಾಡಿದ ಆಶಾ ಕಾಂಬ್ಳೆ ಅವರ ಸೇವೆ ಮೆಚ್ಚುವಂತದ್ದು ಎಂದು ಹೇಳಿದರಲ್ಲದೇ, ಆಶಾ ಅವರು ನಮ್ಮ ಬ್ಯಾಂಕಿನಿಂದ ಗೌರವ ಸ್ವೀಕರಿಸಿರುವುದು ನಮ್ಮ ಬ್ಯಾಂಕಿನ ಭಾಗ್ಯ ಎಂದು ಹೇಳಿದರು.
ಬ್ಯಾಂಕಿನ ಉಪಾಧ್ಯಕ್ಷ ಕಿರುವಾಡಿ ಸೋಮಶೇಖರ್, ನಿರ್ದೇಶಕರುಗಳಾದ ಎಸ್.ಕೆ. ವೀರಣ್ಣ, ರಮಣ್ ಲಾಲ್ ಸಂಘವಿ, ಎ.ಹೆಚ್. ಕುಬೇರಪ್ಪ, ಶಂಕರ್ ಖಟಾವ್ಕರ್, ಶ್ರೀಮತಿ ಜಯಮ್ಮ ಪರಶುರಾಮಪ್ಪ, ಶ್ರೀಮತಿ ಶಶಿಕಲಾ ರುದ್ರಯ್ಯ, ಎಸ್.ಕೆ. ಪ್ರಭುಪ್ರಸಾದ್, ಪಿ.ಹೆಚ್. ವೆಂಕಪ್ಪ, ಕೆ.ಹೆಚ್. ಶಿವಯೋಗಪ್ಪ, ಶ್ರೀಮತಿ ಕೆ.ಎಂ. ಜ್ಯೋತಿ ಪ್ರಕಾಶ್, ಶ್ರೀಮತಿ ಅನಿಲಾ ಇಂಧೂದರ ನಿಶಾನಿಮಠ, ಆರ್.ವಿ. ಶಿರಸಾಲಿಮಠ, ಕಿರಣ್ ಶೆಟ್ಟಿ, ಜಿ.ಕೆ. ವೀರಣ್ಣ, ಶ್ರೀಮತಿ ಉಮಾ ವಾಗೀಶ್, ನಾಗೇಂದ್ರಾಚಾರಿ, ಕೆ.ಎಂ. ಬಸವರಾಜ್, ಶ್ರೀಮತಿ ಜಿ.ಸಿ. ವಸುಂಧರ, ಶ್ರೀಮತಿ ಶೈಲಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ
ಎಂ. ಶಿವಲಿಂಗ ಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.