ಅತ್ತಿಗೆರೆ ಶ್ರೀಮತಿ ಚನ್ನಪ್ಳ ಶಿವಲಿಂಗಮ್ಮ ಗುರುಬಸಪ್ಪ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬೀಳಗಿ ಪ್ರತಿಪಾದನೆ
ದಾವಣಗೆರೆ, ಅ. 20- ವಿದ್ಯಾರ್ಥಿಗಳು ಉನ್ನತ ಕನಸು ಕಾಣುವ ಮೂಲಕ ಮಹತ್ತರ ಸಾಧನೆಯ ಶಿಖರ ಏರಲು ಸಾಧ್ಯ. ಸಾಧಿಸಬೇಕೆಂಬ ಛಲ ಇದ್ದರೆ, ಗುರಿ ಸಾಧನೆ ಸುಲಭವಾಗುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರತಿಪಾದಿಸಿದ್ದಾರೆ.
ತಾಲ್ಲೂಕಿನ ಅತ್ತಿಗೆರೆ ಶ್ರೀಮತಿ ಚನ್ನಪ್ಳ ಶಿವಲಿಂಗಮ್ಮ ಗುರುಬಸಪ್ಪ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ಶುಲ್ಕ, ಪಠ್ಯ, ಸಮವಸ್ತ್ರ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಯಾವಾಗಲೂ ದೊಡ್ಡ ದೊಡ್ಡ ಕನಸನ್ನೇ ಕಾಣಬೇಕು. ಇದಕ್ಕಾಗಿ ದುಡ್ಡು ಕೊಡಬೇಕಾಗಿಲ್ಲ. ಪ್ರಾಮಾಣಿಕ ಪ್ರಯತ್ನ, ಕೆಲಸದಲ್ಲಿ ಅರ್ಪಣಾಭಾವ, ದೃಢ ನಿರ್ಧಾರ ಇವುಗಳನ್ನು ಅಳವಡಿಸಿಕೊಂಡರೆ ಜಗತ್ತೇ ಬೆೇರಗುಗೊಳಿಸುವಂತಹ ಸಾಧನೆಯನ್ನು ಮಾಡಬಹುದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅರವಿಂದ ವಿದ್ಯಾಸಂಸ್ಥೆ ಅಧ್ಯಕ್ಷ ಪ್ರೊ. ಹೆಚ್. ಚನ್ನಪ್ಪ ಮಾತನಾಡಿ, ಜೀವನದಲ್ಲಿ ಪ್ರಾಮಾಣಿ ಕತೆಯಿಂದ ಕೆಲಸ ಮಾಡಿದರೆ ನಿರೀಕ್ಷಿತ ಫಲಿತಾಂಶ ದೊರಕುವುದರ ಜೊತೆಗೆ ಆತ್ಮ ಸಂತೋ ಷ ಸಿಗುತ್ತದೆ. ಶಿಸ್ತು, ನಿಷ್ಠೆ, ಪ್ರಾಮಾಣಿಕ ಪ್ರಯತ್ನದಿಂದ ಯಾವುದೇ ಕಾರ್ಯವನ್ನು ಸಾಧಿಸಬಹುದು ಎಂದು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ. ಶಿವರಾಜ್, ನಿಕಟಪೂರ್ವ ಉಪ ನಿರ್ದೇಶಕ ಜಿ.ಸಿ. ನಿರಂಜನ್ ಉಚಿತ ಪಠ್ಯಪುಸ್ತಕ ವಿತರಿಸಿ ಮಾತನಾಡಿದರು.
ದಾನಿಗಳಾದ ಎಂ.ಜಿ. ಓಂಕಾರಪ್ಪ, ಎ.ಜಿ. ನಾಗಪ್ಪ ಸಮವಸ್ತ್ರ ವಿತರಣೆ ಮಾಡಿದರು. ಅರವಿಂದ ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಪ್ರೊ.ಕೆ.ಆರ್. ಸಿದ್ಧಪ್ಪ, ಅತ್ತಿಗೆರೆ ಗ್ರಾ.ಪಂ. ಅಧ್ಯಕ್ಷೆ ಯಶೋಧಮ್ಮ, ಸಂಸ್ಥೆ ಉಪಾಧ್ಯಕ್ಷ ಎಸ್.ಬಿ. ಬಸವನಗೌಡ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ನಿವೃತ್ತ ಯೋಧ, ಕಾಲೇಜಿನ ಹಳೇ ವಿದ್ಯಾರ್ಥಿ ಹೆಚ್. ಸುರೇಶ್ ರಾವ್ ಹವಾಲ್ದಾರ್ ಅವರನ್ನು ಸನ್ಮಾನಿಸಲಾಯಿತು.
ಅನುಷಾ, ಅರ್ಚನಾ ಸಂಗಡಿಗರು ಪ್ರಾರ್ಥಿಸಿದರು. ಪ್ರಾಚಾರ್ಯ ಹೆಚ್. ಚಂದ್ರಪ್ಪ ಸ್ವಾಗತಿಸಿದರು. ಸುಭಾಷ್ ಆರ್. ಶಿಂಧೆ ನಿರೂಪಿಸಿದರು. ಎನ್.ಎಸ್. ಪರಮೇಶ್ವರಪ್ಪ, ಗುಡ್ಡಪ್ಪ ಆರ್. ಓಲೇಕಾರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.