ಹರಪನಹಳ್ಳಿ, ಜು.21- ಕೋವಿಡ್ ಕಾಯಿಲೆಯಿಂದ ಮೃತಪಟ್ಟ ಹೆಣಗಳ ರಾಶಿಯ ಮುಂದೆ ವ್ಯಾಪಾರಕ್ಕೆ ಕುಳಿತು ಕೊಂಡಿರುವ ರಾಜ್ಯ ಹಾಗೂ ಕೇಂದ್ರದ ಆಡಳಿತಾರೂಢ ಬಿಜೆಪಿ ಪಕ್ಷ ಸೂತಕದ ಮನೆಯಲ್ಲಿಯೂ ಸಂಭ್ರಮದ ರಾಜಕಾರಣಕ್ಕೆ ಇಳಿದಿದೆ ಎಂದು ಮಾಜಿ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.
ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ನಿಂದ ಆಯೋಜಿಸಿದ್ದ ದೈನಂದಿನ ಉಪಹಾರ ಮತ್ತು ಊಟದ ಭೋಜನಾಲ ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದ ಆರ್ಥಿಕ ವ್ಯವಸ್ಥೆ ಚೇತರಿಸಿ ಕೊಳ್ಳಲಾಗದಷ್ಟು ಕುಸಿತ ಕಂಡಿದೆ. ದುಡಿ ಯುವ ಕೈಗಳಿಗೆ ಕೆಲಸವಿಲ್ಲದೆ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಅಗತ್ಯ ವಸ್ತು ಗಳ ಬೆಲೆಗಳ ಏರಿಕೆಯಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಬದುಕು ಅಯೋಮಯವಾಗಿದೆ. ರೂಪಾಯಿ ಮೌಲ್ಯ ಕುಸಿತವಾದರೂ ಡಾಲರ್ ಮೌಲ್ಯ ಹೆಚ್ಚಳಕ್ಕೆ ಪ್ರಧಾನಿಯವರ ಕೊಡುಗೆ ಅಮೂಲ್ಯ ವಾಗಿದೆ!. ರಾವಣ ರಾಜ್ಯ ಶ್ರೀಲಂಕಾ ದೇಶ ದಲ್ಲಿ ಪೆಟ್ರೋಲ್ ಬೆಲೆ 55 ರೂ., ಸೀತೆಯ ನಾಡು ನೇಪಾಳದಲ್ಲಿ 6 ರೂ. ಆದರೆ, ರಾಮ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಶತಕ ದಾಟಿವೆ ಎಂದು ವ್ಯಂಗ್ಯವಾಡಿದರು.
ಸಂಡೂರು ಶಾಸಕ ತುಕಾರಾಂ ಮಾತನಾಡಿ, ದೇಶದಲ್ಲಿ 44 ಲಕ್ಷ ಜನರು ಕೋವಿಡ್‌ನಿಂದ ಸಾವನ್ನಪ್ಪಿದ್ದರೂ ಸರ್ಕಾರ ತಪ್ಪು ಮಾಹಿತಿ ನೀಡುತ್ತಿದೆ ಎಂದು ಕಿಡಿ ಕಾರಿದರು.
ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ ಮಾತನಾಡಿ, ಕೊರೊನಾದಿಂದ ಸತ್ತ ವರ ಡೆತ್ ಸರ್ಟಿಫಿಕೇಟ್ ನೀಡಲು ಸಾಧ್ಯ ವಾಗದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಮೃತಪಟ್ಟ ಕುಟುಂಬಗಳಿಗೆ ಪರಿ ಹಾರ ನೀಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬಿ.ಎಂ. ಶಿವಯೋಗಿ, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಟಿ. ಸುಭಾಶ್ಚಂದ್ರ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಆಶಾಲತಾ, ಬಳ್ಳಾರಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳಿಗೌಡ, ತಾಲ್ಲೂಕು ಮಹಿಳಾ ಅಧ್ಯಕ್ಷೆ ಪುಷ್ಪಾ ದಿವಾಕರ್, ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ, ಚಿಗಟೇರಿ ಯುವ ಕಾಂಗ್ರೆಸ್ ಅಧ್ಯಕ್ಷ ಶಿವರಾಜ, ಹೊಸಪೇಟೆ ಬ್ಲಾಕ್ ಅಧ್ಯಕ್ಷ ಇಮಾಮ್ ಖಾಜಿ, ಪುರಸಭೆ ಸದಸ್ಯ ಲಾಟಿ ದಾದಾಪೀರ್, ಮುಖಂಡರಾದ ಇರ್ಫಾನ್ ಮುದುಗಲ್, ವಿಜಯ ದಿವಾಕರ್, ಶಿವಕುಮಾರನಾಯ್ಕ, ತೆಲಿಗಿ ಟಿ.ಉಮಾಕಾಂತ, ತೆಲಿಗಿ ಟಿ. ಮಂಜುನಾಥ್, ಮುಂಡರಗಿ ನಾಗರಾಜ, ಜಿಷಾನ್, ಶ್ರೀಕಾಂತ್ ಇನ್ನಿತರರು ಪಾಲ್ಗೊಂಡಿದ್ದರು.