ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಒತ್ತಾಯ

ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ದಾವಣಗೆರೆ, ಮಾ.3- ಬಿಜೆಪಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ಖಂಡಿಸಿ, ನಗರದಲ್ಲಿಂದು ಜಿಲ್ಲಾ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಜಯದೇವ ವೃತ್ತದಲ್ಲಿ ಇಂದು ಪ್ರತಿಭಟಿಸಿ, ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಆಗ್ರಹಿಸಿದರು.

ಪಾಲಿಕೆ ಸದಸ್ಯ ಎ. ನಾಗರಾಜ್ ಮಾತ ನಾಡಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ಓರ್ವ ಸಚಿವ ಹೀಗೆ ಕೆಲಸದ ಆಮಿಷವೊಡ್ಡಿ ಯುವತಿ ಯೋರ್ವಳ ಜತೆಗೆ ಇರುವ ರಾಸಲೀಲೆ ಸಾಮಾ ಜಿಕ ಜಾಲತಾಣಗಳಲ್ಲಿ‌ ಮತ್ತು ಮಾಧ್ಯಮಗಳಲ್ಲಿ ಬಿತ್ತರಗೊಂಡಿದ್ದು, ಈಗ ಸಚಿವರು ಅದು ತಾವಲ್ಲ ಎನ್ನುವ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಇವರಿಗೆ ಮುಖ ತೋರಿಸಲು ನಾಚಿಕೆಯಾ ಗಬೇಕು ಎಂದು ವಾಗ್ದಾಳಿ ನಡೆಸಿದರು.

ಮಂತ್ರಿಗಳಾಗಬೇಕಾದರೆ ಇವರು ಕಾಯಾ, ವಾಚಾ, ಮನಸಾ ಶುದ್ಧವಾಗಿರುತ್ತೇವೆಂದು ಪ್ರಜಾ ಪ್ರಭುತ್ವ, ಸಂವಿಧಾನಕ್ಕೆ ಗೌರವ ಕೊಡುತ್ತೇವೆಂದು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಇದೇನಾ ಇವರು ಕೊಡುವ ಗೌರವ. ಅಶ್ಲೀಲ ವಿಡಿಯೋದಲ್ಲಿರುವುದು ತನಿಖೆಯಾಗಲಿ ಎಂದು ಅವರ ಸರ್ಕಾರದ ಇತರೆ ಸಚಿವರು ಹೇಳುತ್ತಾರೆ. ಅದರಲ್ಲಿ ತನಿಖೆಯಾಗುವುದೇನಿದೆ. ಕೂಡಲೇ ನೈತಿಕ ಹೊಣೆ ಹೊತ್ತು ಇವರು ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿಯಲ್ಲಿ ಬಹುತೇಕ ಇಂತಹ ಪ್ರಕರಣಗಳಲ್ಲಿ ಇರುವವರು, ಕಿಸ್ ಕೊಟ್ಟವರೆಲ್ಲ ಸಚಿವರಾಗುತ್ತಾರೆ. ಬಹುಶಃ ಇಂತಹ ಗ್ರೇಡ್ ಇದ್ದವರಿಗೆ ಅವರು ಸಚಿವ ಸ್ಥಾನ ಕೊಡುವುದು. ಹಿಂದುತ್ವ, ದೇಶವನ್ನು ಕಾಪಾಡುತ್ತೇವೆ ಅಂತಾರೆ. ಇದೇನಾ ಇವರು ಮಾಡುವುದು. ಕೂಡಲೇ ಇವರು ರಾಜೀನಾಮೆ ಸಲ್ಲಿಸಬೇಕು ಅಥವಾ ಸಿಎಂ ಇವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಇಲ್ಲವಾದರೆ ಕಾಂಗ್ರೆಸ್ ನಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಖಂಡ ಕೆ.ಜಿ. ಶಿವಕುಮಾರ್ ಮಾತ ನಾಡಿ, ಭಾರತೀಯ ಸಂಸ್ಕೃತಿಯನ್ನು ಹಾಳು ಮಾಡುತ್ತಿರುವ ಬಿಜೆಪಿಯವರಿಗೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರವನ್ನು ಜನರು ಕೊಡಬೇಕೆಂದರು.

ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರಾದ ಚಮನ್ ಸಾಬ್, ರಿಜ್ವಾನ್, ಕಾಂಗ್ರೆಸ್ ಪಕ್ಷದ ಮುಖಂಡ ಉಮೇಶ್ ಎಲ್ಲಮ್ಮನಗರ, ಎಲ್.ಹೆಚ್. ಸಾಗರ್ ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರ ಹೆಚ್.ಜೆ. ಮೈನುದ್ದೀನ್, ಮುಜಾಹಿದ್ ಪಾಷಾ, ವಜೀದ್, ವಿನಯ್ ಜೋಗಪ್ಪನವರ, ಸೈಯದ್ ಇರ್ಫಾನ್, ರಫೀಕ್, ರಾಕೇಶ್ ಡಿಸಿಎಂ, ಸುಹೇಲ್ ಅಹ್ಮದ್ ಮಾಯಕೊಂಡ, ಹಬೀಬ, ನವೀನ್ ನಲ್ವಾಡಿ, ಮಹಮ್ಮದ್ ಬಾಷಾ, ಕೆ.ಸಿ. ಮಂಜುನಾಥ್, ಜಾಕೀರ್ ಹುಸೇನ್, ಪ್ರವೀಣ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

error: Content is protected !!