ಮಾಸ್ಕ್ ಹಾಕದವರಿಂದ 91 ಸಾವಿರ ದಂಡ

ಮಲೇಬೆನ್ನೂರು, ಮೇ 4- ಪಟ್ಟಣದಲ್ಲಿ ಲಾಕ್‌ಡೌನ್ ನಡು ವೆಯೂ ಮಾಸ್ಕ್ ಧರಿಸದೆ ಸಂಚರಿಸುವ ಮತ್ತು ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ ವ್ಯಕ್ತಿಗಳಿಂದ ಇಲ್ಲಿನ ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಮಂಗಳವಾರದವರೆಗೆ ಒಟ್ಟು 91,200 ರೂ. ದಂಡ ವಸೂಲಿ ಮಾಡಿದ್ದಾರೆ.

ಪಿಎಸ್‌ಐ ವೀರಬಸಪ್ಪ ಕುಸಲಾಪುರ ಅವರ ನೇತೃತ್ವದಲ್ಲಿ ಪೊಲೀಸರು ಕಳೆದ 5-6 ದಿನಗಳಲ್ಲಿ 664 ಕೇಸ್‌ಗಳನ್ನು ಹಾಕಿ, 64,700 ರೂ. ದಂಡ ವಸೂಲಿ ಮಾಡಿದರೆ, ಪುರಸಭೆ ಮುಖ್ಯಾಧಿಕಾರಿ ದಿನಕರ್ ಅವರ ನೇತೃತ್ವದಲ್ಲಿ ಪುರಸಭೆ ಅಧಿಕಾರಿಗಳು ಪಟ್ಟಣದಲ್ಲಿ ಮಾಸ್ಕ್ ಧರಿಸದವರಿಗೆ ಮತ್ತು ಅನಧಿಕೃತವಾಗಿ ಅಂಗಡಿ ತೆರೆದವರಿಗೆ ಹಾಕಿದ ದಂಡ 26.600 ರೂ.ಗಳಾಗಿರುತ್ತದೆ.

ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಿ ರಸ್ತೆಯಲ್ಲಿ ವಿನಾಕಾರಣ ಸಂಚರಿಸಿದ ವಾಹನಗಳನ್ನು ಜಫ್ತಿ ಮಾಡಿದ ಪೊಲೀಸರು ನಂತರ ಅವರಿಗೆ ಅರಿವು ಮೂಡಿಸಿ, ಎಚ್ಚರಿಕೆ ನೀಡಿ ವಾಹನಗಳನ್ನು ಬಿಡುಗಡೆ ಮಾಡಿದ್ದಾರೆ.   ಜೊತೆಗೆ ಮಲೇಬೆನ್ನೂರು, ವಿನಾಯಕ ನಗರ ಕ್ಯಾಂಪ್, ಹರಳಹಳ್ಳಿಯಲ್ಲಿ 3 ಅಂಗಡಿಗಳಿಗೆ ಕೇಸ್ ಹಾಕಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ ಎಂದು ಪಿಎಸ್‌ಐ ವೀರಬಸಪ್ಪ ತಿಳಿಸಿದ್ದಾರೆ.

ಹೆಚ್ಚು ಜನ ಸೇರಬೇಡಿ: ಸರ್ಕಾರದ ಮಾರ್ಗಸೂಚಿಯಂತೆ 50 ಜನರ ಸಮ್ಮುಖದಲ್ಲಿ ಮದುವೆಗಳನ್ನು ಮಾಡಿ, ಒಂದು ವೇಳೆ ಹೆಚ್ಚು ಜನ ಕಂಡು ಬಂದರೆ ದಂಡ ಹಾಕುತ್ತೇವೆ ಎಂದು ಉಪ ತಹಶೀಲ್ದಾರ್ ಆರ್. ರವಿ ತಿಳಿಸಿದ್ದಾರೆ.

error: Content is protected !!