ಕಲ್ಯಾಣ ಮಂಟಪ ಸರ್ವ ಜನಾಂಗದ ಸದ್ಬಳಕೆಗೆ ಸಮರ್ಪಣೆ

ಡಿಸಿಎಂ ಟೌನ್‌ಶಿಪ್‌ನಲ್ಲಿ ವಾಸವಿ ಸೇವಾ ಸಂಘದ ನೂತನ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ರಾಜನಹಳ್ಳಿ ರಮಾನಂದ್

ದಾವಣಗೆರೆ, ಅ.15- ವಾಸವಿ ಸೇವಾ ಸಂಘದಿಂದ ಡಿಸಿಎಂ ಟೌನ್ ಶಿಪ್ ನಲ್ಲಿ ನಿರ್ಮಾಣವಾಗುತ್ತಿರುವ ಕಲ್ಯಾಣ ಮಂಟಪವನ್ನು ಸರ್ವ ಜನಾಂಗದ ಸದ್ಬಳಕೆಗೆ ಸಮರ್ಪಣೆ ಮಾಡುವುದಾಗಿ ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ರಾಜನಹಳ್ಳಿ ರಮಾನಂದ್ ತಿಳಿಸಿದರು.

ನಗರದ ಡಿಸಿಎಂ ಟೌನ್‌ಶಿಪ್‌ನಲ್ಲಿ ಇಂದು ಏರ್ಪಾಡಾಗಿದ್ದ ನೂತನ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ನಂತರ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಕಲ್ಯಾಣ ಮಂಟಪ ಕೇವಲ ವಾಸವಿ ಸಮಾಜಕ್ಕೆ ಮಾತ್ರ ಸೀಮಿತವಲ್ಲ, ಎಲ್ಲ ವರ್ಗದ ಜನರು ಇದರ ಸದುಪಯೋಗಪಡೆದುಕೊಳ್ಳಬಹುದು. ಕುಂದವಾಡ ಕೆರೆ ಬಳಿ, ಹಳೇ ಪೇಟೆ ಮತ್ತು ಡಿಸಿಎಂ ಬಡಾವಣೆ ಈ 3 ಭಾಗ ಗಳಲ್ಲಿನ ಕಲ್ಯಾಣ ಮಂಟಪಗಳನ್ನು ಸರ್ವ ಜನಾಂಗವೂ ಸಹ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ಭವಿಷ್ಯದ ಪೀಳಿಗೆಗೆ ಉತ್ತಮ ಸಂಸ್ಕೃತಿ ಮತ್ತು ಸಾಮಾಜಿಕ ರೀತಿ, ನೀತಿಗಳನ್ನು ಕೊಂಡೊಯ್ಯುವ ಹೆಗ್ಗಳಿಕೆ ವಾಸವಿ ಸಮಾಜಕ್ಕೆ ಇದೆ ಎಂದು ಪ್ರಶಂಸಿಸಿದರು.

ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್ ಮಾತನಾಡಿ, ಡಿಸಿಎಂ ಬಡಾವಣೆಯಲ್ಲಿನ ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕ ಸೇರಿದಂತೆ, ಅಗತ್ಯ ಮೂಲಭೂತ ಸೌಕರ್ಯಗಳ ಮುಖೇನ ಅಭಿವೃದ್ಧಿಗೆ ಪಾಲಿಕೆ ಮೇಯರ್ ಮೂಲಕ ಮನವಿ ಸಲ್ಲಿಸಿದರೆ ಕೆಲಸ ಮಾಡಿಕೊಡುವುದಾಗಿ ಆಶ್ವಾಸನೆ ನೀಡಿದರು.

ಡಿಸಿಎಂ ಟೌನ್ ಶಿಪ್ ವಾಸವಿ ಸೇವಾ ಸಂಘದ ಅಧ್ಯಕ್ಷ ಬಿ.ಎಸ್. ರಾಮಶ್ರೇಷ್ಠಿ ಅಧ್ಯಕ್ಷತೆ ವಹಿಸಿದ್ದರು. 

ಕನ್ಯಕಾ ಪರಮೇಶ್ವರಿ ದೇವಸ್ಥಾನದ ಆಜೀವ ಗೌರವಾಧ್ಯಕ್ಷ ಆರ್.ಎಸ್. ನಾರಾಯಣಸ್ವಾಮಿ, ಡಾ. ಬಿ.ಎಸ್. ನಾಗಪ್ರಕಾಶ್ ಅವರ ಪುತ್ರ ಡಾ. ಅಭಿಷೇಕ್, ವರ್ತಕ ಹೆಚ್.ಆರ್. ವೇಣುಗೋಪಾಲ್ ಶ್ರೇಷ್ಠಿ, ವಾಸವಿ ಸೇವಾ ಸಂಘದ  ಉಪಾಧ್ಯಕ್ಷ ಬಿ.ವಿ. ಗಂಗಪ್ಪ ಶ್ರೇಷ್ಠಿ, ಬಿ.ಎಲ್. ಶೇಷಪ್ಪ ಶ್ರೇಷ್ಠಿ, ಹೆಚ್. ಪ್ರಹ್ಲಾದ್ ಶ್ರೇಷ್ಠಿ, ಕೆ.ಎಸ್. ರುದ್ರಶ್ರೇಷ್ಠಿ, ಬಿ.ಹೆಚ್. ಕೃಷ್ಣಮೂರ್ತಿ ಶ್ರೇಷ್ಠಿ, ಕೆ.ಎಲ್. ರವೀಂದ್ರನಾಥ ಶ್ರೇಷ್ಠಿ, ಎಸ್. ನಾಗರಾಜ ಶ್ರೇಷ್ಠಿ, ಹೆಚ್.ಬಿ. ಮಾರುತಿ, ಹೆಚ್.ಎನ್. ರತ್ನಕುಮಾರ ಶ್ರೇಷ್ಠಿ, ವೈ.ಯು. ಪ್ರಸನ್ನಕುಮಾರ್, ಕೆ.ಎಸ್. ನಾಗರಾಜ್, ಬಿ.ಹೆಚ್. ಭಾರ್ಗವರಾಮ, ಟಿ.ಎಸ್. ಕಿರಣ್  ಸೇರಿದಂತೆ ಇತರರು ಇದ್ದರು. ಸಂಘದ ನಿರ್ದೇಶಕ ಹೆಚ್. ವೆಂಕಟೇಶ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಬಿ.ಹೆಚ್. ಅಶೋಕ್ ನಿರೂಪಿಸಿದರು.

error: Content is protected !!