ಹರಿಹರದ ಬಳಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಹರಿಹರ, ದಾವಣಗೆರೆ ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶದ ಜನರು ಹೆಚ್ಚಿನ ಸಂಖ್ಯೆಯಲ್ಲಿ ನದಿ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಭಾನುವಾರ ನದಿಯ ಸೇತುವೆ ಮೇಲೆ ಕುಟುಂಬವೊಂದು ನದಿಯ ಸೌಂದರ್ಯ ಹಾಗೂ ಅತ್ತ ಕಡೆಯ ರೈಲ್ವೇ ಸೇತುವೆ ಮೇಲೆ ರೈಲು ಬರುತ್ತಿದ್ದ ದೃಶ್ಯವನ್ನು ಸೆರೆ ಹಿಡಿಯುವಲ್ಲಿ ನಿರತವಾಗಿತ್ತು.
December 27, 2024