ಹರಿಹರ, ಜು.9- ನಗರದ ತಹಶಿಲ್ದಾರ್ ಕಚೇರಿ ಸಭಾಂಗಣದಲ್ಲಿ ಉಪಾವಿಭಾಗಧಿಕಾರಿ ಮಮತಾ ಹೊಸಗೌಡ್ರು ಹರಿಹರ ತಾಲ್ಲೂಕು ದೀಟೂರು ಗ್ರಾಮದಿಂದ ಜಗಳೂರು ತಾಲ್ಲೂಕಿನ 53 ಕೆರೆಗಳಿಗೆ ನೀರು ಸರಬರಾಜು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನ ಪಡಿಸಿಕೊಳ್ಳವ ಭೂ ಮಾಲೀಕರ ಜೊತೆಯಲ್ಲಿ ಸಭೆ ನಡೆಸಿದರು.
ನಗರದ ಆರ್.ವಿ. ಬಲರಾಮ ಶೆಟ್ಟಿ ಸಹೋದರರ ಒಡೆತನದ 8 ಎಕರೆ 6 ಗುಂಟೆ ಹಾಗೂ ದೀಟೂರು ಗ್ರಾಮದ ಕುಮಾರ್ ಸೇರಿದಂತೆ ಹಲವು ರೈತರ ಜಮೀನನ್ನು ಭೂ ಸ್ವಾಧೀನಕ್ಕೆ ಸರ್ಕಾರ ಮುಂದಾಗಿರುವುದರಿಂದ ಅವರ ಕುಟುಂಬದ ಸದಸ್ಯರ ಜೊತೆಯಲ್ಲಿ ಚರ್ಚೆ ಮಾಡಿ ಆ ಪ್ರದೇಶದಲ್ಲಿ ಸರ್ಕಾರದ ಎಸ್. ಆರ್. ದರ 12 ಲಕ್ಷ ರೂಪಾಯಿ ಇದ್ದು ಅದರಂತೆ ವಶಪಡಿಸಿಕೊಂಡ ಜಮೀನಿಗೆ ಎಸ್.ಆರ್. ದರದ ಜೊತೆಗೆ ಹೆಚ್ಚು ಪರಿಹಾರ ನೀಡಬೇಕು ಎಂದು ಹೊಸದಾಗಿ ನಿರ್ದೇಶನ ಇದ್ದು ಮತ್ತು ಇವಾಗ ಬಂದಿರುವ ಹೊಸ ಸರ್ಕಾರದ ಮಾನದಂಡಗಳನ್ನು ಪರಿಗಣಿಸಿ ಅದಕ್ಕೆ ಪೂರಕವಾದ ದರವನ್ನು ನಿಗದಿ ಪಡಿಸಿ ಪರಿಹಾರವನ್ನು ಜಮೀನನ್ನು ನೀಡಿರುವ ರೈತರಿಗೆ ಯಾವುದೇ ರೀತಿಯ ದರದಲ್ಲಿ ಅನ್ಯಾಯ ಆಗದಂತೆ ನೀಡುವುದಾಗಿ ಸಭೆಯಲ್ಲಿ ಮಮತಾ ಹೊಸಗೌಡರ್ ರೈತರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಲೋಕೋಪ ಯೋಗಿ ಇಲಾಖೆಯ ಎಇಇ ಶ್ರೀಧರ, ಆನಂದ್, ಆರ್.ವಿ. ಬಲರಾಮ ಶೆಟ್ಟಿ, ಆರ್.ವಿ. ಲಕ್ಷ್ಮೀ ನಾರಾಯಣ ಶೆಟ್ಟಿ, ಆರ್.ವಿ. ನಟರಾಜ್ ಶೆಟ್ಟಿ, ಆರ್.ವಿ. ವಿಶ್ವನಾಥ್ ಶೆಟ್ಟಿ, ಆರ್.ವಿ. ಸುರೇಶ್, ದಿನೇಶ್ ಕುಮಾರ್ ದಿಟೂರು ಇತರರು ಹಾಜರಿದ್ದರು.