ವಿದ್ಯಾರ್ಥಿಗಳ ಭವಿಷ್ಯ ಸಾಕಾರಗೊಳಿಸುವ ಸೂತ್ರ ಶಿಕ್ಷಕರಲ್ಲಿರುತ್ತದೆ

ಪ್ರಾಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಡಾ|| ಎಸ್.ಶಿಶುಪಾಲ್ ಅಭಿಮತ

ದಾವಣಗೆರೆ, ನ. 7- ಗುರುವಿಲ್ಲದೆ ಗುರಿಯನ್ನು ತಲುಪುವುದು ಬಹಳ ಕಷ್ಟ, ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ, ಕಲಿಕಾ ಆಸಕ್ತಿಯನ್ನು ಹುಟ್ಟುಹಾಕುವ ಸೂತ್ರದಾರನೇ ಉತ್ತಮ ಶಿಕ್ಷಕ. ಶಿಕ್ಷಣಕ್ಕೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಶಿಕ್ಷಕನಿಗೂ ಇದೆ. ವಿದ್ಯಾರ್ಥಿಗಳ ಭವಿಷ್ಯವು ಶಿಕ್ಷಣದಲ್ಲಿದ್ದರೆ ಅದನ್ನು ಸಾಕಾರಗೊಳಿಸುವ ಸೂತ್ರ ಶಿಕ್ಷಕರಲ್ಲಿರುತ್ತದೆ ಎಂದು ದಾವಣಗೆರೆ ವಿವಿ ಮೈಕ್ರೋಬಯೊಲಜಿ ವಿಭಾಗದ ಪ್ರಾಧ್ಯಾಪಕ ಡಾ|| ಎಸ್. ಶಿಶುಪಾಲ ಅಭಿಪ್ರಾಯಪಟ್ಟರು.

ಅಖಿಲ ಭಾರತಿಯ ತಾಂತ್ರಿಕ ಶಿಕ್ಷಣ ಪರಿಷತ್, ನವದೆಹಲಿ ಮತ್ತು ವಿಶ್ವವಿದ್ಯಾಲಯ ಬಿ.ಡಿ.ಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜರುಗಿದ ಪ್ರಾಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

 ಶಿಕ್ಷಕರೂ ಸಹ ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಸರಿಯಾಗಿ ತಿಳಿದುಕೊಂಡು ಸಮಗ್ರವಾಗಿ ಕಾರ್ಯರೂಪಕ್ಕೆ ತರುವಲ್ಲಿ ಪ್ರಯತ್ನಿಸಬೇಕೆಂದು ಅವರು ಕರೆ ನೀಡಿದರು.

ಗುಣಮಟ್ಟದ ಶಿಕ್ಷಣವು ಸುಸ್ಥಿರ ಅಭಿವೃದ್ಧಿಯ ಅಡಿಪಾಯ. ಶಿಕ್ಷಣವು ಸ್ವಯಂ ಅವಲಂಬನೆ, ಕೌಶಲ್ಯಾವೃದ್ಧಿ, ಆರ್ಥಿಕ ಬೆಳವಣಿಗೆ, ಉತ್ತಮ ಜೀವನೋಪಾಯ ನೀಡುತ್ತದೆ  ಎಂದು ದಾವಣಗೆರೆ ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ಚೀಫ್ ಇಂಜಿನಿಯರ್ ಎಂ.ಸತೀಶ್ ಹೇಳಿದರು.

ಶಿಕ್ಷಣದಿಂದ ವ್ಯಕ್ತಿಯು ತನ್ನ ಜೀವನದ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ ಸಮಾಜದ ಸರ್ವಾಂಗೀಣ ಒಳಿತಿಗಾಗಿ ಕೆಲಸ ಮಾಡುವುದನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ದೆೋರೆಯತ್ತದೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ|| ಮಲ್ಲಿಕಾರ್ಜುನ್ ಎಸ್. ಹೊಳಿ ಅಭಿಪ್ರಾಯ ಪಟ್ಟರು.

ಇದೇ ಸಂದರ್ಭದಲ್ಲಿ ಡಾ. ಎಸ್. ಮಂಜಪ್ಪ, ಡಾ|| ಬಸವರಾಜು ಬಣಕಾರ್, ಡಾ|| ಸಿ.ಎಂ.ರವಿಕುಮಾರ್, ಪತ್ರಿಕೆ ವರದಿಗಾರ ಡಾ|| ಎಸ್.ಎ. ಗಂಗರಾಜು ಅವರುಗಳನ್ನು ಸನ್ಮಾನಿಸಲಾಯಿತು. ಎ.ಆರ್. ಅಣ್ಣಪ್ಪ, ಡಾ|| ಕೆ.ಜಿ.ಸತೀಶ್, ದಿವಾಕರ್.ಎಂ.ಹೆಚ್, ಡಾ|| ಗಣಪತಿ ಆದಿ, ಡಾ|| ಡಿ.ಪಿ.ನಾಗರಾಜಪ್ಪ, ಡಾ|| ಅಪ್ರಮೇಯ, ಡಾ|| ಈರಮ್ಮ. ಹೆಚ್, ಡಾ|| ಶೀಧರಮೂರ್ತಿ ಉಪಸ್ಥಿತರಿದ್ದರು.

ಕಾರ್ಯಾಗಾರದಲ್ಲಿ ಒಟ್ಟು 28 ಸಂಪನ್ಮೂಲ ವ್ಯಕ್ತಿಗಳು 46 ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು ಎಂದು ಕಾರ್ಯಕ್ರಮದ ಸಂಯೋಜಕ ಡಾ|| ಶೇಖರಪ್ಪ ಭೀಮಪ್ಪ ಮಲ್ಲೂರು ತಿಳಿಸಿದರು.

ಕು. ಜ್ಯೋತಿ ಪ್ರಾರ್ಥಿಸಿದರು. ಡಾ|| ಈರಪ್ಪ ಸೊಗಲದ್ ಪ್ರಾರ್ಥಿಸಿದರು.  ಡಾ|| ಎಂ. ಪ್ರಸನ್ನಕುಮಾರ್, ಡಾ|| ವಿಜಯಕುಮಾರ್ ಅತಿಥಿ ಗಳನ್ನು ಪರಿಚಯಿಸಿದರು. ಡಾ|| ಎನ್. ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಡಾ|| ಎಸ್.ಬಿ. ಮಲ್ಲೂರ್ ವಂದಿಸಿದರು.

error: Content is protected !!