ನಗರದ ಜನತೆಯಲ್ಲಿ ಜಾಗೃತಿ ಮೂಡಿಸಿದ `ಕ್ಯಾನ್ಸರ್ ನಡೆ’

ದಾವಣಗೆರೆ, ಅ.10- ಕ್ಯಾನ್ಸರ್ ಬಂದರೆ ಹೆದರುವುದಕ್ಕಿಂತ ಧೈರ್ಯದಿಂದ ಎದುರಿಸಬೇಕು. ವಿಶ್ವಾಸದಿಂದ ಸೂಕ್ತ ಚಿಕಿತ್ಸೆ ತೆಗೆದುಕೊಂಡರೆ ಅದನ್ನು ಮೆಟ್ಟಿ ನಿಲ್ಲ ಬಹುದು. ಪ್ರಾರ್ಥಿಸಿ-ಎದುರಿಸಿ-ಜಯಶೀಲರಾಗಿ ಎಂಬ ಧ್ಯೇಯದೊಂದಿಗೆ ಕ್ಯಾನ್ಸರ್ ನಡೆ -2021 ನಗರದಲ್ಲಿ ಇಂದು ಯಶಸ್ವಿಯಾಗಿ ನಡೆಯಿತು. 

ಟಿ.ವಿ.ಸ್ಟೇಷನ್ ಕೆರೆಯ ಆವರಣದಲ್ಲಿ ದಾವಣಗೆರೆ ಕ್ಯಾನ್ಸರ್ ಫೌಂಡೇಷನ್ ಹೈದರಾಬಾದ್‌ನ ಗ್ರೇಸ್‌ ಫೌಂಡೇಷನ್ ಸಹಯೋಗದೊಂದಿಗೆ ಭಾರತೀಯ ರೆಡ್ ಕ್ರಾಸ್‌ ಸಂಸ್ಥೆ ಹಾಗೂ ವರದಿಗಾರರ ಕೂಟ ಇವರ ಸಹಕಾರದೊಂದಿಗೆ ಆಯೋಜಿಸಿದ್ದ ಈ ಅಭಿಯಾನವನ್ನು ಮಹಾನಗರ ಪಾಲಿಕೆ  ಮೇಯರ್ ಎಸ್.ಟಿ. ವೀರೇಶ್ ಹಾಗೂ ಆಯುಕ್ತ ವಿಶ್ವನಾಥ್ ಮುದಜ್ಜಿ ಜಂಟಿಯಾಗಿ ಜಾಗೃತಿ ಫಲಕಗಳನ್ನು ಅನಾವರಣ ಮಾಡುವ ಮೂಲಕ ಚಾಲನೆ ನೀಡಿದರು. 

ದಾವಣಗೆರೆ ಕ್ಯಾನ್ಸರ್ ಫೌಂಡೇಷನ್ ಅಧ್ಯಕ್ಷ ಡಾ. ಶ್ರೀಶೈಲ ಬ್ಯಾಡಗಿ, ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಸ್ವಯಂಪ್ರೇರಿತ ರಕ್ತದಾನಿಗಳ ಒಕ್ಕೂಟ ಲೈಫ್ ಲೈನ್ ಛೇರ್ಮನ್ ಡಾ.ಎ.ಎಂ. ಶಿವಕುಮಾರ್ ಅವರ ನೇತೃತ್ವದಲ್ಲಿ  ಈ ಅಭಿಯಾನ ನಡೆಯಿತು.

ವರದಿಗಾರರ ಕೂಟದ ಕಾರ್ಯದರ್ಶಿ ಮಂಜುನಾಥ್ ಕಾಡಜ್ಜಿ, ಭಾರತೀಯ ವಿಕಾಸ ಪರಿಷತ್ತಿನ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ, ದಾವಣಗೆರೆ ಘಟಕದ ಅಧ್ಯಕ್ಷ ಜಯರುದ್ರೇಶ್, ದಾವಣಗೆರೆ ರೋಟರಿ ಕ್ಲಬ್ ಅಧ್ಯಕ್ಷ ಆರ್.ಟಿ. ಮೃತ್ಯುಂಜಯ, ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್. ಓಂಕಾರಪ್ಪ, ಲೈಫ್ ಲೈನ್ ಕಾರ್ಯದರ್ಶಿ ಅನಿಲ್ ಬಾರೆಂಗಳ್ ಅವರೊಂದಿಗೆ ಆಯಾ ಸಂಘಟನೆಗಳ ಸದಸ್ಯರು, ನಗರಪಾಲಿಕೆ ಸದಸ್ಯ ವೀರೇಶ್, ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ಮುಂತಾದವರು ಭಾಗವಹಿಸಿದ್ದರು. 

ಇವರೊಟ್ಟಿಗೆ ಸಮಾಜ ಸೇವೆಯಲ್ಲಿ ಆಸಕ್ತರಾದ ವೈದ್ಯರು, ಇಂಜಿನಿಯರ್ ಗಳು, ಉಪನ್ಯಾಸಕರುಗಳು, ವಿದ್ಯಾರ್ಥಿಗಳು, ಉತ್ಸಾ ಹದಿಂದ ಪಾಲ್ಗೊಂಡಿದ್ದರು. ಕ್ಯಾನ್ಸರ್ ಜಯಿಸಿ ರುವ ದಾವಣಗೆರೆ ಕ್ಯಾನ್ಸರ್ ಫೌಂಡೇಷನ್ ರಾಯಾಭಾರಿ ಅರುಣ್ ಕುಮಾರ್ ಆರ್.ಟಿ. ಹಾಗೂ ಇತ್ತೀಚೆಗೆ ವಿಶ್ವಾಸದಿಂದ ಕ್ಯಾನ್ಸರ್ ಎದುರಿಸಿ ಎಂದಿನ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಆರ್.ಜಿ. ಕಾಮರ್ಸ್ ಮತ್ತು ಮ್ಯಾನೇಜ್ ಮೆಂಟ್ ಕಾಲೇಜಿನ ಅಧ್ಯಕ್ಷರಾದ ಶ್ವೇತಾ ಗಾಂಧಿ ಅಭಿಯಾನದಲ್ಲಿ ಭಾಗವಹಿಸಿ ಮೆರಗು ನೀಡಿದರು. 

ಕಲಾವಿದ ರವೀಂದ್ರ ಅರಳಗುಪ್ಪಿ ಅವರ ಕಲಾಕೃತಿಗಳು ಗಮನ ಸೆಳೆದವು. ದಾವಣಗೆರೆ ಕ್ಯಾನ್ಸರ್ ಫೌಂಡೇಷನ್ ಕಾರ್ಯದರ್ಶಿ ಕ್ಯಾನ್ಸರ್ ತಜ್ಞ ಡಾ. ಸುನೀಲ್ ಬ್ಯಾಡಗಿ ಅಭಿಯಾನವನ್ನು ಯಶಸ್ವಿಯಾಗಿ ನಿರ್ವಹಿಸಿದರು.

error: Content is protected !!