ಜಗಳೂರು, ಅ.18- ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸಿ ಮಾಹಿತಿ ಒದಗಿಸುವ ಸದುದ್ಧೇಶದಿಂದ ನವೆಂಬರ್ 11 ರವರೆಗೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳ ಲಾಗಿದೆ ಎಂದು ಸರ್ಕಾರಿ ಸಹಾಯಕ ಅಭಿಯೋಜಕಿ ಎಂ. ರೂಪ ತಿಳಿಸಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ಯಾನ್ ಇಂಡಿಯಾ ಜಾಗೃತಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ನಂತರ ಮಾತನಾಡಿದರು.
ತಾಲ್ಲೂಕಿನಾದ್ಯಂತ ಗ್ರಾಮೀಣ ಭಾಗಗಳಿಗೆ ತೆರಳಿ ಕಾನೂನು ಸೇವಾ ಸಮಿತಿಯ ಪ್ಯಾನಲ್ ವಕೀಲರು ಸರ್ಕಾರದಿಂದ ಸ್ಟೈಫಂಡ್ ಪಡೆಯುವ ನ್ಯಾಯವಾದಿಗಳ ಮೂಲಕ ಉಚ್ಛ ಹಾಗೂ ಸರ್ವೋಚ್ಛ ನ್ಯಾಯಾಲಯಗಳ ಧ್ಯೇಯೋದ್ಧೇಶಗ ಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲು ಪಿಸಲಾಗುತ್ತಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಎಚ್. ಬಸವ ರಾಜಪ್ಪ , ವಕೀಲರಾದ ವಿ.ತಿಪ್ಪೇಸ್ವಾಮಿ, ಕೆ.ಎಂ. ಬಸವರಾಜಪ್ಪ ,ವೈ. ಹನುಮಂತಪ್ಪ, ಡಿ. ಪ್ರಕಾಶ್, ಬಿ. ಪಂಪಣ್ಣ, ಶ್ರೀನಿವಾಸ್, ಹಾಲಪ್ಪ, ಕರಿಬಸಪ್ಪ, ರುದ್ರೇಶ್ ಇನ್ನಿತರರು ಭಾಗವಹಿಸಿದ್ದರು.