ವಿಪತ್ತಿನ ಸಮಯದಲ್ಲಿ ವದಂತಿ ಹರಡಿದರೆ ಕ್ರಮ : ಎಸ್ಪಿ

ವಿಪತ್ತಿನ ಸಮಯದಲ್ಲಿ ವದಂತಿ ಹರಡಿದರೆ ಕ್ರಮ : ಎಸ್ಪಿ - Janathavaniದಾವಣಗೆರೆ, ಜೂ. 6 – ಕೊರೊನಾ ರಾಷ್ಟ್ರೀಯ ವಿಪತ್ತಿನ ಸಮಯದಲ್ಲಿ ತಪ್ಪು ಮಾಹಿತಿ, ವದಂತಿ, ಆಧಾರ ರಹಿತ ಹಾಗೂ ದುರುದ್ಧೇಶದಿಂದ ಮಾಹಿತಿ ಗಳನ್ನು ಹರಡಿದರೆ ವಿಕೋಪ ನಿರ್ವಹಣೆ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲಾಗು ವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಹನುಮಂತರಾಯ ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ನಗರದ ಬಟ್ಟೆ ಅಂಗಡಿ ಯೊಂದು ಅರ್ಧ ತೆಗೆದು ಮಾರಲಾಗು ತ್ತಿದೆ ಎಂದು ಹಳೆಯ ವರ್ಷದ ವಿಡಿಯೋ ಅನ್ನು ಇತ್ತೀಚೆಗೆ ಜಾಲತಾಣ ದಲ್ಲಿ ಹರಿ ಬಿಡಲಾಗಿತ್ತು. ಅದೇ ರೀತಿ ಪೊಲೀಸರಿಂದ ದಂಡದ ರಸೀದಿ ಯಲ್ಲಿ ಹೆಸರು ಹಾಗೂ ಇತರೆ ವಿವರಗಳನ್ನು ಮರೆ ಮಾಚಿ, ಪೊಲೀಸರು ಅಮಾನವೀಯ ವಾಗಿ ನಡೆದು ಕೊಂಡಿದ್ದಾರೆ ಎಂದು ಹೇಳಿಕೆ ನೀಡುವ ತಪ್ಪು ಮಾಹಿತಿಯ ಚಿತ್ರವೊಂದನ್ನೂ ಸಹ ಹರಿ ಬಿಡಲಾಗಿತ್ತು ಎಂದು ಹೇಳಿದರು.

ಈ ಪ್ರಕರಣದಲ್ಲಿ ಭಾಗಿಯಾದ ಇಬ್ಬರೂ ಸಂಚಲನೆ ಸೃಷ್ಟಿಸಲು ಕೃತ್ಯ ಎಸಗಿದ್ದಾಗಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಕ ರಣಗಳನ್ನು ದಾಖಲಿಸಲಾಗಿದೆ. ಕೊರೊ ನಾ ಸಂದರ್ಭದಲ್ಲಿ ದುರುದ್ಧೇಶದಿಂದ ಮಾಹಿತಿ ಹರಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹನುಮಂತರಾಯ ಎಚ್ಚರಿಸಿದ್ದಾರೆ.

ಟ್ರಿಪಲ್ ರೈಡ್ ಮಾಡು ವವರು ಹಾಗೂ ಮಾಸ್ಕ್ ಧರಿಸದೇ ಇರುವವರು ಪೊಲೀ ಸರಿಗೆ ದಂಡ ಹಾಕಬೇಡಿ ಎಂದು ಹೇಳುತ್ತಾ ಅಸಹಕಾರ ನೀಡುವುದು ಕಂಡು ಬರುತ್ತಿದೆ. ಜನರಿಗೆ ದಂಡ ಹಾಕು ವುದು ನಮ್ಮ ಉದ್ದೇಶವಲ್ಲ. ಕೊರೊನಾ ಸಮಯದಲ್ಲಿ ಮುನ್ನೆಚ್ಚರಿಕೆ ವಹಿಸುವ ಮೂಲಕ ಜನರು ಸಹಕರಿಸಬೇಕು ಎಂದ ರು ಇದೇ ಸಂದರ್ಭದಲ್ಲಿ ತಿಳಿಸಿದರು.

ಕೊರೊನಾಗೆ ಸಂಬಂಧಿಸಿದಂತೆ ನೆರವು ಬೇಕಾದಾಗ ಜನರು ಸಹಾಯವಾಣಿಯಾದ 112 ಬಳಸಿಕೊಳ್ಳಬಹುದು ಎಂದು ಹೇಳಿದ ಎಸ್ಪಿ, ಆಕ್ಸಿಜನ್, ಬೆಡ್, ರೆಮ್‌ಡಿಸಿವಿರ್ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಸಹಾಯವಾಣಿ ಬಳಕೆ ಮಾಡಿಕೊಳ್ಳಬಹುದು ಎಂದು ಇದೇ ಸಂದರ್ಭದಲ್ಲಿ ಹೇಳಿದರು.

error: Content is protected !!