ಸಂಸ್ಕೃತ ವಿದ್ವಾಂಸ ಡಾ. ಶಂಕರ ರಾಜಾರಾಮನ್‌ಗೆ `ವಾಗ್ದೇವಿ ಪ್ರಶಸ್ತಿ’ ಪ್ರದಾನ
ಸಿರಿಗೆರೆ, ಫೆ.21- ನಮ್ಮ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಗುರುತಿಸಿ ಪ್ರಶಸ್ತಿ ನೀಡುತ್ತೇವೆ ಎಂದು ಹೇಳಿದಾಗ ಗೊಂದಲ ಕ್ಕೀಡಾಗಿ ಲೌಕಿಕ ಭಾವನೆಗಳಿಗೊಳಗಾಗುತ್ತೇ ವೇನೋ ಅನ್ನಿಸಿತ್ತು. ಆದರೆ ಸಾಹಿತ್ಯಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಭಾವಂತರನ್ನು ಗಮನಿಸಿ ಇದು ನಿಜವಾದ ಸಾಹಿತ್ಯ ಪ್ರೇಮದ ಅಂಕುರ ಎಂದು ಒಪ್ಪಿಕೊಳ್ಳ ಲಾಯಿತು ಎಂದು ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಇಲ್ಲಿನ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಭಾನುವಾರ ಅಖಿಲ ಭಾರತ ಸಾಹಿತ್ಯ ಪರಿಷತ್‌ನಿಂದ ಆದಿಕವಿ ಪುರಸ್ಕಾರ ಹಾಗೂ ವಾಗ್ದೇವಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆದಿಕವಿ ಪ್ರಶಸ್ತಿ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ಯಾವುದೇ ಅದ್ಧೂರಿ ಕಾರ್ಯಕ್ರಮವಾಗಿ ಮಾಡದೆ ಸರಳ ಹಾಗೂ ಕೊರೊನಾ ಎಚ್ಚರಿಕೆಯನ್ನು ಅನುಸರಿಸಿ ಮಾಡಬೇಕು ಎಂದು ಮುನ್ಸೂಚನೆ ನೀಡಲಾಗಿತ್ತು. ಈಗ ಅದೇ ರೀತಿ ಆಗುತ್ತಿದೆ. ಇದನ್ನು ನಮ್ಮ ಭಕ್ತರ ಸಮ್ಮುಖದಲ್ಲಿ ಮಾಡಿದ್ದರೆ ಭಾರೀ ಸಂಖ್ಯೆಯಲ್ಲಿ ಸೇರುತ್ತಿದ್ದರು. ಆದರೆ ಸಾಮಾಜಿಕ ಕಳಕಳಿಯಿಂದ ಎಚ್ಚರಿಕೆ ವಹಿಸಬೇಕಾಯಿತು. ಆದರೂ ಈ ಪ್ರಶಸ್ತಿ ನಮ್ಮ ಭಕ್ತರಿಗೆ ದೊರೆತ ಪ್ರಶಸ್ತಿ ಎಂದರು.
ಕೊರೊನಾ ಒಂದು ಪಾಂಡವರ ಅಜ್ಞಾತ ವಾಸದ ತರಹ ಆಯಿತು. ಈ ವೇಳೆಯಲ್ಲಿ ಅಂತರ್ಜಾಲದ ಎಲ್ಲಾ ಮಜಲುಗಳನ್ನು ಬಳಸಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ಶಿಕ್ಷಣ, ತರಳಬಾಳು ಮೊಬೈಲ್ ಆಪ್ ಬಿಡುಗಡೆಗೂ ಅನುಕೂಲವಾಯಿತು. ಈ ಆಪ್ ನಿಂದ ಮಠದ ಎಲ್ಲಾ ವ್ಯವಹಾರವೂ ಸುಲಲಿತ ವಾಗುವಂತಾಯಿತು ಎಂದರು.
ಪ್ರಶಸ್ತಿಯಿಂದ ಬಂದ ಹಣವನ್ನು ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮೀಸಲಿರಿಸುವುದಾಗಿ ಹೇಳಿದರು.
ಈ ವೇಳೆ ತಮ್ಮ ವಿದ್ಯಾರ್ಥಿದೆಸೆಯಲ್ಲಿನ ಸಂಸ್ಕೃತ ವ್ಯಾಸಂಗದ ದಿನಗಳನ್ನು ತಮ್ಮ ಮಾರ್ಗದರ್ಶಕರು, ಶಿಕ್ಷಕರನ್ನು, ವಿಯನ್ನಾ ವಿವಿ ಯಿಂದ ಹೆಚ್ಚಿನ ವ್ಯಾಸಂಗಕ್ಕೆ ಸಿಕ್ಕ ಫೆಲೋಷಿಪ್, ಪಿಟೀಲಿನ ತಂತಿ ನುಡಿಸಿದ್ದನ್ನು ಹಿರಿಯ ಗುರುಗಳು ಮೆಚ್ಚಿ ಮಠದ ಪಿಟೀಲನ್ನು ನೀಡಿದ್ದನ್ನು ನೆನೆದರು.
ಖ್ಯಾತ ಸಂಸ್ಕೃತ ವಿದ್ಯಾಂಸ ಬೆಂಗಳೂರಿನ ಡಾ. ಶಂಕರ ರಾಜಾರಾಮನ್ `ವಾಗ್ದೇವಿ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು. ಅಭಾಸಾಪ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು
ಆದಿಕವಿ ಪುರಸ್ಕಾರಕ್ಕೆ ಸಿರಿಗೆರೆ ಡಾಕ್ಟರ್ ಸ್ವಾಮೀಜಿಯವರನ್ನು ವಾಗ್ದೇವಿ ಪ್ರಶಸ್ತಿಗೆ ಡಾ.ಶಂಕರ ರಾಜಾರಾಮನ್‍ರವರು ಭಾಜನರಾಗಿ ಈ ಮಠದ ನೆಲದಲ್ಲಿ ನೀಡುತ್ತಿರುವುದು ಪರಿಷದ್ ಗೆ ಹೆಮ್ಮೆಯ ವಿಚಾರ ಎಂದರು.
ಬೆಂಗಳೂರು ವಿವಿ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಾಯ, ದಾನ , ಅರ್ಪಣೆ, ಸಮರ್ಪಣೆ, ಸೇವೆ, ತ್ಯಾಗ ಈ ಎಲ್ಲಾ ವರ್ಗಕ್ಕೆ ಸೇರಿದ ಸ್ವಾಮೀಜಿಯವರಿಗೆ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಚಾರ ಶಿಕ್ಷಕ, ಅಧ್ಯಾಪಕ, ಪ್ರಾಧ್ಯಾಪಕ, ಉಪಾಧ್ಯಾಯ, ಆಚಾರ್ಯ, ಪ್ರಾಚಾರ್ಯ, ಗುರು, ದೇವರು ಸಹ ಅವರಾಗಿದ್ದಾರೆ ಎಂದು ಕೊಂಡಾಡಿದರು.
ಮಕ್ಕಳು ಯೋಗ ದ್ಯಾನ, ಪ್ರಾಣಾಯಾಮ, ವಾಯುವಿಹಾರ, ಸಮಯಕ್ಕೆ ಸರಿಯಾಗಿ ಆಹಾರ ಸೇವನೆ, ನಿದ್ದೆ ಒಳ್ಳೆಯ ವಿಚಾರ, ತ್ಯಾಗ ವನ್ನು ಮೈಗೂಡಿಸಿಕೊಳ್ಳಬೇಕೆಂದರು.
ಧರ್ಮಜಾಗರಣ ಪ್ರಾಂತ ಸಹ ಸಂಯೋಜಕ ಡಾ. ಹನುಮಂತ ಮಳಲಿ, ವಾಗ್ದೇವಿ ಶಿಕ್ಷಣ ಸಮೂಹದ ಅಧ್ಯಕ್ಷರಾದ ಕೆ.ಹರೀಶ್, ಉದ್ಯಮಿ ವೀಣಾ ಜಯರಾಮ್, ಸಮಾಜ ಸೇವಕರಾದ ಎಸ್.ಜಯರಾಮ್, ಪತ್ರಕರ್ತ ಹರೀಶ್ ಕೋಣೆಮನೆ, ವಿಶೇಷ ಅಧಿಕಾರಿ ವಾಮದೇವಪ್ಪ, ಆಡಳಿತಾಧಿಕಾರಿ ಹೆಚ್. ಬಿ. ರಂಗನಾಥ್, ಶಾಲಾ ಕಾಲೇಜುಗಳು ಪ್ರಾಚಾರ್ಯರು ಭಾಗವಹಿಸಿದ್ದರು.
ಅಖಿಲ ಭಾರತ ಸಾಹಿತ್ಯ ಪರಿಷತ್ ಕಾರ್ಯಾಧ್ಯಕ್ಷ ಡಾ. ಮಾದವ್ ಸ್ವಾಗತಿಸಿದರು. ಎನ್.ಜೆ.ಕೋಟೆ ವಂದಿಸಿದರು. ವಿದ್ಯಾರ್ಥಿನಿಯರಿಂದ ವಚನಗೀತೆ ಗಾಯನ ನಡೆಯಿತು. 3 ಮಹಡಿಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಶಾಂತ ರೀತಿಯಿಂದ ಕುಳಿತು ಕಾರ್ಯಕ್ರಮ ವೀಕ್ಷಿಸಿದರು.