ವಿಚಾರ-ಆಚಾರಗಳ ಸಂಗಮವೇ ಶರಣ ಧರ್ಮ

ಬಸವ ಬಳಗದ ಅಧ್ಯಕ್ಷರಾಗಿದ್ದ ಬಸವ ತತ್ವ ಪ್ರಚಾರಕ ಲಿಂ. ದೇವಿಗೆರೆ ವೀರಭದ್ರಪ್ಪ ಅವರ ನುಡಿನಮನ ಕಾರ್ಯಕ್ರಮದಲ್ಲಿ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ದಾವಣಗೆರೆ, ಅ.4- ವಿಚಾರ ಮತ್ತು ಆಚಾರಗಳ ಸಂಗಮವೇ ಶರಣ ಧರ್ಮ, ಬಸವ ಧರ್ಮ, ಲಿಂಗಾಯತ ಧರ್ಮ. ಪ್ರಸ್ತುತ ವಿಚಾರವಂತರೇ ಹೆಚ್ಚಾಗಿದ್ದಾರೆ. ಆದರೆ ಆಚಾರವಂತರು ಕಡಿಮೆಯಾಗುತ್ತಿದ್ದಾರೆ ಎಂದು ಸಾಣೇಹಳ್ಳಿಯ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.

ನಗರದ ಡಾ. ಸದ್ಯೋಜಾತ ಶಿವಾ ಚಾರ್ಯ ಸ್ವಾಮೀಜಿ ಹಿರೇಮಠದ ಆವ ರಣದಲ್ಲಿ ಇಂದು ಏರ್ಪಾಡಾಗಿದ್ದ ಬಸವ ಬಳಗದ ಅಧ್ಯಕ್ಷರಾಗಿದ್ದ ಬಸವ ತತ್ವ ಪ್ರಚಾ ರಕ ಲಿಂ. ದೇವಿಗೆರೆ ವೀರಭದ್ರಪ್ಪ ಅವರ ಪುಣ್ಣಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. 

ಇನ್ನೂ ಕೆಲವರು ಬಸವ ಮಾರ್ಗದಲ್ಲಿ ನಡೆಯುತ್ತಿರುವುದು ಸಮಾಧಾನಕರ ಸಂಗತಿ. ಅವರಲ್ಲಿ ದೇವಿಗೆರೆ ವೀರಭದ್ರಪ್ಪ ಕೂಡ ಒಬ್ಬರು. ನಿಷ್ಠೂರವಾದಿಗಳಾಗಿದ್ದ ವೀರಭದ್ರಪ್ಪ ಅವರು  ತತ್ವಕ್ಕೆ ಚ್ಯುತಿ ಕಂಡು ಬಂದರೆ ತಕ್ಷಣ ಅದನ್ನು ಪ್ರತಿಭಟಿ ಸುವ ಎದೆಗಾರಿಕೆ ಅವರಲ್ಲಿತ್ತು.  ಮನುಷ್ಯ ನಿಗೆ ನಿಷ್ಠೆ, ನಿಷ್ಠೂರತೆ ಜೊತೆಗೆ ಬಸವಣ್ಣನವರ ಹಾಗೆಯೇ ವಿನಯವೂ ಮುಖ್ಯ. ನಮ್ಮ ಮಧ್ಯೆ ಬಸವ ಮಾರ್ಗದಲ್ಲಿ ಸಾಗುತ್ತಾ ನಮ ಗಿಂತ ಚನ್ನಾಗಿ ಬದುಕುವವರಿದ್ದಾರೆ. ಅವ ರನ್ನು ಗುರುತಿಸುವಂತಹ ಹೃದಯ ಶ್ರೀಮಂತಿಕೆ ಬೇಕು ಎಂದು ಮಾರ್ಮಿಕವಾಗಿ ನುಡಿದರು.

ಬಸವಣ್ಣನವರು ಯಾರನ್ನೂ ದೂರ ಇಟ್ಟವರಲ್ಲ. ಎಲ್ಲರನ್ನು ಬಾ ಬಂಧು ಎಂದು   ಅಪ್ಪಿಕೊಂಡು, ಒಪ್ಪಿಕೊಂಡವರು. ಪ್ರೀತಿಯಿಂದ ಏನನ್ನೂ ಬೇಕಾದರೂ ಬದಲಾವಣೆ ಮಾಡಲು ಸಾಧ್ಯವಿದೆ. ಆದರೆ ದ್ವೇಷದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು.

ಚಿತ್ರದುರ್ಗದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಸ್ಮರಣೆ ಅತ್ಯಂತ ಸೂಕ್ತ ಶಬ್ಧ. ಶಿವಗಣಾರಾಧನೆ, ಸಮಾರಾಧನೆಗಿಂತಲೂ ಅತ್ಯಂತ ಸಮಂಜಸ ವಾಗಿರುವಂತಹದ್ದು, ಸ್ಮರಣೆ ಎಂಬುದು ಲಿಂಗ್ಯಕ್ಯರ ಗುಣಗಾನ. ಸಾಧ್ಯವಾದರೆ ಅವರ ಸದ್ಗುಣಗಳನ್ನು ನಿತ್ಯ ಜೀವನದಲ್ಲಿ ಅನು ಷ್ಠಾನಕ್ಕೆ ತರುವ ಪ್ರಯತ್ನ ಮಾಡಬೇಕು ಎಂದರು.

ಬಸವ ತತ್ವದಲ್ಲಿ ಕೂಡ ಮಡಿವಂತಿಕೆ ಬರುತ್ತಿದೆ. ಬಸವ ತತ್ವದಲ್ಲಿ ನಡೆಯುವವರಿಗೆ ತಾಕತ್ತು ಬೇಕು.  ಮಡಿವಂತಿಕೆ ಮೀರುವಂತಹ ತಾಕತ್ತು ಬರಬೇಕಾಗಿದೆ. ಈ ನಿಟ್ಟಿನಲ್ಲಿ ಬಸವ ಬಳಗ, ಬಸವ ಸಂಘಟನೆಗಳು ಚಿಂತನೆ ಮಾಡುವ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮಿಗಳು, ಶ್ರೀ ಗುರು ಮಹಾಂತ ಸ್ವಾಮೀಜಿ, ಶ್ರೀ ಬಸವ ಪ್ರಭು ಸ್ವಾಮೀಜಿ, ಶ್ರೀ ಸಿದ್ಧರಾಮ ಶರ ಣರು, ಶ್ರೀ ಬಸವಲಿಂಗ ಸ್ವಾಮೀಜಿ, ಶ್ರೀ ಬಸವಕುಮಾರ ಸ್ವಾಮೀಜಿ, ಶ್ರೀ ಸಿದ್ಧಲಿಂಗ ಸ್ವಾಮೀಜಿ, ಮಾತೆ ವಾಗ್ದೇವಿ ತಾಯಿ, ಮಾತೆ ಕುಮುದಿನಿ ತಾಯಿ, ಅನುಭಾವಿ ಗಳಾದ ಅಶೋಕ ಬರಗುಂಡಿ, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ದೇವಿ ಗೆರೆ ಪರಿವಾರದವರು ಭಾಗವಹಿಸಿದ್ದರು.

ಬಸವ ಕಲಾ ಲೋಕದ ಕಲಾವಿದರು ವಚನಗೀತೆ ಹಾಡಿದರು. ಎನ್.ಜೆ. ಶಿವಕುಮಾರ್ ನಿರೂಪಿಸಿದರು.

error: Content is protected !!