ವಿದ್ಯಾರ್ಥಿಗಳಿಗೆ ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಶ್ರೀಕಾಂತ್ ಭಟ್ ಕಿವಿಮಾತು
ದಾವಣಗೆರೆ, ನ.2- ವಿದ್ಯಾರ್ಥಿಗಳು ಕೀಳರಿಮೆ ಬದಿಗಿಟ್ಟು ಶ್ರದ್ಧೆ, ಆಸಕ್ತಿ, ಶ್ರಮವಹಿಸಿ ಸಾಧನೆ ಮಾಡಬೇಕು ಎಂದು ಭಾರತೀಯ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಶ್ರೀಕಾಂತ್ ಭಟ್ ಕಿವಿ ಮಾತು ಹೇಳಿದರು.
ಶ್ರೀ ತರಳಬಾಳು ಜಗದ್ಗುರು ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಅನುಭವ ಮಂಟಪ ಸ್ವತಂತ್ರ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ನಗರದ ಡಾ. ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಮಂಗಳವಾರ 2021-22ನೇ ಸಾಲಿನ ಪ್ರತಿಭಾ ಪ್ರದರ್ಶನ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸಾಧನೆ ಸಾಧಕನ ಸ್ವತ್ತೇ ಹೊರತು, ಸೋಮಾರಿಗಳ ಸ್ವತ್ತಲ್ಲ. ಸಾಧನೆಗಿರುವ ಎಲ್ಲಾ ಅಡೆ – ತಡೆಗಳನ್ನು ತಡೆದು ನಾವು ಸಾಧಿಸಬೇಕು. ಭವಿಷ್ಯದ ಬಗ್ಗೆ ಕಂಡ ಕನಸು ನನಸು ಮಾಡಲು ಅಧ್ಯಾಪಕರ ಮಾರ್ಗದರ್ಶನ ಪಡೆದು ಮುನ್ನುಗ್ಗಬೇಕು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ತರಳಬಾಳು ಜಗದ್ಗುರು ಸಂಯುಕ್ತ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ.ಹೆಚ್.ಎನ್. ಪ್ರದೀಪ್ ಮಾತನಾಡುತ್ತಾ, ಎಲ್ಲಾ ಮಕ್ಕಳಲ್ಲೂ ತಮ್ಮದೇ ಆದ ಪ್ರತಿಭೆ ಇರುತ್ತದೆ. ಅದನ್ನು ಆತ್ಮ ವಿಶ್ವಾಸದಿಂದ ಹೊರ ಹೊಮ್ಮಿಸಬೇಕು ಎಂದು ಹೇಳಿದರು.
ಅನುಭವಮಂಟಪ ಸ್ವತಂತ್ರ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಶ್ರೀಕುಮಾರ ಹಿಂಡಸಗಟ್ಟಿ, ಉಪನ್ಯಾಸಕ ಪುನ್ನಯ್ಯ ಚೌಧರಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಇತ್ತೀಚೆಗೆ ನಿಧನರಾದ ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜ್‍ಕುಮಾರ್ ಅವ ರಿಗೆ ಸಂತಾಪ ಸಲ್ಲಿಸಲಾಯಿತು. ವಿದ್ಯಾರ್ಥಿಗ ಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿ ದವು. ವಿದ್ಯಾರ್ಥಿಗಳಾದ ಆಶ್ರಿತ ಎಸ್. ಸ್ವಾಗ ತಿಸಿದರು. ಪ್ರೇರಣಾ ಎಂ.ವಿ. ಮತ್ತು ಖುಷಿ ತರ ಗತಿ ಪ್ರತಿನಿಧಿಗಳನ್ನು ಪರಿಚಯಿಸಿದರು. ತನ್ಮಯಿ ಮತ್ತು ಭಾವನ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ನಡೆಸಿಕೊಟ್ಟರು. ವೃಂದಾ ಎನ್.ಸಿ ನಿರೂಪಿಸಿದರು. ಭೂಮಿಕಾ ವಿ.ಒ ವಂದಿಸಿದರು.