ದಾವಣಗೆರೆ, ಅ.8- ಇಲ್ಲಿಗೆ ಸಮೀಪದ ಕುಕ್ಕುವಾಡದ ಲ್ಲಿ ರುವ ದಾವಣಗೆರೆ ಷುಗರ್ ಕಂಪನಿಯಲ್ಲಿ ಈ ಸಾಲಿನ ಕಬ್ಬು ಅರಿಯುವಿಕೆಗೆ ಕಂಪನಿಯ ವ್ಯವಸ್ಥಾಪಕ ನಿರ್ದೇ ಶಕರೂ ಆದ ಹಿರಿಯ ಕೈಗಾರಿಕೋದ್ಯಮಿ ಎಸ್.ಎಸ್. ಗಣೇಶ್ ಹಾಗು ಕಾರ್ಯನಿರ್ವಾಹಕ ನಿರ್ದೇಶಕ ಅಭಿಜಿತ್ ಜಿ. ಶಾಮನೂರು ಅವರುಗಳು ಇಂದು ಚಾಲನೆ ನೀಡಿದರು.
ಶ್ರೀ ಗಣಪತಿ, ಶ್ರೀ ಸರಸ್ವತಿ ಮತ್ತು ಶ್ರೀ ಲಕ್ಷ್ಮಿ ಪೂಜೆ ನೆರವೇರಿಸಿದ ನಂತರ ಕಬ್ಬನ್ನು ಕ್ಯಾರಿಯರ್ಗೆ ಹಾಕುವ ಮುಖಾಂತರ ಕಬ್ಬು ಅರೆಯುವುದಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು, ಕಬ್ಬು ಬೆಳೆಗಾರರು, ರೈತ ಬಾಂಧವರು ಹಾಗೂ ಕಾರ್ಖಾನೆಯ ಆಡಳಿತ ಅಧಿಕಾರಿಗಳು, ನೌಕರರು ಮತ್ತು ಕಾರ್ಮಿಕ ವರ್ಗದವರು ಭಾಗವಹಿಸಿದ್ದರು.