ಯೋಗದಿಂದ ಉತ್ತಮ ಆರೋಗ್ಯ ಪಡೆಯಲು ಕರೆ

ಹರಿಹರ, ನ.11- ಯೋಗ ಪ್ರಾಚೀನ ಕಾಲದಿಂದಲೂ ನಮಗೆ ಬಂದ ವರದಾನ. ಯೋಗದಿಂದ ಉತ್ತಮ ಆರೋಗ್ಯ ಪಡೆದು ಸ್ವಸ್ಥರಾಗಿರಬಹುದು ಎಂದು ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಯಶಸ್ವಿನಿ ಕನ್ವೆನ್ಷನಲ್‌ ಹಾಲ್‌ನಲ್ಲಿ ಸಪ್ತರ್ಷಿ ಯೋಗ ಕೇಂದ್ರ ಮತ್ತು ಪ್ರೇರಣಾ ಫೌಂಡೇಶನ್ ಸಹಯೋಗದೊಂದಿಗೆ ಇಂದು ಹಮ್ಮಿಕೊಂಡಿದ್ದ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.ಜನರು ಹಪಾಹಪಿ ಜೀವನಕ್ಕೆ ಒಳಗಾಗಿದ್ದಾರೆ. ಕೇವಲ ಹಣದಿಂದ ನಮಗೆ ಉತ್ತಮ ಆರೋಗ್ಯ ಸಿಗುವುದಿಲ್ಲ. ಹಣದ ಹಿಂದೆ ಬಿದ್ದು ನೆಮ್ಮದಿ ಕಳೆದುಕೊಂಡು, ಆರೋಗ್ಯವನ್ನು ಕಳೆದು ಕೊಂಡು ಜನರು ಒದ್ದಾಡುವುದು ಸಾಮಾನ್ಯ ವಾಗಿದೆ. ಶ್ರದ್ಧೆ, ಭಕ್ತಿ, ಪ್ರಾರ್ಥನೆ, ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನೆಮ್ಮದಿಯ ಜೀವನ ಹೊಂದಲು ಸಾಧ್ಯ ಎಂದರು. 

ನಗರಸಭೆ ಮಾಜಿ ಅಧ್ಯಕ್ಷ ಬಿ. ರೇವಣ ಸಿದ್ದಪ್ಪ ಮಾತನಾಡಿ, ಯೋಗ ಜೀವನದ ಒಂದು ಭಾಗವಾಗಬೇಕು. ಯೋಗ ಮತ್ತು ಕ್ರೀಡೆಯಿಂದ ಮನುಷ್ಯ ಸದಾ ಚಟುವಟಿಕೆ ಯಿಂದ ಇರಲು ಸಾಧ್ಯ ಎಂದ ಅವರು, ಜೈಮುನಿ ಅವರ ಸಾಧನೆಯನ್ನು ಅಭಿನಂದಿಸಿದರು.

ನಗರಸಭೆ ಸದಸ್ಯ ಶಂಕರ್ ಖಟಾವಕರ್, ಯಶಸ್ವಿನಿ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ವೈ. ಕೃಷ್ಣಮೂರ್ತಿ, ಗಂಗಾವತಿಯ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಸಮಿತಿ ಮಾಜಿ ಕಾರ್ಯದರ್ಶಿ ಬಾಬುಸಾಬ್, ಚಿಂತನ ಟಿವಿ ಹರಿಹರ ಸಂಸ್ಥಾಪಕ ಸುಬ್ರಹ್ಮಣ್ಯ ನಾಡಿಗೇರ್ ಅವರುಗಳು ಪ್ರಶಸ್ತಿ ವಿಜೇತರಿಗೆ ಹಾರೈಸಿದರು.

ಸಮಾರಂಭದಲ್ಲಿ ಅಂತರರಾಷ್ಟ್ರೀಯ ಯೋಗಿ ಅವಾರ್ಡ್‌ಗೆ ಭಾಜನರಾದ ಡಾ.ಕೆ.ಜೈಮುನಿ ಮತ್ತು ರಾಷ್ಟ್ರೀಯ ಯೋಗಿ ಅವಾರ್ಡ್‌ಗೆ ಭಾಜನರಾದ ಬಿ. ಸ್ವಪ್ನ ಮತ್ತು ಸವಿತಾ ಸಂತೋಷ್ ಜಾಧವ್ ಅವರಿಗೆ ಪ್ರಶಸ್ತಿ ವಿತರಿಸಲಾಯಿತು.

ಇದೇ ವೇಳೆ ಜಿಲ್ಲಾ ರಾಜ್ಯೋತ್ಸವ ಪ್ರಶ ಸ್ತಿಗೆ ಭಾಜನರಾದ ಸೀತಾ ಎಸ್. ನಾರಾಯಣ್‌, ವೀರಪ್ಪ ಮತ್ತು ಸುಬ್ರಹ್ಮಣ್ಯ ನಾಡಿಗೇರ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. 

ಪ್ರೇರಣಾ ಫೌಂಡೇಶನ್ ಸಂಸ್ಥಾಪಕಿ ಜಿ.ಕೆ. ಉಷಾ ಮತ್ತು ಇತರರು ಉಪಸ್ಥಿತರಿದ್ದರು. ಅಣ್ಣಪ್ಪ ಪ್ರಾರ್ಥಿಸಿದರು. ಡಾ. ಡಿ. ಫ್ರಾನ್ಸಿಸ್ ಸ್ವಾಗತಿಸಿದರು. ನಳಿನಾ ಕಾರ್ಯಕ್ರಮ ನಿರೂಪಿಸಿದರು. 

error: Content is protected !!