ಸಮಾಜದ ಸಂಘಟನೆಯನ್ನು ಮುಂಚೂಣಿಗೆ ತರಬೇಕು

ರೆಡ್ಡಿ ಸಮುದಾಯಕ್ಕೆ ಶ್ರೀ ವೇಮಾನಂದ ಸ್ವಾಮೀಜಿ ಕರೆ

ದಾವಣಗೆರೆ, ಫೆ.17- ಸಮಾಜದ ಸಂಘಟನೆಯನ್ನು ಒಗ್ಗಟ್ಟಿನಿಂದ ಸಂಘಟಿತರಾಗಿ ಬಲಗೊಳಿಸಿಕೊಂಡು ಮುಂಚೂಣಿಗೆ ತರುವಂತೆ ರೆಡ್ಡಿ ಸಮಾಜದ ಗುರುಗಳಾದ ಎರೇಹೊಸಳ್ಳಿ ಮಠದ ಶ್ರೀ ವೇಮಾನಂದ ಮಹಾಸ್ವಾಮೀಜಿ ಜಿಲ್ಲಾ ರೆಡ್ಡಿ ಸಮುದಾಯ ಮತ್ತು ರೆಡ್ಡಿ ಜನ ಸಂಘದ ಪದಾಧಿಕಾರಿಗಳಿಗೆ ಕರೆ ನೀಡಿದರು.

ನಗರದ ರೆಡ್ಡಿ ಜನಸಂಘ ಕಚೇರಿಯಲ್ಲಿ ಇಂದು ಸಂಜೆ ಹಮ್ಮಿಕೊಂಡಿದ್ದ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ರೆಡ್ಡಿ ಸಮಾಜ ಬೆಳೆವಣಿಗೆಯಲ್ಲಿ ಹಿಂದುಳಿಯಲು ಈಗೋ ಕಾರಣ ಎನ್ನಲಾಗುತ್ತದೆ. ಆದರೆ, ನಮ್ಮ ಸಮೀಕ್ಷೆಯ ಪ್ರಕಾರ ಈಗೋಗಿಂತ ಸಂಘಟನೆ ನಮ ಗೇಕೆ, ಅವಶ್ಯವಿಲ್ಲ ಎಂಬ ನಿರ್ಲಕ್ಷತನ ಪ್ರಮುಖ ಕಾರಣ ವೆನ್ನಬಹುದು. ಮನುಷ್ಯ ಸಂಘ ಜೀವಿಯಾಗಿದ್ದು, ಏಕಾಂಕಿ ಯಾಗಿ ಬದುಕಲಾಗುವುದಿಲ್ಲ. ಒಬ್ಬರೇ ಬದುಕುತ್ತೇವೆಂ ಬುದು ಒಳ್ಳೆಯ ಅಭಿಪ್ರಾಯವಲ್ಲ ಎಂದು ಹೇಳಿದರು.

ಬಹಳ ಜನಸಂಖ್ಯೆ ಇಲ್ಲದ ಸಣ್ಣ ಸಮುದಾಯಗಳೆಲ್ಲಾ ಸಂಘಟಿತರಾಗಿ ಮುಂಚೂಣಿಯಲ್ಲಿ ಸಾಗುತ್ತಿದ್ದು, ಆ ಸಮಾಜದವರು ಒಗ್ಗಟ್ಟಾಗಿ ಸೇರಿ ಸಮಾಜದ ಏಳಿಗೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಂತೆಯೇ ರೆಡ್ಡಿ ಸಮುದಾಯದವರು ಸಹ ಸಮಾಜದ ಶ್ರೇಯೋಭಿವೃದ್ಧಿಗೆ ಒಗ್ಗಟ್ಟಾಗಬೇಕಿದೆ ಎಂದು ಆಶಿಸಿದರು.

ಸಮಾಜದ ಎಲ್ಲರೂ ಸಹೋದರರು, ಸಂಬಂಧಿಗಳೇ ಆಗಿರುವುದರಿಂದ ಕೇವಲ ಮದುವೆ ಸಮಾರಂಭಗಳಿಗಷ್ಟೇ ಅಲ್ಲದೇ ಸಂಘದ ಸಮಾಜದ ಅಭಿವೃದ್ಧಿ ಕಾರ್ಯಗಳಲ್ಲೂ ಜೊತೆಗೆ ಸೇರಿಕೊಂಡು ಕೈ ಜೋಡಿಸಬೇಕು. ಕೇವಲ ಆರ್ಥಿಕ ಸಹಕಾರ ನೀಡಿ ಕೈ ತೊಳೆದುಕೊಳ್ಳಬಾರದು. ಹೀಗೆ ಭಾಗವಹಿಸುವುದರಿಂದ ಬಾಂಧವ್ಯ ಗಟ್ಟಿಗೊಳ್ಳುವ ಜೊತೆಗೆ ಸಮಾಜದ ಏಳಿಗೆ ಯನ್ನೂ ಕಾಣಬಹುದು ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಜಿಲ್ಲಾ ರೆಡ್ಡಿ ಜನಸಂಘದ ನೂತನ ಅಧ್ಯಕ್ಷರಾಗಿ ಕೆ. ವೆಂಕಟರಾಮಿ ರೆಡ್ಡಿ ಶ್ರೀಗಳ ಆಶೀರ್ವಾದದೊಂದಿಗೆ ಪ್ರಮಾಣ ವಚನ ಸ್ವೀಕರಿಸಿದರು. 

ಗೌರವಾಧ್ಯಕ್ಷರುಗಳಾದ ಆರ್. ವೆಂಕಟರೆಡ್ಡಿ, ಬ್ರಹ್ಮಾನಂದ ರೆಡ್ಡಿ, ಬಿ. ಶ್ರೀನಿವಾಸ ರೆಡ್ಡಿ, ಉಪಾಧ್ಯಕ್ಷರುಗಳಾದ ಕೆ. ಶ್ರೀನಿವಾಸ ರೆಡ್ಡಿ (ರಾಜು ರೆಡ್ಡಿ) ಕೆ. ಶ್ರೀನಾಥ ರೆಡ್ಡಿ, ಎಂ. ರಾಜಶೇಖರ ರೆಡ್ಡಿ, ಪ್ರಧಾನ ಕಾರ್ಯದರ್ಶಿ  ಎಂ. ಶ್ರೀನಿವಾಸ ರೆಡ್ಡಿ, ಖಜಾಂಚಿ ಎನ್.ಜಿ. ಶ್ರೀನಿವಾಸ ರೆಡ್ಡಿ, ಸಹ ಕಾರ್ಯದರ್ಶಿಗಳಾದ ಟಿ. ಗಂಗಾಧರ ರೆಡ್ಡಿ, ಕೆ. ನಾಗಿ ರೆಡ್ಡಿ, ನಿರ್ದೇಶಕರುಗಳಾದ ಎಸ್. ರಾಮಕೃಷ್ಣ ರೆಡ್ಡಿ, ನಾರಾಯಣ, ವೆಂಕಟರಮಣ ರೆಡ್ಡಿ, ಕೆ. ವೆಂಕಟರಮಣ ರೆಡ್ಡಿ, ಡಾ. ಎಸ್. ಮಲ್ಲಿಕಾರ್ಜುನ ರೆಡ್ಡಿ, ವೆಂಕಟೇಶ್ವರ ರೆಡ್ಡಿ, ವೈ. ಶ್ರೀನಿವಾಸ ರೆಡ್ಡಿ, ಬಿ. ಪ್ರಸಾದ್ ರೆಡ್ಡಿ, ಎಸ್. ಪ್ರತಾಪ್ ರೆಡ್ಡಿ, ಜಿ. ಭಾಸ್ಕರ್ ರೆಡ್ಡಿ, ಬ್ರಹ್ಮಾನಂದ ರೆಡ್ಡಿ, ಪ್ರಾಥ ರೆಡ್ಡಿ, ವೈ. ಸರೋಜಮ್ಮ, ಅಪರ್ಣ ಕೋಟಿ ರೆಡ್ಡಿ, ಸಿ. ಕೋಟಿ ರೆಡ್ಡಿ, ಸದಸ್ಯರುಗಳಾದ ಎಸ್. ರಾಮಮೋಹನ ರೆಡ್ಡಿ, ವೈ. ರಜನಿಕಾಂತ್ ರೆಡ್ಡಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!