ಹರಪನಹಳ್ಳಿ, ಜು.13- ರಾಷ್ಟ್ರೀಯ ಲೋಕ ಅದಾಲತ್ ಬರುವ ಆಗಸ್ಟ್ 14 ರಂದು ನಡೆಯಲಿದ್ದು, ನ್ಯಾಯಾಲಯದ ವ್ಯಾಪ್ತಿಯಲ್ಲಿ ದಾಖಲಾಗಿರುವ ಸಣ್ಣ ಪುಟ್ಟ ವ್ಯಾಜ್ಯ ಪ್ರಕರಣ ಗಳನ್ನು ಕಕ್ಷಿದಾರರು ನ್ಯಾಯಾ ವಾದಿಗಳ ಸಮ್ಮುಖದಲ್ಲಾಗಲೀ ಅಥವಾ ನೇರವಾಗಿ ಉಭಯ ನ್ಯಾಯಾಲಯಕ್ಕೆ ಹಾಜರಾಗಿ ನಿಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಭಾರತಿ ಹೇಳಿದರು.
ಪಟ್ಟಣದ ಜೆ.ಎಂ.ಎಫ್.ಸಿ. ನ್ಯಾಯಾಲಯದ ಆವರಣದಲ್ಲಿ ಇಂದು ಜರುಗಿದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಲೋಕ ಅದಾಲತ್ ವ್ಯಾಪ್ತಿಯಲ್ಲಿ ಬರುವ ಚೆಕ್ಕು ಅಮಾನ್ಯ ಪ್ರಕರಣ, ಬ್ಯಾಂಕ್ ವಸೂಲಾತಿ, ಮೋಟಾರು ಅಪಘಾತ, ಭೂ ಸ್ವಾಧೀನ, ಸಿವಿಲ್, ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಿ ಎಂದು ಅವರು ಕಕ್ಷಿದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕಿರಿಯ ಸಿವಿಲ್ ನ್ಯಾಯಾಧೀಶರಾದ ಪಕ್ಕೀರವ್ವ ಕೆಳಮನೆ, ವಕೀಲರ ಸಂಘದ ಅಧ್ಯಕ್ಷ ಕೆ. ಚಂದ್ರೇಗೌಡ್ರು, ಅಪರ ಸರ್ಕಾರಿ ವಕೀಲ ವಿ.ಜಿ. ಪ್ರಕಾಶ್ ಗೌಡ್ರು, ಸರ್ಕಾರಿ ಅಭಿಯೋಜಕರುಗಳಾದ ಮೀನಾಕ್ಷಿ, ನಿರ್ಮಲ, ವಕೀಲರುಗಳಾದ ಚಂದ್ರಮೌಳಿ, ಎಂ. ಮೃತ್ಯುಂಜಯ, ಬಿ. ಸಿದ್ದೇಶ್, ಮುತ್ತಿಗಿ ರೇವಣ್ಣ, ಮುಜುಬರ್, ಗಿರೀಶ್, ಹುಲಿಯಪ್ಪ ಕೋಟ್ರೇಶ್, ಮಂಜುನಾಥ್, ಗುಡದಯ್ಯ, ತಿಪ್ಪೇಶ್ ಇನ್ನಿತರರಿದ್ದರು.