ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ಸಿಗದೇ ಕೊರೊನಾ ಸೋಂಕಿತೆ ಪರದಾಟ

ದಾವಣಗೆರೆ, ಏ.26- ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ಸಿಗದೇ ಕೊರೊನಾ ಸೋಂಕಿತೆಯೊಬ್ಬಳು ಪರದಾಡಿದ ಘಟನೆ ಇಂದು ರಾತ್ರಿ ನಡೆದಿದೆ. 

ತಾಲ್ಲೂಕಿನ ಲೋಕಿಕೆರೆ ಗ್ರಾಮದ ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತೆ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಳು. ಈ ವೇಳೆ ಆಕೆಯನ್ನು ದಾವಣಗೆರೆಯ ಜಿಲ್ಲಾಸ್ಪತ್ರೆಗೆ ಕರೆ ತರಲಾಗಿತ್ತು. ಆದರೆ, ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ಒಂದು ಗಂಟೆಯ ಕಾಲ ಆಂಬ್ಯುಲೆನ್ಸ್‍ನಲ್ಲೇ ಆಕೆ ಕಾಲ ಕಳೆಯಬೇಕಾಯಿತು. 

ನಂತರ ದಾವಣಗೆರೆಯ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅಲ್ಲಿಯೂ ಬೆಡ್ ಫುಲ್ ಆಗಿದ್ದವು. ಬಳಿಕ, ರೋಗಿಯ ಸಂಬಂಧಿಯೊಬ್ಬರು ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್‍ ಅವರಿಗೆ ಮನವಿ ಮಾಡಿದ್ದು, ಅವರು ಬಾಪೂಜಿ ಆಸ್ಪತ್ರೆಯ ಸಿಬ್ಬಂದಿಗೆ ಸೋಂಕಿತೆಯನ್ನು ಅಡ್ಮಿಟ್ ಮಾಡಿಕೊಳ್ಳುವಂತೆ ಸೂಚನೆ ನೀಡಿದರು. 

ಬಾಪೂಜಿ ಆಸ್ಪತ್ರೆಯಲ್ಲಿ ಆಕೆಯನ್ನು ದಾಖಲು ಮಾಡಿಕೊಂಡಿದ್ದು, ಅಲಿಯೂ ಸೋಂಕಿತೆ ಅರ್ಧ ಗಂಟೆ ಕಾಲ ಪರದಾಡಬೇಕಾದ ಪರಿಸ್ಥಿತಿ. ಜಿಲ್ಲೆಯಲ್ಲೂ ಕೊರೊನಾ ಸೋಂಕಿತರು ಹೆಚ್ಚುತ್ತಿರುವುದರಿಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಈ ಸ್ಥೀತಿ ಉಂಟಾಗಿದೆ. ಹೀಗಾಗಿ, ಹೆಚ್ಚಿನ ಬೆಡ್ ಮತ್ತು ವೆಂಟಿಲೇಟರ್‍ಗಳನ್ನು ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತಕ್ಕೆ ಜನರು ಒತ್ತಾಯಿಸಿದ್ದಾರೆ.

error: Content is protected !!