ಒಣ ತ್ಯಾಜ್ಯದಿಂದ ಗೊಬ್ಬರ ನಗರ ಪಾಲಿಕೆಗೆ ಪ್ರಶಸ್ತಿ

ಪ್ರಶಸ್ತಿ ಪಡೆದ ಆಯುಕ್ತ ವಿಶ್ವನಾಥ್‌ ಮುದಜ್ಜಿ

ದಾವಣಗೆರೆ,ಅ.12- ಒಣ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸುವಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯು ಕೈಗೊಂಡಿ ರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ರುವ ಕರ್ನಾಟಕ ಸರ್ಕಾರದ ಪೌರಾಡಳಿತ ನಿರ್ದೇಶನಾಲಯವು ಉತ್ತಮ ಅಭ್ಯಾಸ ಪ್ರಶಸ್ತಿ ನೀಡುವುದರ ಮೂಲಕ ಗೌರವಿಸಿದೆ.

ಈ ಸಂಬಂಧ ಬೆಂಗಳೂರಿನ ವಿಧಾನ ಸೌಧದಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ಪೌರಾಡಳಿತ ಖಾತೆ ಸಚಿವ ಎಂ.ಟಿ.ಬಿ. ನಾಗರಾಜ್ ಮತ್ತು ನಗರಾಭಿವೃದ್ಧಿ ಖಾತೆ ಸಚಿವ ಭೈರತಿ ಬಸವರಾಜ ಅವರುಗಳು ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪೌರಾಡಳಿತ ಇಲಾಖೆಯ ನಿರ್ದೇಶಕರಾದ ಕಾವೇರಿ ಮತ್ತು ಇತರೆ ಗಣ್ಯರು ಉಪಸ್ಥಿತರಿದ್ದರು.

ಒಣ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಮಾಡುವಲ್ಲಿ ನಿರ್ವಹಿಸಿದ ಮಾದರಿ ಬಗ್ಗೆ ಶ್ಲ್ಯಾಘಿಸಿರುವ ಪೌರಾಡಳಿತ ನಿರ್ದೇಶನಾಲಯವು ರಾಜ್ಯದ 20 ನಗರ ಪಾಲಿಕೆ ಮತ್ತು ನಗರ ಸಭೆಗಳಿಗೆ ಉತ್ತಮ ಅಭ್ಯಾಸ ಪ್ರಶಸ್ತಿ ಪ್ರಶಸ್ತಿ ನೀಡಿದ್ದು, ಆ ಪೈಕಿ ದಾವಣಗೆರೆ ನಗರ ಪಾಲಿಕೆ ಪ್ರಶಸ್ತಿಯೂ ಒಂದು.

ದಾವಣಗೆರೆಯ ಎಂ.ಸಿ.ಸಿ. `ಬಿ’ ಬ್ಲಾಕ್‌ನಲ್ಲಿನ ಒಣ ತ್ಯಾಜ್ಯವನ್ನು ವಿಲೇವಾರಿ ಮಾಡುವುದರ ಜೊತೆಗೆ ಗೊಬ್ಬರವನ್ನಾಗಿ ರೂಪಿಸುವಲ್ಲಿ ಕಳೆದ ಸುಮಾರು ಒಂದೂವರೆ ವರ್ಷಗಳಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಸಲ್ಲಿಸಿದ ವರದಿಯನ್ವಯ ಪೌರಾಡಳಿತ ನಿರ್ದೇಶನಾಲಯವು ಪ್ರಶಸ್ತಿಗೆ ಆಯ್ಕೆ ಮಾಡಿದೆ.

error: Content is protected !!