ಬೀದಿಗಿಳಿದ ಜೆಜೆಎಂ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು
ದಾವಣಗೆರೆ, ಅ.1- ಕಳೆದ 5 ತಿಂಗಳಿಂದ ಶಿಷ್ಯ ವೇತನ ನೀಡದ ಸರ್ಕಾರ ಹಾಗೂ ಆಡಳಿತ ಮಂಡಳಿ ನಿರ್ಲಕ್ಷ್ಯ ಧೋರಣೆ ಖಂಡಿಸಿ ಜೆಜೆಎಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ನಗರದಲ್ಲಿ ಪುನಃ ಬೀದಿ ಳಿದು ಹೋರಾಡುವ ಮುಖೇನ ಆಕ್ರೋಶ ಹೊರಹಾಕಿದ್ದಾರೆ.
ಜಯದೇವ ವೃತ್ತದಲ್ಲಿ ಸರ್ಕಾರ, ಆಡಳಿತ ಮಂಡಳಿ ವಿರುದ್ದ ಜಿಲ್ಲಾಸ್ಪತ್ರೆಯಲ್ಲಿ ಗೃಹ ವೈದ್ಯರಾಗಿ ಕೆಲಸ ಮಾಡುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನಾ ಧರಣಿ ನಡೆಸಿದರು. ಸರ್ಕಾರಿ ಕೋಟಾದಲ್ಲಿ ದಾಖಲಾಗಿದ್ದ ನಮಗೆ 5 ತಿಂಗಳಿಂದ ಶಿಷ್ಯ ವೇತನ ನೀಡುತ್ತಿಲ್ಲ. ಸರ್ಕಾರ ನಿಗದಿತ ಕ್ಲಿನಿಕಲ್ ಶುಲ್ಕವನ್ನು ಪಾವತಿಸುತ್ತಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಶಿಷ್ಯ ವೇತನವನ್ನು ಸರ್ಕಾರವೇ ನೀಡಲಿ ಎಂದು ವಾದಿ ಸುತ್ತಿದೆ. ಇದರಿಂದ ನಾವುಗಳು ಅತಂತ್ರರಾಗಿದ್ದೇವೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಅಳಲಿಟ್ಟರು. ಶಿಷ್ಯ ವೇತನವನ್ನು ಸರ್ಕಾರವೇ ನೀಡಲಿ ಎಂದು ಕಾಲೇಜು ಆಡಳಿತ ಮಂಡಳಿ ಹೇಳಿದರೆ, ಕಾಲೇಜು ಅಡಳಿತ ಮಂಡಳಿಯೇ ಶಿಷ್ಯ ವೇತನ ನೀಡಲಿ ಎಂದು ಸರ್ಕಾರ ತಿಳಿಸಿದೆ. ಈ ಇಬ್ಬರ ನಡುವೆ ಸಿಲುಕಿ ರುವ ವೈದ್ಯಕೀಯ ವಿದ್ಯಾರ್ಥಿಗಳು ಅಡ್ಡ ಕತ್ತರಿಯಲ್ಲಿ ಸಿಲುಕಿ ಹಾಕಿಕೊಂಡಂತಾಗಿದೆ ಎಂದು ಸರ್ಕಾರ ಹಾಗೂ ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ಸರ್ಕಾರ ಹಾಗೂ ಕಾಲೇಜು ಆಡಳಿತ ಮಂಡಳಿ ಪರಸ್ಪರ ಮಾತುಕತೆ ನಡೆಸಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ನೀಡಬೇಕಾಗಿರುವ ಬಾಕಿ ಶಿಷ್ಯ ವೇತನ ಕೊಡಿಸಬೇಕು. ಇಲ್ಲವಾದಲ್ಲಿ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಗುರುವಾರ ರಾತ್ರಿಯೂ ಜಿಲ್ಲಾಸ್ಪತ್ರೆ ಮುಂಭಾಗ ದಲ್ಲಿ ಮುಂಬತ್ತಿ ಬೆಳಕು ಚೆಲ್ಲಿ ಪ್ರತಿಭಟನೆ ನಡೆಸಿದ ವೈದ್ಯಕೀಯ ವಿದ್ಯಾರ್ಥಿಗಳು ಸರ್ಕಾರ ಹಾಗೂ ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.