ದಾವಣಗೆರೆ, ಜು.11- ಪೆಟ್ರೋಲ್, ಡೀಸೆಲ್ ಗ್ಯಾಸ್ ಸಿಲಿಂಡರ್ ಹಾಗೂ ದಿನಸಿ ಬೆಲೆಗಳನ್ನು ಹೆಚ್ಚಿಸಿರುವ ಕೇಂದ್ರದ ಬಿಜೆಪಿ ಸರ್ಕಾರದ ಕ್ರಮವನ್ನು ಖಂಡಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರಕಟಿಸಿರುವ ಬೆಲೆ ಏರಿಕೆ ಫ್ಲೆಕ್ಸ್ ಹಾಗೂ ಪ್ರತಿಗಳನ್ನು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಭಾನುವಾರ ಬಿಡುಗಡೆಗೊಳಿಸಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಅನಿತಾಬಾಯಿ ಮಾಲತೇಶರಾವ್ ಜಾಧವ್ ಅವರ ಅಧ್ಯಕ್ಷತೆಯಲ್ಲಿ ಏರ್ಪಾಡಾಗಿದ್ದ ಸರಳ ಸಮಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸುಷ್ಮಾ ಪ್ರಕಾಶ್ ಪಟೇಲ್, ಶ್ರೀಮತಿ ಆಶಾ ಮುರುಳಿ, ಕವಿತಾ, ಉಮಾ, ಗೀತ, ಮಂಗಳಮ್ಮ, ಸುನಿತಾ, ಸವಿತಾ, ಇಂದ್ರಮ್ಮ, ಮಣಿ, ಭಾರತಿ ಮತ್ತಿತರರು ಉಪಸ್ಥಿತರಿದ್ದರು.
January 15, 2025