ರಾಜ್ಯ ಸರ್ಕಾರದ ವಿರುದ್ಧ ಮನೆಗಳಲ್ಲಿ ಪ್ರತಿಭಟನೆ

ದಾವಣಗೆರೆ, ಮೇ 16- ಕೋವಿಡ್ ಸಂದರ್ಭದಲ್ಲಿ ಜನರ ಜೀವ ಉಳಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಪ್ರತಿಭಟನೆ ನಡೆಸಿದ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟ ಸಂಘಟನೆಯ ಮುಖಂಡರು ಸರ್ಕಾರದ ಧೋರಣೆಯನ್ನು ಖಂಡಿಸಿದರು.

ಲಾಕ್‌ಡೌನ್ ಕಾರಣ ಬಹುತೇಕರು ತಮ್ಮ ಮನೆಗಳು ಹಾಗೂ ಮನೆ  ಸಮೀಪದ ವೃತ್ತಗಳಲ್ಲಿ ಸೇರಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು.   

ಜನಾಗ್ರಹ ಆಂದೋಲನದ ಕರೆಯಂತೆ ನಡೆದ ಈ ಪ್ರತಿಭಟನೆಯಲ್ಲಿ ಪೌರ ಕಾರ್ಮಿ ಕರು, ಒಳಚರಂಡಿ ಕಾರ್ಮಿಕರು,  ಕಟ್ಟಡ ನಿರ್ಮಾಣ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಸೇರಿ ಹಲವರು ಪಾಲ್ಗೊಂಡಿದ್ದರು.  ಸರ್ಕಾರದ ಧೋರಣೆಯಿಂದಾಗಿ ದುಡಿಯುವ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಈ ಬಿಕ್ಕಟ್ಟಿನ ಬಗ್ಗೆ ಮುಖಂಡರು ಮುಖ್ಯಮಂತ್ರಿ ಅವರಿಗೆ ಮನವಿ ನೀಡಿದ್ದರೂ ಸಹ, ಅದನ್ನು ಪರಿಗಣಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಜಿಲ್ಲಾಧ್ಯಕ್ಷ ಮಂಜುನಾಥ್ ಕೆ.ಎಂ, ಉಪಾಧ್ಯಕ್ಷ ವೆಂಕಟೇಶ್ ಜೆ.ವಿ, ಸದಸ್ಯರುಗಳಾದ ಕೃಷ್ಣಪ್ಪ ಒ, ದುಗ್ಗಪ್ಪ, ಶಂಕರ್‌, ರೇಖಾ, ರಾಮಲಮ್ಮ, ಮಾರ್ತಾಂಡ, ಕುಮಾರ್, ಸಂತೋಷ್, ಮಹಾಂತೇಶ್ ಮತ್ತಿತರರು ಬೆಂಬಲ ವ್ಯಕ್ತಪಡಿಸಿದರು.

error: Content is protected !!