ಹಿಂದೂಗಳು ಜಾಗೃತರಾಗದಿದ್ದರೆ ಪಶ್ಚಿಮ ಬಂಗಾಳ, ಕೇರಳ ಕೈ ಬಿಡಲಿವೆ

ಜಗತ್ತಿನಲ್ಲಿ 113 ಕ್ರಿಶ್ಚಿಯನ್ ದೇಶಗಳು ಮತ್ತು 57 ಮುಸ್ಲಿಂ ದೇಶಗಳಿವೆ. ಆದರೆ ಹಿಂದೂಗಳಿಗಾಗಿ ಉಳಿದಿರುವ ಹಿಂದೂಸ್ತಾನ್ ಭಾರತವನ್ನು ಬಲಿಷ್ಠಗೊಳಿಸಲು ಹಿಂದೂಗಳು ಜಾತಿ, ಪಕ್ಷಭೇದ ಮರೆತು ಒಂದಾಗಬೇಕು.

– ಪ್ರಮೋದ್ ಮುತಾಲಿಕ್, ಅಧ್ಯಕ್ಷರು, ಶ್ರೀರಾಮ ಸೇನೆ

ಮಲೇಬೆನ್ನೂರು, ಅ.19- ಹಿಂದೂಗಳು ಜಾಗೃತರಾಗದಿದ್ದರೆ ಅಖಂಡ ಭಾರತದಲ್ಲಿದ್ದ ಇರಾನ್, ಇರಾಕ್, ಪಾಕಿಸ್ತಾನ್, ಆಪ್ಘಾನಿಸ್ತಾನ್, ಬಾಂಗ್ಲಾದೇಶ್, ಶ್ರೀಲಂಕಾ ದೇಶಗಳನ್ನು ಕಳೆದುಕೊಂಡಂತೆ ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳೂ ಸಹ ನಮ್ಮ ದೇಶದ ಕೈ ಬಿಟ್ಟು ಹೋಗುವ ಆತಂಕ ಎದುರಾಗಿದೆ ಎಂದು  ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಎಚ್ಚರಿಸಿದರು.

ಬ್ಯಾಡಗಿಯಿಂದ ಶಿವಮೊಗ್ಗಕ್ಕೆ ತೆರಳುವ ಮಾರ್ಗ ಮಧ್ಯೆ ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ದೇಶ ದ್ರೋಹಿ, ಲೂಟಿಕೋರ ಬಾಬರ್‌ನಿಂ ದಾಗಿ ಒಂದು ರಾಮಮಂದಿರ ಕಟ್ಟುವುದಕ್ಕೆ ನಾವು 500 ವರ್ಷ ಕಾಯಬೇಕಾಯಿತು. ಈಗಲಾದರೂ ದೇಶ ದ್ರೋಹಿಗಳ ಬಗ್ಗೆ ದೇಶಪ್ರೇಮಿಗಳು ಒಂದಾಗಿ ಎಲ್ಲರಿಗೂ ಲೇಸನ್ನೇ ಬಯಸುವ ಹಿಂದೂ ಧರ್ಮವನ್ನು ಸದೃಢಗೊಳಿಸೋಣ ಮತ್ತು
ದೇಶ ಉಳಿದರೆ ನಾವು. ದೇಶ ಮೊದಲು ನಂತರ ಜಾತಿ, ಪಕ್ಷ ಎಂಬ ಭಾವನೆಯನ್ನು ಎಲ್ಲರೂ ಬೆಳೆಸಿಕೊಳ್ಳೋಣ ಎಂದು ಮುತಾಲಿಕ್ ಮನವಿ ಮಾಡಿದರು.

ಶ್ರೀರಾಮ ಸೇನೆಯ ಮಲೇಬೆನ್ನೂರು ಶ್ರೀರಾಮ ಸೇನೆಯ ಪ್ರಕಾಶಚಾರ್, ಶ್ರೀನಿವಾಸ್, ಕಜ್ಜರಿ ಹರೀಶ್, ಶಿವು, ಹರಳಹಳ್ಳಿ ಮಂಜುನಾಥ್, ಭಜರಂಗ ದಳದ ಬಸವರಾಜ್ ದೊಡ್ಮನಿ, ಹಾಲಿವಾಣ ಗ್ರಾ.ಪಂ. ಅಧ್ಯಕ್ಷ ಐ.ಪಿ. ರಂಗನಾಥ್, ದಿಶಾ ಸಮಿತಿ ಸದಸ್ಯ ಐರಣಿ ಅಣ್ಣಪ್ಪ, ಹಾಲಿವಾಣದ ಮೋಹನ್, ಹನುಮಂತಪ್ಪ, ಮಹೇಶ್ ಕೊಮಾರನಹಳ್ಳಿಯ ರಾಮಣ್ಣ ಸ್ವಾಮಿ, ಐರಣಿ ಮಹೇಶ್ವರಪ್ಪ, ಜಿ. ಸುನೀಲ್, ಐರಣಿ ಮೂರ್ತಿ, ರಂಗನಾಥ್, ಮಲೇಬೆನ್ನೂರಿನ ಪಿ.ಆರ್. ರಾಜು, ಬಿ. ಮಂಜುನಾಥ್, ಎ.ಕೆ. ಲೋಕೇಶ್, ಜಿ.ಪಿ. ಹನುಮಗೌಡ ಇನ್ನಿತರರು ಹಾಜರಿದ್ದರು.

error: Content is protected !!