ದಾವಣಗೆರೆ, ಮೇ 2- ಜಿಲ್ಲೆಯಾದ್ಯಂತ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಜನತಾ ಕರ್ಫ್ಯೂ ವಿಧಿಸಿದ್ದರೂ ಸಹ ಸಮಯ ಮೀರಿದರೂ ರಸ್ತೆಯಲ್ಲಿ ಓಡಾಡುತ್ತಿದ್ದ ಕಾರಣ ಪೊಲೀಸರು ತನಗೆ ದಂಡ ವಿಧಿಸಿದ್ದಕ್ಕೆ ವೃದ್ಧನೋರ್ವನು ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದ ಘಟನೆ ನಗರದ ರೈಲ್ವೆ ನಿಲ್ದಾಣದ ಬಳಿಯ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ನಡೆದಿದೆ.
ಕಾಯಿಪೇಟೆಯ ಬಸವರಾಜಪ್ಪ ಎಂಬಾತ ದಂಡ ವಿಧಿಸಿದ ಪೊಲೀಸರ ವಿರುದ್ಧ ಪ್ರತಿಭಟನೆಗೆ ಕೂತ ವೃದ್ಧ. ಹೃದಯ ಸಂಬಂಧಿ ಸಮಸ್ಯೆಗೆ ಮಾತ್ರೆ ತರಲು ನಾನು ಹೊರಗೆ ಬಂದಿದ್ದೆ. ಈ ವೇಳೆ ಪೊಲೀಸರು ನಾನು ಅನಗತ್ಯವಾಗಿ ಓಡಾಡುತ್ತಿದ್ದೆ ಎಂದು 500 ರೂ. ದಂಡ ವಿಧಿಸಿದ್ದಾರೆ. ಇದು ಸರಿಯಲ್ಲ ಎಂದು ರಸ್ತೆಯಲ್ಲೇ ಕುಳಿತು ಅಸಮಾಧಾನ ವ್ಯಕ್ತಪಡಿಸಿದರು.
ಪೊಲೀಸರು ಮನೆಗೆ ತೆರಳುವಂತೆ ಸೂಚಿಸಿದರೂ ಸಹ ಕೆಲ ಕಾಲ ಅಲ್ಲಿಯೇ ಕುಳಿತು ಗೊಂದಲ ಸೃಷ್ಠಿಸಿದರು. ನಂತರ ಅವರ ಮನೆಯವರಿಗೆ ಫೋನಾಯಿಸಿ ಕಳುಹಿಸಿ ಕೊಡಲಾಯಿತು.
ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ನಗ ರದ ಹಳೇಪೇಟೆಯಲ್ಲೇ ಬೇಕಾದಷ್ಟು ಔಷಧಿ ಅಂಗಡಿ ಗಳು ಇವೆ. ಅಲ್ಲಿಯೇ ಎಲ್ಲಾ ತರಹದ ಔಷಧಿ ಗಳು ಸಿಗುತ್ತವೆ. ಈ ವ್ಯಕ್ತಿ ಸುಮ್ಮನೆ ಓಡಾಡುತ್ತಿದ್ದ ಕಾರಣ ದಂಡ ವಿಧಿಸಲಾಗಿದೆ. ಇದನ್ನು ಪ್ರಶ್ನಿಸಿ ದ್ದಕ್ಕೆ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸುವ ಮೂಲಕ ಹೈಡ್ರಾಮಾ ನಡೆಸಿದ್ದಾರೆ ಎಂದರು.