ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಆರೋಪ
ಹರಿಹರ, ಫೆ.25- ತಾಲ್ಲೂಕಿನ ಯಾವುದೇ ಇಲಾಖೆಗೆ ಹೋದರು ಸಾರ್ವ ಜನಿಕರ ಕೆಲಸಗಳು ಸರಿಯಾದ ಸಮಯಕ್ಕೆ ಆಗದೆ ಅಲೆದಾಡುವ ಕೆಲಸ ಒಂದಡೆ ಯಾದರೆ ಹಣ ನೀಡದೆ ಯಾವುದೇ ಕೆಲಸ ಗಳನ್ನು ಮಾಡುತ್ತಿಲ್ಲ. ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದರೂ ಸಹ ಅದಕ್ಕೆ ಕಡಿವಾಣ ಹಾಕುವ ಕೆಲಸ ವನ್ನು ಯಾವುದೇ ಹಿರಿಯ ಅಧಿಕಾರಿಗಳು ಮಾಡುತ್ತಿಲ್ಲ ಎಂದು ತಾ.ಪಂ. ಸದಸ್ಯ ಸಿರಿಗೆರೆ ಕೊಟ್ರೇಶಪ್ಪ ಆರೋಪಿಸಿದರು.
ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷೆ ಶ್ರೀದೇವಿ ಮಂಜಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಆಡಳಿತ ಯಂತ್ರವು ಸಂಪೂರ್ಣವಾಗಿ ಕುಸಿತದ ಹಾದಿಯನ್ನು ಹಿಡಿದಿದೆ. ತಹಶೀಲ್ದಾರ ಕಚೇರಿಯಲ್ಲಿ ವೃದ್ಧಾಪ್ಯ ಹಾಗೂ ಅಂಗವಿಕಲರಿಗೆ ಮಾಸಾಶನ ನೀಡದೆ ಇರುವುದರಿಂದ ಸಾರ್ವಜನಿಕರ ಬಳಿ ಭಿಕ್ಷೆ ಬೇಡುವ ಹಂತಕ್ಕೆ ಬಂದಿದ್ದಾರೆ. ಸರ್ಕಾರ ಪ್ರತಿ ವರ್ಷ ಸಾವಿರಾರು ಕೋಟಿ ಹಣವನ್ನು ತೆಗೆದಿರಿಸಿರುತ್ತದೆ. ಆದರೆ ಅದು ಫಲಾನುಭವಿಗಳನ್ನು ತಲುಪವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಹೇಳಿದರು.
ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಶುದ್ಧ ಕುಡಿಯವ ನೀರಿನ ಘಟಕಗಳು ಇದ್ದರೂ ಸಹ ಅವುಗಳ ಲೈನ್ ಗಳು ಹಾಳಾಗಿ ಜನರಿಗೆ ಕುಡಿಯುವ ನೀರು ಇಲ್ಲದಂತೆ ಆಗಿದೆ. ಅಧಿಕಾರಿಗಳ ಗಮನಕ್ಕೆ ತಂದರೆ ಹಾರಿಕೆ ಉತ್ತರವನ್ನು ನೀಡುತ್ತಾ ಕಾಲ ಹರಣ ಮಾಡುತ್ತಿದ್ದಾರೆ. ಸರ್ಕಾರ ನಿಮಗೆ ಸಂಬಳವನ್ನು ಕೊಡುವುದಾದರು ಯಾತಕ್ಕೆ ನಿಮ್ಮ ಕೈಯಲ್ಲಿ ಆಗದಿದ್ದರೆ ಸರ್ಕಾರದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮನೆಯಲ್ಲಿ ಇದ್ದು ಬಿಡಿ ಎಂದು ಖಾರವಾಗಿ ಹೇಳಿದರು.
ತಾಪಂ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ ಮಾತನಾಡಿ, ನಮ್ಮ ಗ್ರಾಮದ ಜನರು ರಾತ್ರಿ ಹತ್ತು ಗಂಟೆಗೆ ನೀರು ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಗ್ರಾಮದಲ್ಲಿ ದೊಡ್ಡ ಸಮಸ್ಯೆ ಆಗಿದ್ದು ಆದ್ದರಿಂದ ಬೆಳಗ್ಗೆ ಸಮಯದಲ್ಲಿ ನೀರು ಬಿಡುವಂತೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಹೇಳಿದರು.
ಆದಾಪುರ ವೀರಭದ್ರಪ್ಪ ಮಾತ ನಾಡಿ, ಸರ್ಕಾರದ ಕೃಷಿ ಮತ್ತು ತೋಟ ಗಾರಿಕೆ ಇಲಾಖೆಯ ಸೌಲಭ್ಯಗಳನ್ನು ರೈತರಿಗೆ ಸರಿಯಾದ ಸಮಯದಲ್ಲಿ ವಿತರಣೆ ಆಗುವ ನಿಟ್ಟಿನಲ್ಲಿ ಅಧಿಕಾರಿಗಳು ಹೆಜ್ಜೆ ಗಳನ್ನು ಹಾಕಬೇಕು. ಹಾಗೂ ಕುಂಬ ಳೂರು ಅಂಗನವಾಡಿ ಕೇಂದ್ರಕ್ಕೆ ನೂತನ ಕಟ್ಟಡ ವ್ಯವಸ್ಥೆ ಆಗಬೇಕು ಎಂದರು. ಮಹಾಂತೇಶ್ ಗುಡದಹಳ್ಳಿ ಮಾತನಾಡಿ, ಸರ್ಕಾರದ ಕಾಮಗಾರಿಯ ಬಿಲ್ ವಿತರಣೆ ಮಾಡದೆ ಅಧಿಕಾರಿಗಳ ನಿರ್ಲಕ್ಷ್ಯ ತೋರಿದ್ದಾರೆ ಎಂದು ದೂರಿದರು.
ಕೃಷಿ ಇಲಾಖೆ ಅಧಿಕಾರಿ ವಿ.ಪಿ. ಗೋವರ್ಧನ್ ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸೂಚನೆಯಂತೆ ಪ್ರತಿಯೊಬ್ಬ ರೈತರಿಗೆ ಪ್ರತ್ಯೇಕ ರೈತ ಗುರುತಿನ ಸಂಖ್ಯೆ ನೀಡಲಾಗುವುದು. ರೈತರ ಗುರುತಿನ ಸಂಖ್ಯೆ ರೈತನಿಗೆ ಅತ್ಯಂತ ಅವಶ್ಯಕ ಮತ್ತು ಅನಿವಾರ್ಯವಾಗಿದ್ದು, ರೈತರು ತಮ್ಮ ವ್ಯಾಪ್ತಿಯಲ್ಲಿ ಬರುವ ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿ ಕಾರಿಗಳ ತಮ್ಮ ಆಧಾರ ಕಾರ್ಡ್, ಪಹಣಿ, ಬ್ಯಾಂಕ್ ಖಾತೆಯ ನಕಲು ಪ್ರತಿ, ಮತ್ತು ಪ.ಜಾತಿ, ಹಾಗೂ ಪ.ಪಂಗಡದವರು ಜಾತಿ ಪ್ರಮಾಣ ಪತ್ರದ ನಕಲು ಪ್ರತಿ ನೀಡತಕ್ಕದ್ದು ಎಂದು ಹೇಳಿದರು.
ಉಪನೋಂದಣಿ ಅಧಿಕಾರಿ ಕರಿಬಸವಗೌಡ್ರು ಮಾತನಾಡಿ, ಸರ್ವರ್ ಸಮಸ್ಯೆ ಇಡೀ ರಾಜ್ಯಾದ್ಯಂತ ಇರುವುದರಿಂದ ನಾವು ಏನೂ ಮಾಡಲಿಕ್ಕೆ ಸಾಧ್ಯವಿಲ್ಲ. ಅಲ್ಲಿ ಸರಿಯಾದರೆ ನಾವು ನಮ್ಮ ಇಲಾಖೆಗೆ ಸಾರ್ವಜನಿಕರನ್ನು ಅಲೆದಾಡಿಸುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಓ ಗಂಗಾ ಧರನ್, ತಾ.ಪಂ. ಉಪಾಧ್ಯಕ್ಷೆ ಶಾಂತಮ್ಮ ಗದಿಗೆಪ್ಪ, ಬಸವಲಿಂಗಪ್ಪ, ಭಾಗ್ಯಲಕ್ಷ್ಮೀ, ರಾಜನಹಳ್ಳಿ ಲಕ್ಷ್ಮೀ ಮಹಾಂತೇಶ್, ಜಯಮ್ಮ ಬಸವಲಿಂಗಪ್ಪ ಗುತ್ತೂರು, ವಿಶಾಲಾಕ್ಷಮ್ಮ, ರತ್ನಮ್ಮ ರಂಗಪ್ಪ, ಅಧಿಕಾರಿಗಳಾದ ಉಪನೋಂದಣಿ ಇಲಾ ಖೆಯ ಕರಿಬಸವನಗೌಡ್ರು, ಆರೋಗ್ಯ ಇಲಾಖೆ ಡಾ. ಚಂದ್ರಮೋಹನ್, ಕೃಷಿ ಇಲಾಖೆ ಗೋವರ್ಧನ್, ಅಕ್ಷರದಾಸೋಹ ರಾಮಕೃಷ್ಣಪ್ಪ ಬಿಇಓ ಯು. ಬಸವರಾಜಪ್ಪ ಇನ್ನಿತರರಿದ್ದರು.